ಉಡುಪಿ[ಜು.23]  ಉಡುಪಿ ನನಗೆ ಸ್ತ್ರೀಸಂಗವಿತ್ತು. ಹೆಣ್ಣು ಮಗಳೊಬ್ಬಳು ತಮಿಳುನಾಡಿನಲ್ಲಿ ಇದ್ದಾರೆ ಎಂಬ ಶಿರೂರು ಸ್ವಾಮೀಜಿ ಆರೋಪ ಸಾಬೀತು ಮಾಡಿದರೆ ತಕ್ಷಣವೇ ಪೀಠ ತ್ಯಾಗ ಮಾಡುತ್ತೇನೆ ಎಂದು ಪೇಜಾವರ ಸ್ವಾಮೀಜಿ ಸವಾಲು ಹಾಕಿದ್ದಾರೆ.

ಶಿರೂರು ಸ್ವಾಮೀಜಿ ಸಾವಿಗೂ ಮುನ್ನ ಮಾತನಾಡಿದ್ದ ಆಡಿಯೋವೊಂದು ಬಹಿರಂಗವಾಗಿತ್ತು. ಪೇಜಾವರ ಸ್ವಾಮೀಜಿಗೆ ತಾರುಣ್ಯದಲ್ಲಿ ಸ್ತ್ರೀಸಂಗವಿತ್ತು, ಪದ್ಮಾ ಎಂಬ ಹೆಣ್ಣು ಮಗಳು ತಮಿಳುನಾಡಿನಲ್ಲಿದ್ದಾಳೆ ಎಂದು ಶಿರೂರು ಶ್ರೀ ಭಕ್ತರೊಬ್ಬರೊಂದಿಗೆ ಮಾತನಾಡುತ್ತ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತಯೆ ಪತ್ರಿಕಾ ಹೇಳಿಕೆ ನೀಡಿರುವ ಪೇಜಾವರ ಶ್ರೀ ಸವಾಲಾಕಿದ್ದಾರೆ.

ಬಾಂಬ್ ಸಿಡಿಸಿದ ಆಡಿಯೋ ಕ್ಲಿಪ್ ನಲ್ಲಿ ಏನಿದೆ?

ಸಿಸಿಟಿವಿ ದಾಖಲೆ ನಾಪತ್ತೆ? ಶಿರೂರು ಮೂಲಮಠದಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿರುವುದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ಸ್ವಾಮೀಜಿ ಆಸ್ಪತ್ರೆ ದಾಖಲಾದ ದಿನ‌ ನಾಪತ್ತೆಯಗಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.  ಸ್ವಾಮೀಜಿ ಮೊದಲೇ ಸ್ವಾಮೀಜಿ ಡಿ ವಿ ಆರ್ ತೆಗೆದಿರಿಸಿಟ್ಟ ಸಾಧ್ಯತೆ ಇತ್ತೆ ಎಂಬುದನ್ನು ಪರಶೀಲನೆ ಮಾಡಲಾಗುತ್ತಿದೆ.  ಸ್ವಾಮೀಜಿ ನಂತರ ಮಠಕ್ಕೆ ಬಂದಿದ್ದ ವ್ಯಕ್ತಿ ಆತನೇ ಡಿವಿಆರ್ ತೆಗೆದುಕೊಂಡು ಹೋಗಿದ್ದಾನೆಯೇ ಎಂಬುದಕ್ಕೂ ಉತ್ತರ ಕಂಡುಹಿಡಿಯಲಾಗುತ್ತಿದೆ.

ಆ ಇಬ್ಬರು ಮಹಿಳೆಯರ ಕಲಹವೇ ಶಿರೂರು ಶ್ರೀಗೆ ಮುಳುವಾಯ್ತಾ..?

ಶಿರೂರು ಶ್ರೀ ಸಾವಿನ ಹಿಂದೆ ಆಪ್ತ ಮಹಿಳೆ..?

ಶಿರೂರು ಸ್ವಾಮೀಜಿಗೂ ಇತ್ತಾ ಅಕ್ರಮ ಸಂಬಂಧ?