ಮೈಸೂರು(ಏ.22): ಕೋವಿಡ್‌-19 ಪರೀಕ್ಷೆಗಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ತಲಾ ಎರಡು ಲ್ಯಾಬ್‌ ಸ್ಥಾಪಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಮೈಸೂರು ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪ್ರತಿನಿಧಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ, ಬಿಜಾಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲೂ ಹೆಚ್ಚಿನ ಕೊರೋನಾ ಪರೀಕ್ಷೆಗಳು ಮಾಡಬೇಕಿದೆ. ಇದಕ್ಕಾಗಿ ಲ್ಯಾಬ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಮೇ ಅಂತ್ಯದೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಲಾ ಎರಡರಂತೆ ಒಟ್ಟು 60 ಲ್ಯಾಬ್‌ ಸ್ಥಾಪಿಸಲಾಗುವುದು ಎಂದು ಹೇಳಿದರು.

ರ್ಯಾಪಿಡ್ ಟೆಸ್ಟ್‌:

ರಾರ‍ಯಪಿಡ್‌ ಕಿಟ್‌ ಟೆಸ್ಟ್‌ ಮಾಡಬೇಕೆಂಬುದು ಜನರ ತಲೆಗೆ ಹೋಗಿದೆ. ಆದರೆ, ಇದು ಸಮಾಜದಲ್ಲಿ ವ್ಯಾಪಕವಾಗಿ ಹರಡಿದರೇ ಮಾತ್ರ ಅಗತ್ಯವಿದೆ. ಈಗ ರಾಜ್ಯದಲ್ಲಿ ಮಾಡುತ್ತಿರುವ ಪರೀಕ್ಷೆ ವಿಧಾನವೇ ಸೂಕ್ತವಾಗಿದೆ. ರಾರ‍ಯಪಿಡ್‌ ಪರೀಕ್ಷೆಯಿಂದ ಮೊದಲು ನೆಗೆಟಿವ್‌ ಬಂದರೇ ನಂತರ ಪಾಸಿಟಿವ್‌ ಬರುವ ಸಾಧ್ಯಗಳು ಇರುತ್ತವೆ. ಆದರೂ, 1.20 ಲಕ್ಷ ರಾರ‍ಯಪಿಡ್‌ ಟೆಸ್ಟ್‌ ಕಿಟ್‌ಗಳನ್ನು ಖರೀದಿಸಲು ಸರ್ಕಾರದಿಂದ ಆದೇಶವಾಗಿದ್ದು, ಈಗಾಗಲ್‌ 50 ಸಾವಿರ ಕಿಟ್‌ಗಳು ಬಂದಿವೆ. ರೆಡ್‌ ಜೋನ್‌ ಇರುವ ಪ್ರದೇಶಗಳಲ್ಲಿ ಮಾತ್ರ ಈ ಪರೀಕ್ಷಾ ವಿಧಾನ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

'ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಅಂತವ್ರ ಕೈ-ಕಾಲು ಮುರಿಯಿರಿ'

ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್‌.ಎ. ರಾಮದಾಸ್‌, ಎಲ್‌. ನಾಗೇಂದ್ರ, ಬಿ. ಹರ್ಷವರ್ಧನ್‌, ಎಂ. ಅಶ್ವಿನ್‌ಕುಮಾರ್‌, ಸಿ.ಎಸ್‌. ನಿರಂಜನಕುಮಾರ್‌, ಸಂದೇಶ್‌ ನಾಗರಾಜ್‌, ಮೇಯರ್‌ ತಸ್ನಿಂ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ವಿಶೇಷಾಧಿಕಾರಿ ಹರ್ಷಗುಪ್ತ, ನಗರ ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ ಮೊದಲಾದವರು ಇದ್ದರು.

1500 ವೆಂಟಿಲೇಟರ್‌ ಖರೀದಿ

ಕೊರೋನಾ ವೈರಸ್‌ ಸೋಂಕಿತರಾಗಿರುವ ಶೇ.95 ಮಂದಿ ಐಸಿಯುಗೆ ಬರಲ್ಲ. ಶೇ.5 ರಿಂದ 10 ರಷ್ಟುಮಂದಿ ಮಾತ್ರ ಐಸಿಯುಗೆ ಬರುತ್ತಾರೆ. ಇವರಲ್ಲಿ ವೆಂಟಿಲೇಟರ್‌ಗೆ ಬರುವವರು ಶೇ.1 ಮಾತ್ರ. ವೆಂಟಿಲೇಟರ್‌ ಅಳವಡಿಸಿದರೇ ಜೀವ ಉಳಿಸುವುದು ಕಷ್ಟಸಾಧ್ಯ. ವೆಂಟಿಲೇಟರ್‌ ಅಳವಡಿಸಿದರೇ ಶೇ.30 ಮಾತ್ರ ಜೀವ ಉಳಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಟೆಲಿ ಮೆಡಿಸಿನ್‌, ಟೆಲಿ ಐಸಿಯು ವ್ಯವಸ್ಥೆ ಮಾಡಲಾಗಿದೆ ಎಂದರು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ 1500 ವೆಂಟಿಲೇಟರ್‌ ಖರೀದಿಗಾಗಿ ಆದೇಶವಾಗಿದೆ. ರಾಜ್ಯದಲ್ಲಿ ವೈದ್ಯಕೀಯ ಉಪಕರಣಗಳು, ಔಷಧ ಕೊರತೆ ಇಲ್ಲ. ಕೊರೋನಾ ಟೆಸ್ಟ್‌ನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, 63ರಲ್ಲಿ 1 ಪಾಸಿಟಿವ್‌ ಬರುತ್ತಿದೆ. ಅದೇ ರೀತಿ ಕೇರಳದಲ್ಲಿ 48ರಲ್ಲಿ 1 ಪಾಸಿಟಿವ್‌ ಬರುತ್ತಿದೆ ಎಂದು ಅವರು ಹೇಳಿದರು.

ಹಸುವಿಗೆ ಇದ್ದಷ್ಟು ಬುದ್ಧಿ ಮನುಷ್ಯನಿಗೆ ಇದ್ದಿದ್ರೇ ಕೊರೋನಾ ನಮ್ಮತ್ರ ಬರ್ತಿರಲಿಲ್ವೇನೋ..?

ಕೊರೋನಾ ಬಗ್ಗೆ ಜನ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮುನ್ನೆಚ್ಚರಿಕೆ ವಹಿಸಬೇಕು. ಕೊರೋನಾ ವೈರಸ್‌ ನಿರ್ಮೂಲನೆಗೆ ಜನರ ಸಹಕಾರ ಬಹಳ ಮುಖ್ಯ. ಜನ ಮನೆಯಲ್ಲಿದ್ದು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.