Asianet Suvarna News Asianet Suvarna News

ಪ್ರಪಂಚದ ವಿವಿಧ ದೇಶಗಳಲ್ಲಿ ಕೊರೋನಾ ಅಬ್ಬರ ಹೇಗಿದೆ?

ಇಟಲಿ, ಬ್ರಿಟನ್‌, ಅಮೆರಿಕ, ಬ್ರೆಜಿಲ್‌ನಲ್ಲಿ ಇಳಿಯುತ್ತಿದೆ ಸೋಂಕು | ಭಾರತದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ | ಕೆಲವೇ ದಿನಗಳಲ್ಲಿ ನಂ.2 ಪಟ್ಟಕ್ಕೆ ಭಾರತ

covid 19 pandemic in worldwide updates
Author
Bengaluru, First Published Aug 31, 2020, 8:53 AM IST

ನವದೆಹಲಿ (ಆ. 31): 8 ತಿಂಗಳ ಹಿಂದೆ ಕಾಣಿಸಿಕೊಂಡು ವಿಶ್ವದ ಜನಜೀವನ ಹಾಗೂ ಆರ್ಥಿಕತೆಯನ್ನೇ ಅಲ್ಲೋಲ- ಕಲ್ಲೋಲ ಮಾಡಿರುವ ಕೊರೋನಾ ವೈರಸ್‌ ಅಬ್ಬರ ಜಗತ್ತಿನ ಹಲವು ದೇಶಗಳಲ್ಲಿ ಕೊಂಚ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಕೊರೋನಾ ಸೋಂಕು ದಾಖಲೆ ಪ್ರಮಾಣದಲ್ಲಿ ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಮೊದಲು ಕೊರೋನಾದಿಂದ ತತ್ತರಿಸಿ ಹೋಗಿದ್ದ ಇಟಲಿ, ಬ್ರಿಟನ್‌ನಂತಹ ದೇಶಗಳಲ್ಲಿ ಪರಿಸ್ಥಿತಿ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಮಾರಕ ವೈರಸ್‌ನ ಜನಕವಾದ ಚೀನಾದಲ್ಲಿ ಕಡೆಯದಾಗಿ ಸೋಂಕು ಕಾಣಿಸಿಕೊಂಡು 20 ದಿನಗಳು ಕಳೆದಿವೆ. ಮಹಾಮಾರಿ ಕೊರೋನಾ ವೈರಸ್‌ ನಿಗ್ರಹಕ್ಕೆ ಇಡೀ ವಿಶ್ವವೇ ಲಸಿಕೆಯ ನಿರೀಕ್ಷೆಯಲ್ಲಿರುವಾಗಲೇ, ಜಗತ್ತಿನ ವಿವಿಧ ಭಾಗಗಳಲ್ಲಿ ಈ ವೈರಸ್‌ ಯಾವ ರೀತಿ ಉಪಟಳ ನೀಡುತ್ತಿದೆ ಎಂಬುದರ ಚಿತ್ರಣ ಇಲ್ಲಿದೆ.

ಬೆಂಗಳೂರೇ ಆವರಿಸಿದ ಕೊರೋನಾದಿಂದ 4 ವಾರ್ಡ್‌ಗಳು ಮಾತ್ರ ಸೇಫ್!

