'ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಅಂತವ್ರ ಕೈ-ಕಾಲು ಮುರಿಯಿರಿ'

ಪಬ್ಲಿಕ್‌ನಲ್ಲೇ ನಿಂತು ಪೊಲೀಸ್ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ ಶಾಸಕ ನಡಹಳ್ಳಿ| ನನ್ನ ತಾಲೂಕಿನ ಆಶಾ ಕಾರ್ಯಕರ್ತೆ, ವೈದ್ಯರ ಮೇಲೆ ಹಲ್ಲೆ ನಡೆಸಿದ್ರೆ ಅಂತವರ ಕೈ-ಕಾಲು ಮುರಿಯಿಸಿ, ಒದ್ದು ಒಳಗೆ ಹಾಕಿ|25 ಸಾವಿರ ಬಡ ಕುಟುಂಬಗಳಿಗೆ ಪುಡ್ ಕಿಟ್ ನೀಡಿದ ಶಾಸಕ ನಡಹಳ್ಳಿ|

MLA A S Patil Nadahalli talks Over Corona Worriers

ಮುದ್ದೇಬಿಹಾಳ (ಏ.22): ನನ್ನ ತಾಲೂಕಿನ ಆಶಾ ಕಾರ್ಯಕರ್ತೆಯರು, ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಅಂತವರ ಕೈ-ಕಾಲು ಮುರಿಯಿಸಿ, ಒದ್ದು ಒಳಗೆ ಹಾಕಿ ಎಂದು ಮುದ್ದೇಬಿಹಾಳ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ. 

ಸೋಮವಾರ ಪಟ್ಟಣದಲ್ಲಿ 25 ಸಾವಿರ ಬಡ ಕುಟುಂಬಗಳಿಗೆ ಆಹಾರದ ಕಿಟ್ ನೀಡಿದ ಬಳಿಕ ಮಾತನಾಡಿದ ಅವರು,  ಕೊರೋನಾ ವಾರಿಯರ್ಸ್ ಮೇಲೆ ದಾಳಿ ಮಾಡಿದವರಿಗೆ ಕೋರ್ಟ್ ಕೂಡ ಜಾಮೀನು ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಆಶಾ ಕಾರ್ಯಕರ್ತೆಯರು, ವೈದ್ಯರನ್ನ ಭೇಟಿ ಮಾಡಿ ದೈರ್ಯ ತುಂಬಿದ್ದಾರೆ . 

ಹಸುವಿಗೆ ಇದ್ದಷ್ಟು ಬುದ್ಧಿ ಮನುಷ್ಯನಿಗೆ ಇದ್ದಿದ್ರೇ ಕೊರೋನಾ ನಮ್ಮತ್ರ ಬರ್ತಿರಲಿಲ್ವೇನೋ..?

ಶಾಸಕ ನಡಹಳ್ಳಿ ಖಡಕ್ ಆದೇಶಕ್ಕೆ ವಿಜಯಪುರ ಜಿ‌ಲ್ಲೆ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. ನಡಹಳ್ಳಿ ಓಪನ್ ಸ್ಟೇಟ್‌ಮೆಂಟ್‌ಗೆ ಜಿಲ್ಲೆಯ ಜನರು ಫುಲ್ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಟಿಕ್‌ಟಾಕ್, ವಾಟ್ಸಾಪ್ ಗಳಲ್ಲಿ ನಡಹಳ್ಳಿ ಖಡಕ್ ಡೈಲಾಗ್‌ ಭಾರೀ ವೈರಲ್ ಅಗಿದೆ.
 

Latest Videos
Follow Us:
Download App:
  • android
  • ios