ಚನ್ನಪಟ್ಟಣ ತಾಲೂಕಿನಲ್ಲಿ ಮಂಗಳವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಸಹ ನೆರೆಹಾವಳಿ ಮುಂದುವರಿದ್ದು, ಕೆರೆಗಳು ಕೋಡಿ ಬಿದ್ದ ಪರಿಣಾಮ, ಕೊಂಡಾಪುರ, ಹುಣಸನಹಳ್ಳಿ, ಎಸ್‌.ಎಂ.ಹಳ್ಳಿ, ಕೆ.ಜಿ.ಮಹಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೆರೆ ಕೋಡಿ ಬಿದ್ದ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ.

ರಾಮನಗರ(ಆ.31):  ಹಿಂದೆಂದೂ ಕಾಣದ ಜಲ​ಪ್ರ​ಳ​ಯ​ದಿಂದ ಕಂಗಾ​ಲಾ​ಗಿದ್ದ ಬಯಲುಸೀಮೆ ಜಿಲ್ಲೆ ರಾಮ​ನ​ಗ​ರ​ - ಚನ್ನ​ಪ​ಟ್ಟಣ ಅವಳಿ ನಗ​ರ​ಗ​ಳಲ್ಲಿ ವರು​ಣನ ಅಬ್ಬರ ತಗ್ಗಿದ್ದರೂ ಪರಿಸ್ಥಿತಿ ಗಂಭೀರವಾಗಿದೆ. ನಗರ ಮತ್ತು ಹಳ್ಳಿ​ಗ​ಳಲ್ಲಿ ತಗ್ಗು ಪ್ರದೇ​ಶ​ದ​ಲ್ಲಿದ್ದ ಬಹು​ತೇಕ ಮನೆ​ಗ​ಳು ಹಾನಿ​ಗೊಂಡಿದ್ದು, ವಾಸಿ​ಸಲು ಯೋಗ್ಯ​ವಾ​ಗಿಲ್ಲ. ವಸತಿ ಸ್ಥಳಗಳಲ್ಲಿ ಕೆಸರು, ಕೊಳೆ, ತ್ಯಾಜ್ಯತುಂಬಿಕೊಂಡಿದ್ದು, ಬಹುತೇಕ ಕಡೆ ಮನೆಯೊಳಗಿದ್ದ ವಸ್ತು ನೀರಿನಲ್ಲಿ ಕೊಚ್ಚಿಹೋಗಿವೆ. ಕಣ್ಣು ಹಾಯಿಸಿದ ಕಡೆಯೆಲ್ಲ ಅವಶೇಷಗಳೇ ಕಾಣಿಸುತ್ತಿವೆ.

7 ಕಾಳಜಿ ಕೇಂದ್ರ-925 ನಿರಾ​ಶ್ರಿ​ತರು:

ಜಿಲ್ಲಾಡಳಿತದ ಮಾಹಿತಿ ಪ್ರಕಾರ 2 ತಾಲೂಕುಗಳಲ್ಲಿ 7 ಕಾಳಜಿ ಕೇಂದ್ರ ಕೇಂದ್ರಗಳನ್ನು ತೆರೆಯಲಾಗಿದ್ದು 925 ಜನರು ನಿರಾಶ್ರಿತರಾಗಿದ್ದಾರೆ. ರಾಮನಗರದ ಟಿಪ್ಪು ನಗರ, ಅರ್ಕೇಶ್ವರ ಬಡಾವಣೆ, ಚನ್ನ​ಪ​ಟ್ಟ​ಣದ ಬೀಡಿ ಕಾಲೋನಿ, ತಿಟ್ಟಮಾರನಹಳ್ಳಿ ಹೀಗೆ ನೂರಾರು ಬಡಾವಣೆ, ಗ್ರಾಮಗಳ ನಿವಾಸಿಗಳು ಬದುಕು ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, ಕೆರೆ ಏರಿ ಹೊಡೆಯುವ ಆಂತಕದಲ್ಲಿರುವ ಮೇಗಳದೊಡ್ಡಿ, ಬೋಳಪ್ಪನಕೆರೆ ಏರಿಯ ಸುತ್ತಲಿನ ಗ್ರಾಮಸ್ಥರು ಅಭದ್ರತೆಯ ಸುಳಿಯಲ್ಲಿದ್ದಾರೆ.

