ಬಿಜೆಪಿ ಸಾಧನೆಗಳನ್ನು ಮನೆಮನೆಗೆ ತಲುಪಿಸೋಣ : ದೇವೇಗೌಡ
ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸಕ್ಕೆ ಚಾಲನೆ ಕೊಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಹೇಳಿದರು.
ಮಾಗಡಿ : ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸಕ್ಕೆ ಚಾಲನೆ ಕೊಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಹೇಳಿದರು.
ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಬಳಿ ಬಿಜೆಪಿ ಪಕ್ಷದ ವತಿಯಿಂದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಸಾಕಷ್ಟುಬಡವರ ಪರ ಕೆಲಸ ಮಾಡಿದೆ. ಇದನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ಕೊಡಲಾಗಿದೆ ಎಂದರು.
ಪಕ್ಷದ ಕಾರ್ಯಕರ್ತರು ಪ್ರತಿ ಮನೆಗೂ ತೆರಳಿ ಬಿಜೆಪಿ ಸಾಧನೆಗಳ ಬಗ್ಗೆ ಮಾಹಿತಿ ನೀಡಿ ಮನೆಯ ಬಾಗಿಲಿಗೆ ಬಿಜೆಪಿ ಸ್ಟಿಕ್ಕರ್ ಅನ್ನು ಹಾಕುವ ಮೂಲಕ ನಮ್ಮ ಪಕ್ಷದ ಅಭಿವೃದ್ಧಿಯನ್ನು ತಿಳಿಸುತ್ತೇವೆ. ಈ ಮೂಲಕ ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸುವ ಕೆಲಸಕ್ಕೆ ಚಾಲನೆ ಕೊಟ್ಟಿದ್ದು ನಮ್ಮ ಪಕ್ಷ ಬಲಿಷ್ಠವಾಗುವ ನಿಟ್ಟಿನಲ್ಲಿ ಮನೆ ಮನೆಗೆ ನಮ್ಮ ಸಾಧನೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಇದು ಯಶಸ್ವಿಯಾಗಿ ನಡೆಯಲಿದ್ದು ನಮ್ಮ ಪಕ್ಷವು ಎಲ್ಲಾ ಸಂಘಟನೆಗೆ ಹೆಚ್ಚಿನ ಒತ್ತನ್ನು ಕೊಟ್ಟಿದೆ ಎಂದು ತಿಳಿಸಿದರು.
ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ ಮಾತನಾಡಿ, ಕಾರ್ಯಕರ್ತರ ಮೂಲಕ ಪ್ರತಿ ಮನೆಗೂ ಬಿಜೆಪಿಯ ಅಭಿವೃದ್ಧಿ ವಿಚಾರವನ್ನು ತಿಳಿಸಿ ನಮ್ಮ ಪಕ್ಷದ ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿ ಮಿಸ್ಡ್ ಕಾಲ… ಅಭಿಯಾನ ಕೂಡ ಮಾಡಲಿದ್ದು ಈ ಬಾರಿ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಬಿಜೆಪಿ ಸದಸ್ಯತ್ವ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ್ಯ ಮಾತನಾಡಿ, ಬಿಜೆಪಿ ಪಕ್ಷದ ಸದಸ್ಯತ್ವ ಕಳೆದ ಬಾರಿ 20 ಕೋಟಿ ತಲುಪಿತ್ತು ಇದು ಪ್ರಪಂಚದಲ್ಲೇ ಅತಿ ಹೆಚ್ಚು ಸದಸ್ಯತ್ವ ಹೊಂದಿದ ಪಕ್ಷ ಎಂಬ ಹೆಗ್ಗಡಕೆಗೆ ಪಾತ್ರವಾಗಿದ್ದು ಈಗ 25 ಕೋಟಿ ಸದಸ್ಯತ್ವ ಮಾಡುವ ಗುರಿಯನ್ನು ಇಟ್ಟುಕೊಂಡು ದೇಶಾದ್ಯಂತ ನಮ್ಮ ಪಕ್ಷದ ವತಿಯಿಂದ ವಿಜಯ ಸಂಕಲ್ಪ ಅಭಿಯಾನ ಮಾಡಲಾಗುತ್ತಿದೆ ಎಂದು ಹೇಳಿದರು.
ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಪುರಸಭೆ ನಾಮಿನಿ ಸದಸ್ಯ ರಾಘವೇಂದ್ರ, ಮಾರಪ್ಪ, ಭಾಸ್ಕರ್ , ದಯಾನಂದ್, ದೀಪ ಪ್ರಸಾದ್, ಕುದೂರು ಶೇಷಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಸೈಡ್ ಲೈನ್ ಮಾಡಲು ಸಾಧ್ಯವಿಲ್ಲ
ದಾವಣಗೆರೆ( ಜ.15): ಯಡಿಯೂರಪ್ಪ ಅವರನ್ನ ಸೈಡ್ ಲೈನ್ ಮಾಡಲು ಸಾದ್ಯವೇ ಇಲ್ಲ. ಸೈಡ್ ಮಾಡಿದ್ರೇ ಯಡಿಯೂರಪ್ಪನವರನ್ನು ಕೇಂದ್ರ ಬಿಜೆಪಿ ಯಲ್ಲಿ ಸಂಸದಿಯ ಮಂಡಳಿಯ ಸದಸ್ಯ ಸ್ಥಾನ ನೀಡ್ತಿದ್ದಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರವರು ಸ್ಪಷ್ಟ ಸಂದೇಶ ರವಾನಿಸಿದ್ರು. ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಮಠದಲ್ಲಿ ನಡೆಯುತ್ತಿರುವ ಹರ ಜಾತ್ರೆಯಲ್ಲಿ ಭಾಗಿಯಾದ ಬಳಿಕ ಪ್ರತಿಕ್ರಿಯಿಸಿದ ಬಿ ವೈ ವಿಜಯೇಂದ್ರ . ಬಿಎಸ್ವೈಯವರು ಕೂಡ ಸಾಕಷ್ಟು ಬಾರಿ ಹೇಳಿದ್ದಾರೆ ಅಸಮಾಧಾನದ ಪ್ರಶ್ನೇಯೆ ಇಲ್ಲ, ಯಾರು ಕೂಡ ಸೈಡ್ ಲೈನ್ ಮಾಡುಲು ಸಾಧ್ಯವಿಲ್ಲ, ಬಿವೈ ಯಡಿಯೂರಪ್ಪನವರು ಸಕ್ರಿಯವಾಗಿ ರಾಜ್ಯರಾಜಕಾರಣದಲ್ಲಿತ್ತಾರೆ. ಶಿರಾ, ಕೆಆರ್ ಪೇಟೆಗೆ ಒಂದು ತಿಂಗಳ ಮುಂಚೆ ತೆರಳಿ ಚುನಾವಣೆ ಗೆದ್ದಿದ್ದೇವೆ, ಪಕ್ಷ ಯಾವುದೇ ನಿರ್ಧಾರ ಮಾಡಿದ್ರು ಅಲ್ಲಿ ಸ್ಪರ್ಧಿಸುವೆ.ಈಗ ನಮ್ಮ ತಂದೆ ಈಗ ಆಶಿರ್ವಾದ ಮಾಡಿದ್ದಾರೆ. ಹೀಗಾಗಿ ನಾನು ಶಿಕಾರಿಪುರ ಕ್ಷೇತ್ರದಲ್ಲಿ ಓಡಾಡುತ್ತಿರುವೆ. ಯತ್ನಾಳ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ.
ಬಿಜೆಪಿಯಿಂದ ಬಿಎಸ್‌ವೈ ಕಡೆಗಣನೆ ವದಂತಿ ನಂಬಬೇಡಿ: ವಿಜಯೇಂದ್ರ
ಸ್ಯಾಂಟ್ರೋ ರವಿ ಅವರನ್ನ ರಕ್ಷಣೆ ಮಾಡುವುದಾದ್ರೆ ಅವರನ್ನು ಬಂಧನ ಮಾಡುವ ಪ್ರಶ್ನೇಯೆ ಉದ್ಭವಾಗ್ತಿರಲಿಲ್ಲ, ಸ್ಯಾಟ್ರೋ ರವಿ ಬಂಧನದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿರವರ ಆರೋಪಗಳಿಗೆ ಗೃಹ ಸಚಿವರು ಉತ್ತರ ಕೊಡುತ್ತಾರೆ ಎಂದರು ಜಾರಿಕೊಂಡರು. ಇನ್ನು ಪರಿಷತ್ ಸದಸ್ಯ ಸಿಪಿ ಯೋಗಿಶ್ವರ್ ಪಕ್ಷದ ವಿರುದ್ಧದ ಆಡಿದ ಆಡಿಯೋ ವೈರಲ್ ಕುರಿತು ಕೇಳಿದ ಪ್ರಶ್ನೆಗೆ ಬಿವೈ ವಿಜಯೇಂದ್ರ ನನ್ನ ಗಮನಕ್ಕೆ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇನ್ನು ಯತ್ನಾಳ್ ಹಾಗು ಸಿಪಿ ಯೋಗೇಶ್ವರ್ ರವರು ಪಕ್ಷದ ವಿರುದ್ಧ ಹೇಳಿಕೆ ನೀಡ್ತಿರುವುದು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಸೂಕ್ತ ಸಂಧರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತರೆ, ಇನ್ನು ಹಳ್ಳಿ ಹಕ್ಕಿ ವಿಶ್ವನಾಥ್ ರವರು ಕಾಂಗ್ರೆಸ್ ಪಕ್ಷ ಸೇರಿರುವುದರಿಂದ ಪಕ್ಷಕ್ಕೆ ನಷ್ಟ ಇಲ್ಲ, ಯಾರೋ ಒಬ್ಬಿಬರು ಪಕ್ಷ ಬಿರುಡುವುದ್ದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ.