ಮಂಡ್ಯ(ಏ.22): ಅಂತಾರಾಜ್ಯ ಪಡಿತರ ಚೀಟಿದಾರರಿಗೆ ಜಿಲ್ಲೆಯಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಿಸುವಂತೆ ಜಿಲ್ಲಾಧಿಕಾರಿಗಳು ಮಂಗಳವಾರ ಆದೇಶ ಮಾಡಿದ್ದಾರೆ.

ಕೇಂದ್ರ ಸರ್ಕಾರ ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆ ಅಡಿಯಲ್ಲಿ ಹೊರ ರಾಜ್ಯಗಳಲ್ಲಿ ವಾಸಿಸುವ ಎಲ್ಲ ಪಡಿತರ ಚೀಟಿದಾರರಿಗೆ ಮೂಲ ರಾಜ್ಯದ ಪಡಿತರ ಚೀಟಿ ಆಧಾರದ ಮೇಲೆ ನಮ್ಮ ಜಿಲ್ಲೆಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಿಸಲು ನಿರ್ಧರಿಸಲಾಗಿದೆ.

ಪ್ರತಿ ಜಿಲ್ಲೇಲಿ 2, ಮೇ ತಿಂಗಳೊಳಗೆ 60 ಕೋವಿಡ್‌ ಲ್ಯಾಬ್‌: ಸುಧಾಕರ್

ಕೋವಿಡ್‌- 19 ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾಗಿದೆ. ಸಾರ್ವಜನಿಕರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಕಷ್ಟವಾಗಿದೆ. ಹೀಗಾಗಿ ಹೊರ ರಾಜ್ಯದವರಿಗೆ ಕೂಡ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪಡಿತರ ವಿತರಣೆ ನಿಯಮಗಳು

ಕೇಂದ್ರ ಸರ್ಕಾರದ ನಿಯಮದಂತೆ ಹೊರ ರಾಜ್ಯದ ಪಡಿತರ ಚೀಟಿದಾರರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲು ಅವಕಾಶವಿಲ್ಲ. ಎನ್‌ಎಫ್‌ಎಸ್‌ಎ (ಪ್ರತಿ ಕೆಜಿಗೆ 3 ರು.)ದರ ಮತ್ತು ಪ್ರಮಾಣದಲ್ಲಿ ಪಡಿತರ ಚೀಟಿದಾರರಿಗೆ 35 ಕೆಜಿ ಹಾಗೂ ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 5 ಕೆಜಿಯಂತೆ ಅಕ್ಕಿ ಹಂಚಿಕೆ ಮಾಡಲಾಗುವುದು.

ಹೊರ ರಾಜ್ಯದ ಪಡಿತರ ಚೀಟಿದಾರರು ತಮ್ಮ ಮೂಲ ರಾಜ್ಯದಲ್ಲಿ ಪಡಿತರ ಪಡೆಯದೇ ಇದ್ದರೆ ಮಾತ್ರ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಿಗುತ್ತದೆ. ಪಡಿತರ ಚೀಟಿದಾರರ ಮೂಲ ಸ್ಥಳಗಳಲ್ಲಿ ಪಡಿತರವನ್ನು ಖರೀದಿ ಮಾಡಿದ್ದರೆ ಇಲ್ಲಿ ಲಭ್ಯವಾಗುವುದಿಲ್ಲ. ಪಡಿತರ ಪಡೆಯಲು ಪಡಿತರ ಚೀಟಿ ಅರ್ಹವಾಗಿದ್ದರೆ ಆಧಾರ್‌ ಧೃಡೀಕೃತ, ಬೆರಳಚ್ಚು ಬಯೋಮೆಟ್ರಿಕ್‌ ಅಥವಾ ಒಟಿಪಿ ಮೂಲಕ ವಿತರಿಸಲು ಆದೇಶಿಸಲಾಗಿದೆ.

'ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಅಂತವ್ರ ಕೈ-ಕಾಲು ಮುರಿಯಿರಿ'

ಕೋವಿಡ್‌ 19 ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳ ಪಡಿತರ ಸೀಮೆಎಣ್ಣೆಯನ್ನು ವಿಲ್ಲಿಂಗ್‌ ನೆಸ್‌ ನೀಡಿರುವ ಗ್ರಾಮಾಂತರ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳಿಗೆ ಒಂದು ಲೀಟರ್‌ ನಂತೆ (35 ರು.) ಎರಡು ಲೀಟರ್‌ ಸೀಮೆಎಣ್ಣೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೋನಾ ವೈರಸ್‌ ಕುರಿತು ಮಂಗಳವಾರದ ಜಿಲ್ಲಾ ವರದಿ

ಮಂಡ್ಯ ಜಿಲ್ಲೆಯಲ್ಲಿ ಸಂಗ್ರಹಿಸಲಾದ ಒಟ್ಟು ಮಾದರಿ ಸಂಖ್ಯೆ - 842

ಜಿಲ್ಲೆಯಲ್ಲಿ ಸೋಂಕಿತರು - 12

ಜಿಲ್ಲೆಯಲ್ಲಿ ನೆಗೆಟಿವ್‌ ಫಲಿತಾಂಶ ಪ್ರಕರಣಗಳು - 470

ಫಲಿತಾಂಶ ಬರಬೇಕಿರುವುದು - 360

14 ದಿನಗಳ ಹೋಂ ಕ್ವಾರಂಟೈನ್‌ ಪೂರ್ಣಗೊಳಿಸಬೇಕಾದವರು - 00

28 ದಿನಗಳ ಕಡ್ಡಾಯ ಹೋಂ ಕ್ವಾರಂಟೈನ್‌ ಪೂರ್ಣಗೊಳಿಸಬೇಕಾದವರು - 14

ಮಂಡ್ಯ ಜಿಲ್ಲಾಸ್ಪತ್ರೆಯ ಐಷುಲೇಷನ್‌ ವಾರ್ಡ್‌ನಲ್ಲಿ - 12 ಮಂದಿ

ಆಸ್ಪತ್ರೆಯ ಕ್ವಾರಂಟೈನ್‌ ವಾರ್ಡ್‌ನಲ್ಲಿ 05 ಮಂದಿ

ಹಾಸ್ಟೆಲ್‌ ಕ್ವಾರಂಟೈನ್‌ನಲ್ಲಿ ಇರುವವರು - 13

ಹೋಂ ಕ್ವಾರಂಟೈನ್‌ನಲ್ಲಿ - 2185