ಪ್ರವಾಹ: ಬೆಂಗಳೂರು-ಮೈಸೂರು ಹೆದ್ದಾರಿ ಪ್ಲಾನ್‌ ಮಾಡಿದವನಿಗೆ ಪ್ರಶಸ್ತಿ ಕೊಡಿ, ಡಿಕೆಶಿ

ಮಳೆ ನಿಂತರೂ ಜಲದಿಗ್ಬಂಧನ:

ಚನ್ನಪಟ್ಟಣ ತಾಲೂಕಿನಲ್ಲಿ ಮಂಗಳವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಸಹ ನೆರೆಹಾವಳಿ ಮುಂದುವರಿದ್ದು, ಕೆರೆಗಳು ಕೋಡಿ ಬಿದ್ದ ಪರಿಣಾಮ, ಕೊಂಡಾಪುರ, ಹುಣಸನಹಳ್ಳಿ, ಎಸ್‌.ಎಂ.ಹಳ್ಳಿ, ಕೆ.ಜಿ.ಮಹಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೆರೆ ಕೋಡಿ ಬಿದ್ದ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ. ಕೊಂಡಾಪುರ ಗ್ರಾಮದಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರೆ, ಎಸ್‌.ಎಂ.ಹಳ್ಳಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರುನುಗ್ಗಿ ಹಾನಿಯಾಗಿದೆ. ಕೆ.ಜಿ.ಮಹಡಿ ಗ್ರಾಮದಲ್ಲಿ ಸಹ 8 ಮನೆ, ಹುಣಸನಹಳ್ಳಿ ಗ್ರಾಮದಲ್ಲಿ 30ಕ್ಕೂ ಹೆಚ್ಚುಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ಜನ ಪರದಾಡುವಂತಾಗಿದೆ.

ವಾಹನ ಓಡಾಡೋಕೆ ರಸ್ತೆ ಮಾಡಿ ಅಂದ್ರೆ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿದ್ದಾರೆ: ಪ್ರತಾಪ್ ಸಿಂಹ ವಿರುದ್ಧ ಎಚ್‌ಡಿಕೆ ಕಿಡಿ

14 ಶಾಲೆಗಳು ಜಲಾವೃತ:

ತಾಲೂಕಿನ ನೀಲಸಂದ್ರ, ಎಸ್‌.ಎಂ.ಹಳ್ಳಿ, ಬೀಡಿಕಾಲೋನಿ ಸೇರಿದಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶ ಸೇರಿದಂತೆ 14 ಶಾಲೆಗಳಿಗೆ ನೀರುನುಗ್ಗಿದ್ದು, ಜಲಾವೃತವಾಗಿವೆ. ಕೆಲ ಶಾಲೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ನೀರು ನಿಂತಿದ್ದು, ಶಾಲಾಕಟ್ಟಡಗಳಿಗೂ ಅಪಾಯ ಎದುರಾಗಿದೆ.

ಹಾನಿಪೀಡಿತ ಪ್ರದೇಶಗಳಿಗೆ ಡಿಕೆಶಿ ಭೇಟಿ

ಮಳೆ​ಯಿಂದ ಚನ್ನ​ಪಟ್ಟಣ ಹಾಗೂ ರಾಮ​ನ​ಗರ ತಾಲೂ​ಕಿ​ನಲ್ಲಿ ಹಾನಿ​ಗೊ​ಳ​ಗಾ​ಗಿದ್ದ ಪ್ರದೇ​ಶ​ಗ​ಳಿಗೆ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಮಂಗ​ಳ​ವಾರ ಭೇಟಿ ನೀಡಿ ಸಂತ್ರ​ಸ್ತರ ಅಳಲು ಆಲಿಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ರೀತಿಯ ಮಳೆಯನ್ನು ಎಂದೂ ಕಂಡಿರಲಿಲ್ಲ. ನಾನು ಚಿಕ್ಕವನಿದ್ದಾಗ ರಾಮಕೃಷ್ಣ ಹೆಗಡೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಈ ಪರಿಸ್ಥಿತಿಯನು ಕಂಡಿದ್ದೆನೆ ಹೊರತು ಮತ್ತೆಂದು ಇಂಥ ಪರಿಸ್ಥಿತಿ ಕಂಡಿರಲಿಲ್ಲ. ಆದ್ದರಿಂದ ಸರ್ಕಾರ ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.