Kambala: ಕಂಬಳಕ್ಕಿದ್ದ ಕಾನೂನು ತೊಡಕು ನಿವಾರಣೆ; ಕರಾವಳಿಗಳಲ್ಲಿ ಹರ್ಷ

ಕರಾವಳಿಯ ಕೃಷಿಕರ ಕ್ರೀಡೆ ಕಂಬಳಕ್ಕೆ ಕವಿದಿದ್ದ ಕಾರ್ಮೋಡವೊಂದು ಕವಿದಿದೆ. ಕಂಬಳದ ವಿರುದ್ಧ ನೀಡಲಾಗಿದ್ದ ತಡೆಯಾಜ್ಞೆಯ ವಿಚಾರವಾಗಿ, ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಸಾಂವಿಧಾನಿಕ ಪೀಠವು ಎತ್ತಿಹಿಡಿದಿದೆ

Relief of legal problems for kambala karavali peoples are happy rav

ಉಡುಪಿ (ಮೇ.22) : ಕರಾವಳಿಯ ಕೃಷಿಕರ ಕ್ರೀಡೆ ಕಂಬಳಕ್ಕೆ ಕವಿದಿದ್ದ ಕಾರ್ಮೋಡವೊಂದು ಕವಿದಿದೆ. ಕಂಬಳದ ವಿರುದ್ಧ ನೀಡಲಾಗಿದ್ದ ತಡೆಯಾಜ್ಞೆಯ ವಿಚಾರವಾಗಿ, ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಸಾಂವಿಧಾನಿಕ ಪೀಠವು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಂಬಳ ಮತ್ತು ಎತ್ತಿನ ಬಂಡಿ ಓಟವನ್ನು ಅನುಮತಿಸುವ ಕಾನೂನನ್ನು ಎತ್ತಿಹಿಡಿದಿದೆ. ಈ ಮೂಲಕ ಕರಾವಳಿ ಕರ್ನಾಟಕದ ಕ್ರೀಡೆ ಕಂಬಳ ಆಯೋಜನೆಗೆ ಇದ್ದ ಆತಂಕ ದೂರವಾಗಿದೆ. ಮುಂದಿನ ಋತುವಿನಲ್ಲಿ ನಿರಾತಂಕವಾಗಿ ಕಂಬಳ ನಡೆಯಲಿದೆ

ಕರಾವಳಿ(the coast)ಯ ಅವಳಿ ಜಿಲ್ಲೆಗಳಾದ ಉಡುಪಿ ಮತ್ತು ಮಂಗಳೂರಿ(Udupi Mangaluru)ನಲ್ಲಿ ಕಂಬಳ(Kambala) ಎಂದರೆ ವಿಶೇಷ ಗೌರವವಿದೆ. ಕೃಷಿಕರು ತಮ್ಮ ಕೃಷಿ ಕೆಲಸಗಳ ಬಿಡುವಿನ ನಡುವೆ ಕೋಣಗಳನ್ನ ಓಡಿಸುವ ಮೂಲಕ ಮನೋರಂಜನೆಗಾಗಿ ಕ್ರೀಡೆಯ ರೂಪದಲ್ಲಿ ಕಂಬಳವನ್ನು ಆಯೋಜಿಸಲಾಗುತ್ತಿತ್ತು. ಆದರೆ ಕಂಬಳ ಸ್ಪರ್ಧೆಯಲ್ಲಿ ಕೋಣಗಳಿಗೆ, ಓಡಿಸುವಾತ ಹೊಡೆಯುವ ಏಟುಗಳಿಂದ ಪ್ರಾಣಿ ಹಿಂಸೆಯಾಗುತ್ತಿದೆ ಎನ್ನುವ‌ ಕೂಗು ಕೇಳಿ ಬಂದಿತ್ತು. 

Udupi: ಮೂಲ್ಕಿ ಸೀಮೆ ಅರಸು ಕಂಬಳ, ಒಟ್ಟು 150 ಜೊತೆ ಕೋಣ ಭಾಗಿ

ಹೀಗಾಗಿ ಪ್ರಾಣಿ ದಯಾ ಸಂಘ(Animal Kindness Society)ದವರು ಕಂಬಳವನ್ನು ಬ್ಯಾನ್(Kambala ban) ಮಾಡುವ ಮೂಲಕ ಮೂಕ ಪ್ರಾಣಿಗಳಿಗೆ ಆಗುವ ಹಿಂಸೆಯಿಂದ ಮುಕ್ತಿ ನೀಡುವಂತೆ ಕೋರ್ಟ್ ಗೆ ತೆರಳಿದ್ದರು. ಇದಾದ ಬಳಿಕ ಕೇವಲ ಸಾಂಪ್ರದಾಯಿಕವಾಗಿ ಅಚರಣೆಗಷ್ಟೆ ಸೀಮಿತವಾದ ಕಂಬಳಗಳಿಗೆ ಮಾತ್ರ ಕಳೆದ ಬಾರಿ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. 

