Asianet Suvarna News Asianet Suvarna News

ಉಡುಪಿಯಲ್ಲಿ ಅಪರೂಪದ ಬಿಳಿಗೂಬೆ ರಕ್ಷಣೆ

ಉಡುಪಿಯಲ್ಲಿ ಅಪರೂಪದ ಬಿಳಿ ಗೂಬೆಯನ್ನು ರಕ್ಷಿಸಲಾಗಿದೆ. ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಅವರು ಈ ಗೂಬೆಯನ್ನು ರಕ್ಷಿಸಿ ಅರಣ್ಯ ರಕ್ಷಕ ದೇವರಾಜ್‌ ಪಾಣ ಅವರ ವಶಕ್ಕೆ ನೀಡಿದ್ದಾರೆ.

rare white owl saved in udupi
Author
Bangalore, First Published Jan 1, 2020, 11:44 AM IST
  • Facebook
  • Twitter
  • Whatsapp

ಉಡುಪಿ(ಜ.01): ನಗರದ ಮಾರತಿ ವೀಥಿಕಾ ಬಳಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ, ಅಪರೂಪದ ಬಿಳಿ ಗೂಬೆಯನ್ನು ಮಂಗಳವಾರ ರಕ್ಷಿಸಲಾಗಿದೆ. ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಅವರು ಈ ಗೂಬೆಯನ್ನು ರಕ್ಷಿಸಿ ಅರಣ್ಯ ರಕ್ಷಕ ದೇವರಾಜ್‌ ಪಾಣ ಅವರ ವಶಕ್ಕೆ ನೀಡಿದ್ದಾರೆ.

ಸೂಕ್ತ ಚಿಕಿತ್ಸೆ ನೀಡಿ ಗುಣಮುಖವಾದ ಬಳಿಕ ಬಿಳಿ ಗೂಬೆಯನ್ನು ಪರಿಸರಕ್ಕೆ ಬಿಡುವುದಾಗಿ ಅರಣ್ಯರಕ್ಷರು ಹೇಳಿದ್ದಾರೆ. ರಕ್ಕೆಗೆ ಗಾಯಗೊಂಡು ಹಾರಲಾಗದ ಸ್ಥಿತಿಯಲ್ಲಿದ್ದ ಗೂಬೆಯು, ಬೆಕ್ಕು- ಬೀದಿ ನಾಯಿಗಳಿಂದ ರಕ್ಷಿಸಿಕೊಳ್ಳಲು ಅಂಗಡಿಯೊಂದರ ಬಾಗಿಲ ಬಳಿ ಮುದಡಿ ಕುಳಿತಿರುವುದನ್ನು, ಅಂಗಡಿ ಮಾಲಿಕ ಸುಧಾಕರ ದೇವಾಡಿಗ ಅವರು ಗಮನಿಸಿ ಒಳಕಾಡು ಅವರಿಗೆ ತಿಳಿಸಿದ್ದರು.

ತುಮಕೂರು: ನರಹಂತಕ ಚಿರತೆಯಿಂದ ಜನತೆ ಹೈರಾಣ!

ಬಹಳ ಅಪರೂಪದ ಬಿಳಿ ಬಣ್ಣದ ಗೂಬೆಗಳು ಅವನತಿ ಅಂಚಿನಲ್ಲಿವೆ. ಕಂದು ಗೂಬೆ ಅಪಶಕುನ, ಬಿಳಿ ಗೂಬೆ ಶುಭಫಲ ಎಂಬ ನಂಬಿಕೆ ಕೂಡ ಇದೆ. ಮನೆಯಲ್ಲಿ ಒಳಿತಾಗುವ ನಂಬಿಕೆಯಿಂದ ಬಿಳಿ ಗೂಬೆಯನ್ನು ಸಾಕುವವರು ಇದ್ದಾರೆ. ಕಂದು ಬಣ್ಣದ ಗೂಬೆ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಬಿಳಿ ಗೂಬೆಯು ಗಾತ್ರದಲ್ಲಿ ಸಣ್ಣದಾಗಿರುತ್ತದೆ.

ಅಪರೂಪದ ಬಿಳಿ ಗೂಬೆ ಚಿಕ್ಕಮಗಳೂರಿನಲ್ಲಿ ಪತ್ತೆ

Follow Us:
Download App:
  • android
  • ios