ಮಂಗಳೂರು/ಉಡುಪಿ (ಆ.31):  ದ.ಕ. ಜಿಲ್ಲೆಯಲ್ಲಿ ಕೋವಿಡ್‌ ಕೇಸುಗಳ ನೆಗೆತ ಒಂದೇ ಸಮನೆ ಮುಂದುವರಿಯುತ್ತಿದೆ. ವಾರಾಂತ್ಯ ಭಾನುವಾರ 334 ಪಾಸಿಟಿವ್‌ ಪ್ರಕರಣ ದಾಖಲಾಗಿದೆ. ಸಾವಿನ ಸರಣಿಯೂ ಸಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. 213 ಮಂದಿ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಿದೆ, ಭಾನುವಾರ 254 ಮಂದಿಗೆ ಸೋಂಕು ಪತ್ತೆಯಾಗಿದೆ. ಸಮಾಧಾನದ ಸಂಗತಿ ಎಂದರೇ ಸೋಂಕಿನಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಸೋಂಕಿತರಲ್ಲಿ 155 ಮಂದಿ ಪುರುಷರು ಮತ್ತು 99 ಮಂದಿ ಮಹಿಳೆಯರು, ಅವರಲ್ಲಿ 145 ಉಡುಪಿ ತಾಲೂಕು, 61 ಕುಂದಾಪುರ ತಾಲೂಕು, 40 ಕಾರ್ಕಳ ತಾಲೂಕು ಮತ್ತು 8 ಮಂದಿ ಹೊರ ಜಿಲ್ಲೆಯವರು.

ದಕ್ಷಿಣ ಕನ್ನಡ ಜಿಲ್ಲೆಯ 334 ಪಾಸಿಟಿವ್‌ ಕೇಸ್‌ಗಳ ಪೈಕಿ 68 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಕೊರೋನಾ ಬಂದಿದೆ. 138 ಮಂದಿ ಕೆಮ್ಮು, ಜ್ವರ ಪೀಡಿತರಾಗಿ ಸೋಂಕಿಗೆ ಒಳಗಾಗಿದ್ದಾರೆ. 16 ಮಂದಿಗೆ ಶ್ವಾಸಕೋಶ ಸೋಂಕಿನಿಂದ ಕೊರೋನಾ ಕಾಣಿಸಿದೆ. ಆದರೆ 112 ಮಂದಿಗೆ ಯಾರ ಸಂಪರ್ಕದಿಂದ ಕೊರೋನಾ ಬಂತು ಎಂಬುದೇ ಪತ್ತೆಯಾಗಿಲ್ಲ.

ಕೋವಿಡ್‌ ಕೇಸ್‌ನಲ್ಲಿ ಮಂಗಳೂರು ಗರಿಷ್ಠ ಸ್ಥಾನದಲ್ಲಿ ಮುಂದುವರಿದಿದೆ. ಭಾನುವಾರ ಪತ್ತೆಯಾದ ಪ್ರಕರಣಗಳಲ್ಲಿ 191 ಕೇಸ್‌ ಮಂಗಳೂರು ಮೂಲದ್ದು. 78 ಬಂಟ್ವಾಳ, ಪುತ್ತೂರು 20, ಸುಳ್ಯ 6, ಬೆಳ್ತಂಗಡಿ 20 ಹಾಗೂ ಇತರೆ ಜಿಲ್ಲೆಯ 19 ಕೇಸುಗಳು ಸೇರಿವೆ.

ದ.ಕ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಪಾಸಿಟಿವ್‌ ಕೇಸ್‌ ಸಂಖ್ಯೆ 12,443 ತಲುಪಿದೆ. ಮೃತಪಟ್ಟವರ ಸಂಖ್ಯೆ 356ಕ್ಕೆ ಏರಿಕೆಯಾಗಿದೆ. ಒಟ್ಟು 9,442 ಮಂದಿ ಡಿಸ್ಚಾಜ್‌ರ್‍ ಆಗಿದ್ದು, ಪ್ರಸಕ್ತ 2,665 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಪಂಚದ ವಿವಿಧ ದೇಶಗಳಲ್ಲಿ ಕೊರೋನಾ ಅಬ್ಬರ ಹೇಗಿದೆ?..

ಭಾನುವಾರ ಮೃತಪಟ್ಟವರಲ್ಲಿ ಮಂಗಳೂರು ಹಾಗೂ ಪುತ್ತೂರಿನ ತಲಾ ಇಬ್ಬರು ಹಾಗೂ ಇತರೆ ಜಿಲ್ಲೆಯ ಇಬ್ಬರು ಸೇರಿದ್ದಾರೆ ಎಂದು ಜಿಲ್ಲಾಡಳಿತದ ಹೆಲ್ತ್‌ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 11513 ಮಂದಿಗೆ ಸೋಂಕು ಪತ್ತೆಯಾಗಿದೆ, ಅವರಲ್ಲಿ 8798 (ಶೇ 76.41) ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಭಾನುವಾರವೂ 195 ಮಂದಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 2620 (ಶೇ 22.75) ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತಿದ್ದಾರೆ. ಇದುವರೆಗೆ ಒಟ್ಟು 95 (ಶೇ 0.82) ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಭಾರತದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ಇಟಲಿ, ಬ್ರಿಟನ್‌, ಅಮೆರಿಕ, ಬ್ರೆಜಿಲ್‌ನಲ್ಲಿ ಹೇಗಿದೆ?...

ಭಾನುವಾರ 1029 ಮಂದಿಯ ಗಂಟಲದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವರಲ್ಲಿ 790 ಮಂದಿ ಸೋಂಕಿನ ಶಂಕಿತರು, 113 ಮಂದಿ ಹಾಟ್‌ ಸ್ವಾಟ್‌ ನಿಂದ ಬಂದವರು, 99 ಮಂದಿ ಪ್ರಾಥಮಿಕ ಸೋಂಕಿತರು, 27 ಮಂದಿ ಸೋಂಕಿನ ಲಕ್ಷಣಗಳುಳ್ಳವರಾಗಿದ್ದಾರೆ. ಭಾನುವಾರ ಲಭಿಸಿದ 989 ವರದಿಗಳಲ್ಲಿ 254 (ಶೇ 25.68) ಪಾಸಿಟಿವ್‌ ಮತ್ತು 735 (ಶೇ 74.31) ನೆಗೆಟಿವ್‌ ಆಗಿವೆ, ಇನ್ನೂ 240 ವರದಿಗಳು ಬರಲು ಬಾಕಿಯಿವೆ.

ದ.ಕ.-30-08-2020

ಒಟ್ಟು ಸೋಂಕಿತರು-12,433

ಗುಣಮುಖರಾದವರು-9,442

ಮೃತಪಟ್ಟವರು-356

ಚಿಕಿತ್ಸೆ ಪಡೆಯುತ್ತಿರುವವರು-2,655