ಮಂಗಳೂರು(ಜ.10): ವಿದೇಶಕ್ಕೆ ಸಾಗಿಸಲು ಉದ್ದೇಶಿಸಲಾಗಿದ್ದ ರಕ್ತ ಚಂದನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು 2 ಕೋಟಿ ರೂಪಾಯಿ ಮೌಲ್ಯದ ರಕ್ತ ಚಂದನವನ್ನು ಮಂಗಳೂರಿನಲ್ಲಿ ಸಂಗ್ರಹಿಸಿಡಲಾಗಿತ್ತು.

ಭಾರತದಿಂದ ವಿದೇಶಕ್ಕೆ ಸಾಗಿಸಲಾಗುತ್ತಿದ್ದ 2 ಕೋಟಿ ಮೌಲ್ಯದ ರಕ್ತಚಂದನವನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಪೊಲೀಸರ ಕ್ಷಿಪ್ರ ದಾಳಿಯಿಂದ ಅಕ್ರಮವಾಗಿ ಸಾಗಣೆಯಾಗಲಿದ್ದ ರಕ್ತಚಂದನ ವಶಕ್ಕೆ ಸಿಕ್ಕಿದೆ.

ಚಾಮರಾಜನಗರ: ಭಂಗಿ ಸೇವೆಗೆ ಬೆಳೆದಿದ್ದ 101 ಕೆಜಿ ಗಾಂಜಾ ವಶ..!

ಮಂಗಳೂರಿನ ಬೈಕಂಪಾಡಿ ಬಳಿಯ ಗೋದಾಮಿನಲ್ಲಿ ರಕ್ತ ಚಂದನ ಪತ್ತೆಯಾಗಿದೆ. 2 ಕೋಟಿ ಮೌಲ್ಯದ 4 ಸಾವಿರ ಕೆ‌.ಜಿ ರಕ್ತಚಂದನ ತುಂಡು ಗೋದಾಮಿನಲ್ಲಿ ದೊರೆತಿದ್ದು, 5 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಶೇಖ್ ತಬ್ರೇಝ, ರಾಕೇಶ್ ಶೆಟ್ಟಿ, ಲೋಹಿತ್, ಫಾರೂಕ್, ಹುಸೈನ್ ಕುಂಇ ಮೋನು ಬಂಧಿತರು‌. ಮಂಗಳೂರು ನವ ಬಂದರಿನಿಂದ ವಿದೇಶಕ್ಕೆ ಸಾಗಿಸಲು ಪ್ಲಾನ್ ಮಾಡಲಾಗಿತ್ತು. ಶಿಪ್‌ ಮೂಲಕ ವಿದೇಶಕ್ಕೆ ಸಾಗಿಸಲು ಸಿದ್ಧತೆ ನಡೆಸಲಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ತಚಂದನದ ಕೋಟಿಗಟ್ಟಲೆ ಡೀಲ್ ಮಾಡುತ್ತಿದ್ದರು.

ಬೀದರ್: ಗಾಂಜಾ ಸಾಗಿಸುತ್ತಿದ್ದವರ ಬಂಧನ, 5 ಕ್ವಿಂಟಾಲ್ ಪೌಡರ್ ವಶ

ಪಣಂಬೂರು ಪೊಲೀಸರು ಮತ್ತು ರೌಡಿ ನಿಗ್ರಹದಳ ಜಂಟಿ ಕಾರ್ಯಾಚರಣೆಯಿಂದ ರಕ್ತ ಚಂದನ ಸೀಜ್ ಮಾಡಿ ವಶಕ್ಕೆ ಪಡೆಯಲಾಗಿದೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.