Chikkodi: ಕಾರ್ಖಾನೆಯಿಂದ ಕೆರೆಗೆ ಫ್ಯಾಕ್ಟರಿ ತ್ಯಾಜ್ಯ ಬಿಡುಗಡೆ: ಜನ ಜಾನುವಾರುಗಳಿಗೆ ಸಮಸ್ಯೆ

ಗ್ರಾಮದ ಪಕ್ಕದಲ್ಲಿಯೇ ಸಕ್ಕರೆ ಕಾರ್ಖಾನೆ ಇದ್ದು, ಆ ಕಾರ್ಖಾನೆಯಿಂದ ವಿಷಯುಕ್ತ ರಾಸಾಯನಿಕ ನೀರನ್ನು ಕೆರೆಗೆ ಹರಿ ಬಿಡುತ್ತಿರುವ ಪರಿಣಾಮ ನೀರು ಕಲುಷಿತ ಆಗಿರುವುದಲ್ಲದೆ ಆ ವಿಷಯುಕ್ತ ನೀರು ಪಕ್ಕದಲ್ಲೆ ಇರುವ ಜಮೀನು ಹಾಗೂ ಬಾವಿ ಬೋರ್‌ವೆಲ್‌ಗೂ ಸೇರಿ ಪರಿಸರ ಹದಗೆಡುವುದರ ಜೊತೆಗೆ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

release of toxic waste from the sugar factory in chikkodi district gvd

ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್.

ಚಿಕ್ಕೋಡಿ (ಏ.29): ಅಲ್ಲಿ ಎರಡು ಗ್ರಾಮದ ಜನರು ಕುಡಿಯಲು ದಿನ ಬಳಕೆಗೆ ಸೇರಿದಂತೆ ಸಾಕು ಪ್ರಾಣಿಗಳಿಗಾಗಿ ಆ ಗ್ರಾಮದ ಕೆರೆಯ ನೀರನ್ನು ನಂಬಿಕೊಂಡು ಜೀವನ ನಡೆಸುತ್ತಾರೆ. ಆದರೆ ಆ ಗ್ರಾಮದ ಪಕ್ಕದಲ್ಲಿಯೇ ಸಕ್ಕರೆ ಕಾರ್ಖಾನೆ ಇದ್ದು, ಆ ಕಾರ್ಖಾನೆಯಿಂದ ವಿಷಯುಕ್ತ ರಾಸಾಯನಿಕ ನೀರನ್ನು ಕೆರೆಗೆ ಹರಿ ಬಿಡುತ್ತಿರುವ ಪರಿಣಾಮ ನೀರು ಕಲುಷಿತ ಆಗಿರುವುದಲ್ಲದೆ ಆ ವಿಷಯುಕ್ತ ನೀರು ಪಕ್ಕದಲ್ಲೆ ಇರುವ ಜಮೀನು ಹಾಗೂ ಬಾವಿ ಬೋರ್‌ವೆಲ್‌ಗೂ ಸೇರಿ ಪರಿಸರ ಹದಗೆಡುವುದರ ಜೊತೆಗೆ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಸಕ್ಕರೆ ಕಾರ್ಖಾನೆಯಿಂದ ಮೊಲಾಸಿಸ್ ಹರಿ ಬಿಡುತ್ತಿರುವ ಕಾರ್ಖಾನೆ ಆಡಳಿತ ಮಂಡಳಿ. ಕೆರೆಗೆ ತ್ಯಾಜ್ಯ ಮೊಲಾಸಿಸ್ ಬಿಡುವುದರಿಂದ ಜನ ಜಾನುವಾರುಗಳಿಗೆ ಸಮಸ್ಯೆ. ಬಂದ್ ಮಾಡುವಂತೆ ಸ್ಥಳೀಯರು ಆಗ್ರಹ ಮಾಡಿದರು ಕ್ಯಾರೆ ಅನ್ನದ ಆಡಳಿತ ಮಂಡಳಿ. ಮೊಲಾಸಿಸ್ ಹರಿ ಬಿಡದಂತೆ ಕಾರ್ಖಾನೆ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಗ್ರಾಮಸ್ಥರು. ಹೌದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದ ಹೊರವಲಯದಲ್ಲಿ ಅರಿಹಂತ ಶುಗರ್ ಇಂಡಸ್ಟ್ರೀಸ್ ಎದುರಿನ ಸಕ್ಕರೆ ಕಾರ್ಖಾನೆ ಇದ್ದು ಈ ಸಕ್ಕರೆ ಕಾರ್ಖಾನೆಯಿಂದ ಗ್ರಾಮಸ್ಥರು ಅಕ್ಷರಸಹ ತೊಂದರೆ ಅನುಭವಿಸುತ್ತಿದ್ದಾರೆ. 

NWKRTC: ದುಡಿದ ಹಣಕ್ಕಾಗಿ ಅಲೆದಾಟ: ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ನಿವೃತ್ತ ನೌಕರರ ಆಕ್ರೋಶ