ಈ ಹಿನ್ನಲೆಯಲ್ಲಿ ಬಹುತೇಕ ಸಾಂಪ್ರದಾಯಿಕ‌ ಕಂಬಳ ಹೊರತುಪಡಿಸಿ ಎಲ್ಲಾ ಕಂಬಳಗಳು ನಿಂತಿದ್ದವು. ಸದ್ಯ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ ಎಂದರೆ ತಪ್ಪಾಗಲಾರದು.

ತಮಿಳುನಾಡಿನಲ್ಲಿ ಜನಪ್ರಿಯವಾಗಿರುವ ಜಲ್ಲಿಕಟ್ಟುವಿನಲ್ಲಿ ಪ್ರಾಣಿಗಳ ಹಕ್ಕುಗಳು ಹಾಗೂ ಕ್ರೌರ್ಯ ತಡೆ (ಪಿಸಿಎ) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು 2014ರ ಮೇನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದಾದ ಬಳಿಕ ಕಂಬಳಕ್ಕೂ ತೊಡಕು ಉಂಟಾಗಿತ್ತು. ಬಳಿಕ ಕಾನೂನು ಸಮರಗಳು ನಡೆದಿದ್ದು, ಕಂಬಳ ಆಚರಣೆಗೆ ಸರ್ಕಾರ ಸುಗ್ರಿವಾಜ್ಞೆ ತಂದು ಅದಕ್ಕೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದರು. 

ಬಳಿಕ ಹಲವು ನಿಯಮಗಳಡಿಯಲ್ಲಿ ಕಂಬಳ ಕ್ರೀಡೆ ನಡೆಯುತ್ತಿತ್ತು. 24 ಗಂಟೆಯೊಳಗೆ ಕಂಬಳ ಮುಗಿಯಬೇಕು, ಓಟ ಸಮಯ ಹೊರತಾಗಿ ಬೇರೆ ಸಂದರ್ಭದಲ್ಲಿ ಕೋಣಗಳಿಗೆ ಹೊಡೆಯವಂತಿಲ್ಲ ಇತ್ಯಾದಿ ನಿಯಮಗಳನ್ನು ರೂಪಿಸಲಾಗಿತ್ತು. ಸದ್ಯ ಸುಪ್ರೀಂ ಕೋರ್ಟ್ ಜಿಲ್ಲಾಧಿಕಾರಿಗಳಿಗೆ ನಿಯಮ ಪಾಲನೆ ಅನುಷ್ಠಾನದ ಜವಾಬ್ದಾರಿ ನೀಡಿದ್ದು ಕಂಬಳ‌ ಆಯೋಜಕರಿಗೆ ನೆಮ್ಮದಿ ತಂದಿದೆ. 

 

ಕೊಡಮಣಿತ್ತಾಯ ಕಂಬಳದಲ್ಲಿ ತುಳುನಾಡ ದೈವಾರಾಧನೆ

ಒಟ್ಟಾರೆಯಾಗಿ ಕಂಬಳ ಮೇಲಿನ ನಿಷೇಧದ ತೆರವು ಆಯಜಕರು ಕಂಬಳ ಅಭಿಮಾನಿಗಳಿಗೆ ಸಂತಸ ತಂದಿದೆ. ಹೊಸ ನಿಯಮಗಳೊಂದಿಗೆ ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಇನ್ನು ಮುಂದೆ ಕಂಬಳಗಳು ನಡೆಯಲಿದೆ. ಇದು ಸಂಘಟಿತ ಹೋರಾಟಕ್ಕೆ ಸಂದ ಜಯ ಎನ್ನುವುದು ಕಂಬಳಪ್ರಿಯರ ಅಭಿಪ್ರಾಯವಾಗಿದೆ.

Latest Videos
Follow Us:
Download App:
  • android
  • ios