NWKRTC: ದುಡಿದ ಹಣಕ್ಕಾಗಿ ಅಲೆದಾಟ: ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ನಿವೃತ್ತ ನೌಕರರ ಆಕ್ರೋಶ

*  214 ನಿವೃತ್ತ ಸಾರಿಗೆ ಇಲಾಖೆಯ ನೌಕರರ ಪರದಾಟ
*  27 ಕೋಟಿ ರೂ. ಗ್ರಾಜುಟಿ ಮತ್ತು ಇನ್ ಕ್ಯಾಶ್ ಹಣ ನೀಡಬೇಕಿದೆ
*  ಪ್ರತಿಭಟನೆಯೇ ಪರಿಹಾರವಲ್ಲ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡ್ತೇವೆ 
 

NWKRTC Retired Employees Outrage Against Irresponsible Officers in Chikkodi grg

ವರದಿ: ಮುಷ್ತಾಕ್ ಪೀರಜಾದೇ ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಚಿಕ್ಕೋಡಿ

ಚಿಕ್ಕೋಡಿ(ಏ.28):  ಯಾವುದೇ ನೌಕರ ತಾನು ಮಾಡ್ತಿದ್ದ ಕೆಲಸದಿಂದ ನಿವೃತ್ತಿಯಾದ ಮೇಲೆ ಇಲಾಖೆಯಿಂದ ಅಥವಾ ಸಂಸ್ಥೆಯಿಂದ ತನಗೆ ಬರುವ ಹಣದ ಮೇಲೆ ಆಸೆ ಇಟ್ಕೊಂಡು ಮನೆ ಮಕ್ಕಳ ಮದುವೆ ಅಂತ ಪ್ಲಾನ್ ಮಾಡಿಕೊಂಡಿರ್ತಾರೆ. ಹೀಗೆ ನೌಕರಿಯಿಂದ ನಿವೃತ್ತಿ ಹೊಂದಿದ 214 ಜನ ನೌಕರರಿಗೆ ಒಂದು ಇಲಾಖೆ ತನ್ನ ನೌಕರಿಗೆ ಗ್ರಾಜುಟಿ ಮತ್ತು ಇನ್ ಕ್ಯಾಶಮೆಂಟ್ ನೀಡದೆ ಸತಾಯಿಸ್ತಿದೆ. 

214 ನಿವೃತ್ತ ಸಾರಿಗೆ ಇಲಾಖೆಯ ನೌಕರರ ಪರದಾಟ

ಹೀಗೆ ಸಾರಿಗೆ(NWKRTC) ಕಚೇರಿಗೆ ಬಂದು ಆಕ್ರೋಶ ಹೊರಹಾಕ್ತಿರೋ ಈ ವ್ಯಕ್ತಿಯ ಹೆಸರು ಸಾತಪ್ಪ ಚನ್ನಪ್ಪ ಅಗಸರ್ ಅಂತ ನಿವೃತ್ತಿಯವರೆಯೂ ಸಾರಿಗೆ ಇಲಾಖೆಯಲ್ಲಿ ಚಾಲಕರಾಗಿ ಕೆಲಸ ಮಾಡಿರೋ ಸಾತಪ್ಪನಿಗೆ ಇಲಾಖೆಯಿಂದ ಬರಬೇಕಾದ ಗ್ರಾಜುಟಿ ಜಣ ಹಾಗೂ ಇನ್ ಕ್ಯಾಶ್ ಬಂದೇ ಇಲ್ಲ. ಇಲಾಖೆಯಿಂದ ಗ್ರಾಜುಟಿ ಮತ್ತು ಇನ್ ಕ್ಯಾಶ್ ಸೇರಿದಂತೆ ಸುಮಾರು 20 ಲಕ್ಷ ರೂಪಾಯಿ ಸಾತಪ್ಪ ಇಬ್ಬರಿಗೆ ಬರಬೇಕಾಗಿದ್ದು ಅದನ್ನು ಪಡೆಯಲು ಸಾತಪ್ಪ ಕಚೇರಿಗೆ ಅಲೆಯುತ್ತಿದ್ದಾರೆ.‌ ಅಧಿಕಾರಿಗಳನ್ನು ಕೇಳಿದ್ರೆ ಈಗ ಹಣವಿಲ್ಲ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಹಣ ಬಂದ ತಕ್ಷಣ ಕೊಡ್ತಿವಿ ಅಂತ ಹೇಳ್ತಿದ್ದಾರಂತೆ.‌ ಹೀಗಾಗಿ ಸಾತಪ್ಪ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ. 20 ಲಕ್ಷ ಹಣ ನೀಡಬೇಕಿದೆ. ಆದರೆ ಅಧಿಕಾರಿಗಳು ಕೇವಲ 50 ಸಾವಿರ ತೆಗೆದುಕೊಂಡು ಹೋಗಿ ಅಂತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.

