ವಿಶ್ವ ಪ್ರಸಿದ್ಧ ಮಂಡ್ಯದ ಕೆಆರ್‌ಎಸ್‌ ಡ್ಯಾಂನಲ್ಲಿ ಬಿರುಕು ಬಿರುಕಿರುವುದು ಸತ್ಯ ಎಂದ ಸಂಸದೆ ಸುಮಲತಾ ಅಂಬರೀಶ್ ತನಿಖೆಗೆ ಸ್ಥಳೀಯ ರಾಜಕಾರಣ ಅಡ್ಡಿಯಾಗಿ ನಿಂತಿದೆ - ಸುಮಲತಾ

ಮಂಡ್ಯ (ಮೇ.30): ಕೆಆರ್‌ಎಸ್‌ ಸುತ್ತಮುತ್ತ ನಡೆದಿರುವ ಅಕ್ರಮ ಗಣಿಗಾರಿಕೆಯಿಂದ ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯ ಬಿರುಕು ಬಿಟ್ಟಿರುವುದು ನಿಜ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.

ಆದರೆ, ತನಿಖೆಗೆ ಸ್ಥಳೀಯ ರಾಜಕಾರಣ ಅಡ್ಡಿಯಾಗಿ ನಿಂತಿದೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಗಂಭೀರವಾಗಿ ಆರೋಪಿಸಿದ್ದಾರೆ. 

ಸ್ವಂತ ದುಡ್ಡಿನಲ್ಲಿ ಪ್ರತಿದಿನ ಆಕ್ಸಿಜನ್.. ಮಂಡ್ಯ ಸಂಸದೆ ಮಾದರಿ ಹೆಜ್ಜೆ ...

ಅಣೆಕಟ್ಟು ಬಿರುಕು ಬಿಟ್ಟಿರುವ ಬಗ್ಗೆ ನನಗೆ ಮಾಹಿತಿ ಇದೆ. ಆ ಬಗ್ಗೆ ತನಿಖೆ ನಡೆದಲ್ಲಿ ನಿಜಾಂಶ ಬಹಿರಂಗವಾಗಲಿದೆ ಎಂಬ ಕಾರಣಕ್ಕೆ ತಜ್ಞರಿಂದ ಪರಿಶೀಲನೆ ನಡೆಸಲು ಸ್ಥಳೀಯ ರಾಜಕಾರಣಿಗಳು ಅವಕಾಶ ನೀಡುತ್ತಿಲ್ಲ. 

ಸತ್ಯ ಹೊರಗೆ ಬರಬೇಕಾದರೆ ಅಣೆಕಟ್ಟೆಯ ಸುರಕ್ಷತೆ ಬಗ್ಗೆ ಸಮಗ್ರ ಪರಿಶೀಲನೆ ನಡೆಯಬೇಕು. ಅದಕ್ಕೆ ಅಡ್ಡಿಪಡಿಸಿದರೆ ವರದಿ ಎಲ್ಲಿಂದ ಬರಲು ಸಾಧ್ಯ. ಜನರಿಗೆ ವಾಸ್ತವ ತಿಳಿಯುವುದಾದರೂ ಹೇಗೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.