ಈ ಸಕ್ಕರೆ ಕಾರ್ಖಾನೆ ರೈತರು ಬೆಳೆದ ಕಬ್ಬು ನುರಿಸಿ ರೈತರಿಗೆ ಗ್ರಾಮದ ಜನರಿಗೆ ಅನುಕೂಲ ಆಗಬೇಕಿದ್ದ ಕಾರ್ಖಾನೆ ಆದರೆ ಈ ಕಾರ್ಖಾನೆ ಆಡಳಿತ ಮಂಡಳಿ ಬೇಜವಾಬ್ದಾರಿಯಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಸಕ್ಕರೆ ನುರಿಸಿದ ನಂತರ ಉಳಿದ ತ್ಯಾಜ್ಯ ಅಂದರೆ ಮೊಲಾಸಿಸ್ ಅನ್ನ ಫ್ಯಾಕ್ಟರಿಯ ಒಳಗಡೆಯೇ ಅದನ್ನ ನಾಶಪಡಿಸಬೇಕು ಆದರೆ ಅದನ್ನ ಬಿಟ್ಟು ಗ್ರಾಮದ ಪಕ್ಕದಲ್ಲಿರುವ ಕೆರೆಗೆ ಹರಿ ಬಿಡುತ್ತಿರುವ ಪರಿಣಾಮ ಈ ಮೊಲಾಸಿಸ್‌ಯುಕ್ತ ವಿಷ ನೀರು ಇದೀಗ ಬಾವಿ ಬೋರ್‌ವೆಲ್‌ಗಳಿಗೂ ಸೇರುತ್ತಿದ್ದು ಇದರಿಂದ ಕುಡಿಯುವ ನೀರಿಗಾಗಿ ಜೈನಾಪುರ ಹಾಗೂ ತೋರಣಹಳ್ಳಿ ಗ್ರಾಮಸ್ಥರು ಪರದಾಡುವಂತಾಗಿದ್ದು ಕಾರ್ಖಾನೆ ವಿರುದ್ಧ ಆಕ್ರೋಶ ಹೊರಹಾಕುತ್ತಿರುವುದಲ್ಲದೆ ಊರಿಗೆ ಮಾರಕವಾದ ಈ ಕಾರ್ಖಾನೆ ಬಂದ್ ಮಾಡಬೇಕು ಅಂತ ಆಗ್ರಹಿಸುತ್ತಿದ್ದಾರೆ.

ಇನ್ನೂ ಅರಿಹಂತ ಶುಗರ್ ಕಾರ್ಖಾನೆ ಹತ್ತು ವರ್ಢಗಳ ಹಿಂದೆ ಇಲ್ಲಿ ಆರಂಭಗೊಂಡಿದೆ ಕಾರ್ಖಾನೆ ಗ್ರಾಮದ ಬಳಿ ಸ್ಥಾಪನೆಯಾಗುವುದರಿಂದ ಗ್ರಾಮದಲ್ಲಿರುವ ನಿರುದ್ಯೋಗಿ ಯುವಕರಿಗೆ ಉದ್ಯೋಗವಾದರೂ ಸಿಗುತ್ತೆ ಅಂತ ಅಂದುಕೊಂಡಿದ್ರು, ಆದರೆ ಈ ಕಾರ್ಖಾನೆಯಲ್ಲಿ ಗ್ರಾಮದವರಿಗೆ ಉದ್ಯೋಗವು ಇಲ್ಲ ಇತ್ತ ಆರೋಗ್ಯವು ಇಲ್ಲ ಅಂತ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನೂ ಈಗಾಗಲೇ ಕಾರ್ಖಾನೆ ಕಬ್ಬು ನುರಿಸೊದನ್ನ ಬಂದ್ ಮಾಡಿದೆ. ಆದರೆ ಕಾರ್ಖಾನೆಯಲ್ಲಿ ಇಷ್ಟು ದಿನ ಸಂಗ್ರಹಣೆಯಾದ ಮೊಲಾಸಿಸ್ ಅನ್ನ ರಾತ್ರೋ ರಾತ್ರಿ ಹರಿಬಿಡುತ್ತಿದ್ದಾರೆ. ಇನ್ನೂ ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳುವಂತೆ ಜೈನಾಪುರ ಗ್ರಾಮ ಪಂಚಾಯತಿಂದ ನೋಟಿಸ್ ಕೂಡ ಕಳುಹಿಸಿದ್ದರು ಅದಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಕ್ಯಾರೆ ಅನ್ನುತ್ತಿಲ್ಲ.

Belagavi ಅಕ್ರಮ ಮರಳು ತೆರವಿಗೆ ಆಗ್ರಹಿಸಿದ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡನ ಜೀವ ಬೇದರಿಕೆ!

ಹೀಗಾಗಿ ಈ ಬಗ್ಗೆ ತಹಶೀಲ್ದಾರ್, ಡಿಸಿ ಸೇರಿದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೂ ಪತ್ರ ಬರೆಯಲಾಗಿದೆಯಾದರೂ ಯಾರು ಗಮನ ಹರಿಸುತ್ತಿಲ್ಲ ಅಂತ ಜೈನಾಪುರ ಪಂಚಾಯತಿ ಪಿಡಿಓ ಹೇಳುತ್ತಿದ್ದಾರೆ. ಗ್ರಾಮದಲ್ಲಿ ಶುಗರ್ ಫ್ಯಾಕ್ಟರಿ ಆಯ್ತು ಇದರಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗವಾದರು ಸಿಗುತ್ತೆ ಅಂತ ಅಂದುಕೊಂಡಿದ್ದ ಜನರಿಗೆ ಅತ್ತ ಉದ್ಯೋಗವು ಇಲ್ಲ ಇತ್ತ ಆರೋಗ್ಯವು ಇಲ್ಲದಂತಹ ದುಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಯಾವುದೋ ಕಾರ್ಖಾನೆ ತನ್ನ ಸ್ವಂತ ಲಾಭಕ್ಕೋಸ್ಕರ ಜನರ ಜೀವದ ಜೊತೆ ಚೆಲ್ಲಾಟವಾಡಿತ್ತಿದೆ. ಈ ವಿಷಯದ ಬಗ್ಗೆ ಕಂಡು ಕಾಣದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣಮೌನ ವಹಿಸಿರುವುದು ವಿಪರ್ಯಾಸ.

Latest Videos
Follow Us:
Download App:
  • android
  • ios