NWKRTC: ವಾಯವ್ಯ ಸಾರಿಗೆಗೆ ಸರ್ಕಾರದ ಆರ್ಥಿಕ ನೆರವು ಅಗತ್ಯ

ಇದು ಕೇವಲ ಯಾರಿಗೋ ಒಬ್ಬರಿಗೆ ಸಮಸ್ಯೆ ಆಗಿದೆ ಅಂದ್ರೆ ಅದನ್ನ ತಾಂತ್ರಿಕ ದೋಷವೋ ಅಥವಾ ಇನ್ಯಾವುದೋ ಡಾಕ್ಯುಮೆಂಟ್ ಸಮಸ್ಯೆಯಿಂದ ಸಮಸ್ಯೆ ಆಗ್ತಿದೆ ಅನ್ಕೊಬಹುದು. ಆದರೆ ಚಿಕ್ಕೋಡಿ ಉಪವಿಭಾಗ(Chikkodi Subdivision) ವ್ಯಾಪ್ತಿಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದೆ ಸುಮಾರು 214 ಜನರಿಗೆ ಇಲಾಖೆಯೆ 27 ಕೋಟಿ ರೂಪಾಯಿ ಗ್ರಾಜುಟಿ ಮತ್ತು ಇನ್ ಕ್ಯಾಶ್ ಹಣವನ್ನು ನೀಡಬೇಕಿದೆ. ಈ ಬಗ್ಗೆ ಅಧಿಕೃತವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಚಿಕ್ಕೋಡಿ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಕ ಶಶಿಧರ್ ಲಾಕ್‌ಡೌನ್‌(Lockdown) ನಿಂದ ಇಲಾಖೆ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಅದಕ್ಕೆ ಪ್ರತಿಭಟನೆಯೇ ಪರಿಹಾರವಲ್ಲ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ನಾವು ಮಾಡ್ತಿವಿ ಅಂತ ಚಿಕ್ಕೋಡಿ ಸಾರಿಗೆ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ್ ಹೇಳುತ್ತಾರೆ.  

ಕೊರೋನಾ(Coronavirus) ಲಾಕ್‌ಡೌನ್ ಆದಮೇಲೆ ಎಲ್ಲರಿಗೂ ಆರ್ಥಿಕ ಸಂಕಷ್ಟವಾಗಿದ್ದೇನೋ‌ ನಿಜ. ಆದರೆ ಸುಮಾರು 40/50 ವರ್ಷಗಳಿಂದ ದುಡಿದು ನಿವೃತ್ತಿ ಹೊಂದಿದ ನಂತರದ ಕಮಿಟ್‌ಮೆಂಟ್ಸ್ ಮಾಡಿಕೊಂಡಿರುವ ನೂರಾರು ಸಾರಿಗೆ ನೌಕರರಿಗೆ ಇದು ತೊಂದರೆ ಆಗುತ್ತಿದೆ. ಈ ಬಗ್ಗೆ ಸಾರಿಗೆ ಇಲಾಖೆಯ ಸಚಿವರು ಮತ್ತು ಸರ್ಕಾರ ಗಮನಹರಿಸಿ ನಿವೃತ್ತ ನೌಕರರ ಸಮಸ್ಯೆ ಬಗೆಹರಿಸಬೇಕಿದೆ.
 

Latest Videos
Follow Us:
Download App:
  • android
  • ios