ಚಾಮರಾಜನಗರ(ಜ.28): ಬಯೋಮೆಟ್ರಿಕ್‌ ಮೂಲಕ ಪಡಿತರ ವಿತರಣೆಗೆ ಸರ್ವರ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಈ ತಿಂಗಳು ಪಡಿತರದಾರರು ಹೆಬ್ಬೆಟ್ಟು ಹಾಕದೆ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಸಮಸ್ಯೆ ನಿವಾರಣೆಗೆ ಆಯುಕ್ತರ ಸೂಚನೆ:

ಜ. 26ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ‘ಸರ್ವರ್‌ ಸಂಕಷ್ಟ: ಪಡಿತರಕ್ಕೆ ಜನರ ಪರದಾಟ’ ಎಂದು ವರದಿ ಪ್ರಕಟಗೊಂಡ ಬಳಿಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಆರ್‌.ರಾಚಪ್ಪ ಎಚ್ಚೆತ್ತು ಗುಂಡ್ಲುಪೇಟೆಯಲ್ಲಿ ಆನ್‌ಲೈನ್‌ ಮೂಲಕ ಪಡಿತರ ತರಿಸುವಂತೆ ನ್ಯಾಯಬೆಲೆ ಅಂಗಡಿ ತರಕರಿಗೆ ಸೂಚಿಸಿದ್ದಾರೆ.

ಮಂಡ್ಯ: ಜೋಡೆತ್ತುಗಳ ಗಾಡಿ ಓಟದ ಪುಳಕ..!

2020ರ ಜನವರಿ ಮಾಹೆಯಲ್ಲಿ ಎನ್‌ಐಸಿ ತಂತ್ರಾಂಶದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಈ ತಾಂತ್ರಿಕ ದೋಷ ಪರಿಹರಿಸಲು ಆಗದ ಕಾರಣ ಆಪ್‌ಲೈನ್‌ ಮೂಲಕ ಪಡಿತರ ವಿತರಣೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಸೂಚನೆ ಹೊರಡಿಸಿದ್ದಾರೆ.

ಬೆಳಗ್ಗೆ 7ರಿಂದ 9ರ ವರೆಗೆ:

ಆಹಾರ ಮತ್ತು ನಾಗರಿಕ ಇಲಾಖೆ ಉಪ ನಿರ್ದೇಶಕ ಆರ್‌. ರಾಚಪ್ಪ ಆಯುಕ್ತರ ಆದೇಶದಂತೆ ಆನ್‌ಲೈನ್‌ ವಿತರಿಸಲಾಗಿರುವ ಹಾಗೂ ಸದರಿ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆಗೆ ಬಾಕಿ ಇರುವ ಪಡಿತರ ಚೀಟಿದಾರರ ಇವು ಪಡೆದು ಪಡಿತರ ವಿತರಣೆಗೆ ಅವಕಾಶ ಮಾಡಿದ್ದಾರೆ. ಆಪ್‌ಲೈನ್‌ ಮೂಲಕ ಪಡಿತರ ತರಣೆಯನ್ನು ಜ. 30ರೊಳಗೆ ಪೂರ್ಣಗೊಳಿಸಬೇಕು ಹಾಗೂ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯಲ್ಲಿ ಪಡಿತರ ತರಿಸಲು ಸೂಚನೆ ಕೂಡ ಹೊರಡಿಸಿದ್ದಾರೆ.

ಇಂದಿನಿಂದ ಆರಂಭ:

ಸರ್ವರ್‌ ಸಮಸ್ಯೆಯಿಂದ ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಲ್ಲಿನ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಮುಂದೆ ಕೆಲಸ ಬಿಟ್ಟು ಕಾದು ಕುಳಿತರು ಪಡಿತರ ಸಿಗುತ್ತಿರಲಿಲ್ಲ. ಚೆಕ್‌ಲೀಸ್ಟ್‌ನ್ನು ಗುಂಡ್ಲುಪೇಟೆಯ ಆಹಾರ ಇಲಾಖೆಯಲ್ಲಿ ಪಡೆದುಕೊಂಡು ಪಡಿತರ ಚೀಟಿದಾರರ ಪಡಿತರ ಚೀಟಿಯ ನಂಬರ್‌ ಬರೆದು, ಚೀಟಿದಾರರ ಪಡೆದು ಪಡಿತರ ವಿತರಣೆ ಮಂಗಳವಾರ ಬೆಳಗ್ಗೆಯಿಂದ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಜ. 26ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿಗೆ ಎಚ್ಚೆತ್ತ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಬಯೋಮೆಟ್ರಿಕ್‌ ಇಲ್ಲದೆ ಈ ತಿಂಗಳ ಪಡಿತರ ವಿತರಣೆಗೆ ಅವಕಾಶ ನೀಡಿ ಪಡಿತರ ಚೀಟಿದಾರರಿಗೆ ಸ್ವಲ್ಪ ನೆಮ್ಮದಿ ತಂದಿದ್ದಾರೆ.

ಮೈಸೂರು ಮೇಲ್ ಮಂಜು..! ಚಿಲ್ ಎನ್ನುತ್ತಿದೆ ಸಾಂಸ್ಕೃತಿಕ ನಗರ

ಸರ್ವರ್‌ ಸಮಸ್ಯೆಯಿಂದ ಪಡಿತರ ಚೀಟಿದಾರರಿಗೆ ಪಡಿತರ ಪಡೆಯಲು ಸಾಧ್ಯವಿಲ್ಲ ಎಂದು ಮನಗಂಡು ಇಲಾಖೆಯ ಆಯುಕ್ತರು ಹೊಸ ಆದೇಶ ಹೊರಡಿಸಿದ್ದಾರೆ. ಆದೇಶದನ್ವಯ ಚೆಕ್‌ಲೀಸ್ಟ್‌ ಮೂಲಕ ಪಡಿತರ ತರಿಸುವಂತೆ ನ್ಯಾಯಬೆಲೆ ಅಂಗಡಿ ತರಕರಿಗೆ ಸೂಚನೆ ನೀಡಲಾಗಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಆರ್‌.ರಾಚಪ್ಪ ಹೇಳಿದ್ದಾರೆ.