ಇಟಲಿಯಲ್ಲಿ ತಗ್ಗಿದ್ದ ವೈರಸ್‌ ಕೊಂಚ ಏರಿಕೆ

ಸೋಂಕು: 2,66,853

ಸಾವು: 35,473

ಕೊರೋನಾ ವೈರಸ್ಸಿನ ಭೀಕರತೆ ವಿಶ್ವಕ್ಕೆ ಪರಿಚಯವಾಗಿದ್ದೇ ಇಟಲಿಯ ಮೂಲಕ. ನಿತ್ಯ ಸಾವಿರಾರು ಕೊರೋನಾ ಕೇಸ್‌ಗಳು ದೃಢಪಡುತ್ತಿದ್ದಾಗ ಸರಿಯಾದ ವೈದ್ಯಕೀಯ ಸೌಲಭ್ಯಗಳಿಲ್ಲದೆ ಇಟಲಿ ಅಕ್ಷರಶಃ ತತ್ತರಿಸಿತ್ತು. ಮಾಚ್‌ರ್‍ನಲ್ಲಿ ವಿಶ್ವದ ನಂ.1 ಕೊರೋನಾ ಹಾಟ್‌ಸ್ಪಾಟ್‌ ಆಗಿದ್ದ ಇಟಲಿ ಇದೀಗ 19ನೇ ಸ್ಥಾನಕ್ಕೆ ಇಳಿದಿದೆ. ಇಟಲಿಯಲ್ಲೀಗ ದೈನಂದಿನ ಕೊರೋನಾ ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಇಳಿಮುಖವಾಗಿದೆ. ಕಳೆದ ಮಾಚ್‌ರ್‍ನಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಗರಿಷ್ಠ 6,500ಕ್ಕೆ ಏರಿಕೆಯಾಗಿ ಜೂನ್‌ ತಿಂಗಳಲ್ಲಿ 200ಕ್ಕೆ ಕುಸಿತ ಕಂಡಿತ್ತು. ಆದರೆ ಆಗಸ್ಟ್‌ನಲ್ಲಿ ಮತ್ತೆ ದೈನಂದಿನ ಪ್ರಕರಣಗಳು ಏರುಗತಿಯಲ್ಲಿದ್ದು, ಆಗಸ್ಟ್‌ 29ರಂದು 1,444 ಪ್ರಕರಣಗಳು ದೃಢಪಟ್ಟಿವೆ. ಲಾಕ್‌ಡೌನ್‌ ತೆರವಾಗಿದೆ. ಈ ತಿಂಗಳು ಶಾಲೆ ಪುನಾರಂಭಕ್ಕೆ ನಿರ್ಧಾರ ಮಾಡಲಾಗಿದೆ. ವಿದ್ಯಾರ್ಥಿಗಳಿಗಾಗಿ 30 ಲಕ್ಷ ಸಿಂಗಲ್‌ ಸೀಟರ್‌ ಡೆಸ್ಕ್‌ ಖರೀದಿಗೆ ಸರ್ಕಾರ ತೀರ್ಮಾನಿಸಿದೆ. ಯುರೋಪ್‌ ದೇಶಗಳ ಪೈಕಿ ಇಟಲಿಯಲ್ಲಿ ಹೊಸ ಕೇಸು ಅತ್ಯಂತ ಕನಿಷ್ಠ ಪ್ರಮಾಣದಲ್ಲಿದೆ. ಪ್ರವಾಸೋದ್ಯಮ ಇನ್ನು ಆರಂಭವಾಗಿಲ್ಲ. ಬಾರ್‌, ರೆಸ್ಟೋರೆಂಟ್‌ ಆರಂಭಗೊಂಡಿವೆ. ಚಚ್‌ರ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದೆ. ಜಿಮ್‌, ಸ್ವಿಮ್ಮಿಂಗ್‌ಫೂಲ್‌, ಥಿಯೇಟರ್‌, ಚಿತ್ರಮಂದಿರಗಳು ಕಾರ್ಯಾರಂಭ ಮಾಡಿವೆ.

ಫ್ರಾನ್ಸ್‌ನಲ್ಲಿ ಮತ್ತೆ ಉಬ್ಬರ

ಒಟ್ಟು ಕೇಸ್‌: 2,72,530

ಒಟ್ಟು ಸಾವು: 30,602

ಫ್ರಾನ್ಸ್‌ನಲ್ಲಿ ಮಾಚ್‌ರ್‍ ಆರಂಭದಲ್ಲಿ ಮೊದಲ ಕೊರೋನಾ ಕೇಸ್‌ ಪತ್ತೆಯಾಗಿತ್ತು. ಮಾಚ್‌ರ್‍ 31ರಂದು 7,578 ಕೊರೋನಾ ಕೇಸ್‌ ದೃಢಪಡುವ ಮೂಲಕ ದೈನಂದಿನ ಗರಿಷ್ಠ ಸಂಖ್ಯೆ ದಾಖಲಾಗಿತ್ತು. ಅನಂತರ ಕಟ್ಟುನಿಟ್ಟಿನ ಲಾಕ್‌ಡೌನ್‌ ಪರಿಣಾಮ ಮೇ ವೇಳೆಗೆ ಕೊರೋನಾ ಸಂಖ್ಯೆ ಕನಿಷ್ಠ 200ಕ್ಕೆ ಇಳಿಕೆಯಾಗಿತ್ತು. ಆದರೆ ಲಾಕ್‌ಡೌನ್‌ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಶುಕ್ರವಾರ 7 ಸಾವಿರಕ್ಕೂ ಅಧಿಕ ಪ್ರಕರಣಗಳು ಕಂಡುಬಂದಿವೆ.

