ನೀವ್ ಹೇಳಿದ್ದೆ ನಿಜ ಆದ್ರೆ ಸಿಎಂ ಸೇರಿ ಎಲ್ಲಾ ರಾಜೀನಾಮೆ ಕೊಡ್ತೀವಿ : ಸುಮಲತಾಗೆ ಸವಾಲ್
- ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ಸವಾಲ್
- ಸವಾಲು ಹಾಕಿದ ಶಾಸಕ ರವಿಂದ್ರ ಶ್ರೀಕಂಠಯ್ಯ
- ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎನ್ನುವ ವಿಚಾರವಾಗಿ ಅಸಮಾಧಾನ
ಮಂಡ್ಯ(ಮೇ.30): KRS ಡ್ಯಾಂ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಹೇಳಿಕೆ ವಿಚಾರಕ್ಕೆ ಶ್ರೀರಂಗಪಟ್ಟಣ ಕ್ಷೇತ್ರದ JDS ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು ಹಾಕಿದ್ದಾರೆ.
"
ನಾಳೆ ಬೆಳಿಗ್ಗೆ KRSಗೆ ಬನ್ನಿ, ಎಲ್ಲಾ ಶಾಸಕರು ಬರುತ್ತೇವೆ. ಬಿರುಕು ಬಿಟ್ಟಿದ್ದರೆ ಸಾಮೂಹಿಕ ರಾಜೀನಾಮೆ ಕೊಟ್ಟು ನಿಮ್ಮ ಬೆಂಬಲಕ್ಕೆ ನಿಂತುಕೊಳ್ಳುತ್ತೇವೆ. ತಮ್ಮ ಬೇಜವಾಬ್ದಾರಿ ನಡುವಳಿಕೆ ಮುಚ್ಚಿಹಾಕಲು ಈ ರೀತಿ ಬಾಲಿಶ ಹೇಳಿಕೆ ನೀಡಬೇಡಿ ಎಂದು ಗರಂ ಆಗಿದ್ದಾರೆ.
ಡ್ಯಾಂ ನಮ್ಮ ಜೀವನಾಡಿ, ಅದಕ್ಕಿಂತ ಇನ್ನೊಂದು ವಿಚಾರ ಇದೆಯಾ..? ಕೂತಿದ್ದ ಕಡೆ, ನಿಂತಿದ್ದ ಕಡೆ ಡ್ಯಾಂ ಬಿರುಕು ಬಿಟ್ಟಿದೆ, ಒಡೆದೋಗಿದೆ ಅಂತ ಹೇಳೋದು ಸತ್ಯವಾಗಲೂ ಸರಿ ಕಾಣಲ್ಲ ಎಂದರು.
ಕೆಆರ್‌ಎಸ್ ಬಿರುಕು ಬಿಟ್ಟಿರುವ ವಿಷಯ ಸತ್ಯ : ಸುಮಲತಾ .
ಜನ ನಿಮ್ಮ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಾರೆ. ಇಂತಹ ಕ್ಷುಲ್ಲಕ ಹೇಳಿಕೆ ಕೊಡೋದು ಬೇಡ. ನೀವು ಅಪರೂಪಕ್ಕೆ ಮಂಡ್ಯಕ್ಕೆ ಬಂದು ಹೋಗ್ತೀರಿ. ನಮಗೆ ದಿನ ಬೆಳಿಗ್ಗೆ ರೈತರ ಜೊತೆ ಒಡನಾಟ ಇದೆ. KRS ಬಗ್ಗೆ ನಿಮಗಿಂತ ಜವಾಬ್ದಾರಿ ನಮಗಿದೆ. ನಾಳೆ ಬೆಳಿಗ್ಗೆಯೇ KRSಗೆ ಬನ್ನಿ, ನಾವು ಬರ್ತೀವಿ. ಎಲ್ಲಿ ಬಿರುಕು ಬಿಟ್ಟಿದೆ ತೋರಿಸಿ ಎಂದು ಶ್ರೀಕಂಠಯ್ಯ ಸವಾಲು ಹಾಕಿದರು.
ಡ್ಯಾಂ ಬಿರುಕು ಬಿಟ್ಟಿದ್ದರೆ ಸಿಎಂ, ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ರಾಜೀನಾಮೆ ನೀಡುತ್ತೇವೆ ಎಂದು ಸವಾಲು ಹಾಕಿದ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ನಿನ್ನೆಯಷ್ಟೆ KRS ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಹೇಳಿಕೆ ನಿಡಿದ್ದು, ಸುಮಲತಾ ಹೇಳಿಕೆಯಿಂದ ರೈತರು ತೀವ್ರ ಅತಂಕಗೊಂಡಿದ್ದರು.
ಲಾಕ್‌ಡೌನ್ ಮುಂದುವರೆಸುವುದು ಸೂಕ್ತ : ಇನ್ನು ಶ್ರೀರಂಗಪಟ್ಟಣದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಚೈನ್ ಬ್ರೇಕ್ ಮಾಡಲು ಲಾಕ್‌ಡೌನ್ ಮುಂದುವರೆಸುವುದು ತಪ್ಪಿಲ್ಲ. ಲಾಕ್‌ಡೌನ್ ಮುಂದುವರೆಯುವುದರಿಂದ ಆರ್ಥಿಕತೆಯಲ್ಲಿ ತೊಂದರೆಯಾಗುತ್ತದೆ. ಆರ್ಥಿಕತೆಗಿಂತ ಮುಖ್ಯವಾಗಿ ಜನರ ಪ್ರಾಣ ಮುಖ್ಯ. ಸರ್ಕಾರ ನಡೆಸುವವರ ಮೊದಲು ಜನರ ಜೀವಕ್ಕೆ ಆದ್ಯತೆ ನೀಡಬೇಕು ಎಂದರು.