ಇಂದಿನಿಂದ ಯುಎಎಸ್ ಓಪನ್ ಆರಂಭ: ಖಾಲಿ ಮೈದಾನದಲ್ಲಿ ಪಂದ್ಯ

ಇನ್ನು ಏಪ್ರಿಲ್‌ ವೇಳೆಗೆ ಗರಿಷ್ಠ (1437) ತಲುಪಿದ್ದ ಸಾವಿನ ಪ್ರಮಾಣ ಕ್ರಮೇಣ ಇಳಿಕೆಯಾಗುತ್ತಿದ್ದು, ಶನಿವಾರ ಕೇವಲ 20 ಜನರು ವೈರಸ್ಸಿನಿಂದ ಮೃತಪಟ್ಟಿದ್ದಾರೆ. ಲಾಕ್‌ಡೌನ್‌ ತೆರವಾಗಿದೆ. ಶಾಲೆ ಆರಂಭಕ್ಕೆ ಸಿದ್ಧತೆ ನಡೆದಿದೆ. ಬಹುತೇಕ ಸಾಮಾನ್ಯ ಜನಜೀವನ ಸಹಜಸ್ಥಿತಿಗೆ ಬಂದಿದೆ. ವಿದೇಶಿ ಪ್ರವಾಸಿಗರ ಆಗಮನ ಇನ್ನೂ ಆರಂಭವಾಗಿಲ್ಲ. ಆದರೆ ಪ್ರವಾಸಿ ಸ್ಥಳಗಳಲ್ಲಿ ಮತ್ತೆ ಸ್ವಲ್ಪ ಪ್ರಮಾಣದಲ್ಲಿ ಚಟುವಟಿಕೆ ಆರಂಭವಾಗಿದೆ. ಬಾರ್‌, ರೆಸ್ಟೋರೆಂಟ್‌, ಬೀಚ್‌ಗಳನ್ನು ಜನ ಕಂಡುಬರುತ್ತಿದ್ದಾರೆ. ಹೈಸ್ಕೂಲ್‌ ಹೊರತು ಮತ್ತೆಲ್ಲಾ ಶಾಲಾ ಚಟುವಟಿಕೆ ಶುರುವಾಗಿದೆ. 10ಕ್ಕಿಂತ ಹೆಚ್ಚು ಜನ ಒಂದೆಡೆ ಸೇರಲು ಹಾಗೂ ಹಿರಿಯರು ಹೊರಗೆ ತೆರಳಲು ಅನುಮತಿ ನೀಡಲಾಗಿದೆ.

ಬ್ರಿಟನ್‌ ಇಳಿಮುಖ

ಒಟ್ಟು ಕೇಸ್‌: 3,32,752

ಸಾವು: 41,498

ಇನ್ನು ಕೊರೋನಾ ವೈರಸ್ಸಿನ ರುದ್ರನರ್ತನ ಕಂಡ ದೇಶಗಳಲ್ಲಿ ಒಂದಾದ ಬ್ರಿಟನ್‌ನಲ್ಲಿ ಈವರೆಗೆ 41,498 ಜನರು ಬಲಿಯಾಗಿದ್ದಾರೆ. ಏಪ್ರಿಲ್‌ನಲ್ಲಿ ಗರಿಷ್ಠ (7860)ಕ್ಕೆ ಏರಿಕೆಯಾಗಿದ್ದ ದೈನಂದಿನ ಕೊರೋನಾ ಪ್ರಕರಣಗಳ ಸಂಖ್ಯೆ ಸದ್ಯ ತೀವ್ರ ಇಳಿಮುಖ ಕಂಡಿದೆ. ಆಗಸ್ಟ್‌ 29ರಂದು 1,108 ಕೊರೋನಾ ಕೇಸ್‌ ಪತ್ತೆಯಾಗಿವೆ. ಸಾಮಾನ್ಯ ಜನಜೀವನ ಪುನಾರಂಭವಾಗಿದೆ. ಆದರೆ ಆರ್ಥಿಕತೆ ಹಲವು ದಶಕಗಳಲ್ಲೇ ಕನಿಷ್ಠ ಸ್ಥಿತಿಗೆ ತಲುಪಿದೆ. ಜಿ7 ದೇಶಗಳಲ್ಲೇ ಅತ್ಯಂತ ಆರ್ಥಿಕ ಹೊಡೆತ ತಿಂದ ದೇಶ ಬ್ರಿಟನ್‌. ಸೀಮಿತ ಪ್ರಮಾಣದ ನಿರ್ಬಂಧ ಮಾತ್ರ ಜಾರಿಯಲ್ಲಿದೆ. ದೇಶವ್ಯಾಪಿ ಲಾಕ್‌ಡೌನ್‌ ಬದಲಾಗಿ ನಿರ್ದಿಷ್ಟಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮಾಸ್ಕ್‌ ಧರಿಸಲು ಇದ್ದ ನಿಯಮ ಸಡಿಲಿಕೆ ಮಾಡಲಾಗಿದೆ. ಶಾಲೆಗಳನ್ನು ಪುನಾರಂಭಿಸಲಾಗಿದೆ.

'ದೇಶದಲ್ಲಿ ದೀಪಾವಳಿ ವೇಳೆಗೆ ಕೊರೋನಾ ನಿಯಂತ್ರಣಕ್ಕೆ'!

ಯುರೋಪ್‌ ರಾಷ್ಟ್ರಗಳಲ್ಲಿ ಶಾಲೆಗಳ ಪುನಾರಂಭ

ಯುರೋಪ್‌ನ ನಾರ್ವೆ, ಡೆನ್ಮಾರ್ಕ್ , ಪೋಲೆಂಡ್‌ ಹಾಗೂ ಫ್ರಾನ್ಸ್‌ ರಾಷ್ಟ್ರಗಳು ಶಾಲೆಗಳನ್ನು ಆರಂಭಿಸುವ ಮೂಲಕ ಮಕ್ಕಳು ಮನೆಯಿಂದ ಶಾಲೆಯತ್ತ ಮುಖ ಮಾಡುವಂತೆ ಕ್ರಮ ಕೈಗೊಂಡಿವೆ. ಡೆನ್ಮಾರ್ಕ್ನಲ್ಲಿ ಏ.27ರಿಂದಲೇ ಪ್ರಾಥಮಿಕ ಶಾಲೆಗಳನ್ನು ಪುನಾರಂಭಿಸಲಾಗಿದೆ.

ಜಪಾನ್‌ನಲ್ಲೂ ತಗ್ಗಿದೆ ಸೋಂಕು

ಇನ್ನು ಜಪಾನ್‌ನಲ್ಲಿ ಈವರೆಗೆ 66,056 ಜನರಿಗೆ ಕೊರೋನಾ ದೃಢಪಟ್ಟಿದ್ದು, 1255 ಮಂದಿ ಬಲಿಯಾಗಿದ್ದಾರೆ. ಫೆಬ್ರವರಿ ಮಧ್ಯಭಾಗದಲ್ಲಿ ಜಪಾನಿನಲ್ಲಿ ಮೊದಲ ಕೊರೋನಾ ಕೇಸ್‌ ಪತ್ತೆಯಾಗಿದ್ದು, ಮೇನಲ್ಲಿ ವೈರಸ್‌ ಬಹುತೇಕ ನಿಯಂತ್ರಣಕ್ಕೆ ಬಂದಿತ್ತು. ಆದರೆ ಜುಲೈನಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟಗೊಳ್ಳಲು ಆರಂಭವಾಗಿದ್ದು ಆಗಸ್ಟ್‌ 9ರಂದು 1,998 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಅನಂತರ ಮತ್ತೆ ಇಳಿಮುಖವಾಗಿ ಆಗಸ್ಟ್‌ 29ರಂದು 850 ಕೊರೋನಾ ಕೇಸ್‌ ಪತ್ತೆಯಾಗಿವೆ.

ಕೊರಿಯಾದಲ್ಲೂ ಇಳಿಮುಖ

ದಕ್ಷಿಣ ಕೊರಿಯಾದಲ್ಲಿ ಈವರೆಗೆ ಕೇವಲ 19,699 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 323 ಜನರು ಬಲಿಯಾಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಗರಿಷ್ಠ ಮಟ್ಟಅಂದರೆ ನಿತ್ಯ 850 ಕೇಸ್‌ ದಾಖಲಾಗುತ್ತಿದ್ದವು. ಏಪ್ರಿಲ್‌ ಮಧ್ಯಭಾಗದಿಂದ ಆಗಸ್ಟ್‌ ಆರಂಭದವರೆಗೆ ಬಹುತೇಕ ನಿಯಂತ್ರಣಕ್ಕೆ ಬಂದಿತ್ತು. ಆದರೆ ಇದೀಗ ಮತ್ತೆ ಕೊರೋನಾ ಪ್ರಕರಣಗಳಲ್ಲಿ ಕೊಂಚ ಏರಿಕೆಯಾಗಿದ್ದು ಆಗಸ್ಟ್‌ 29ರಂದು 323 ಪ್ರಕರಣಗಳು ಪತ್ತೆಯಾಗಿವೆ.

Follow Us:
Download App:
  • android
  • ios