Asianet Suvarna News Asianet Suvarna News

ಇಂದಿನಿಂದ ಹೊಸ ಬಿಎಸ್‌ವೈ ಜನರ ಮುಂದೆ ಬರಲಿದ್ದಾರೆ: ಜಾರಕಿಹೊಳಿ

* ಯೋಗೇಶ್ವರ ಮನವೊಲಿಸುವೆ
* ಅಮಿತ್‌ ಶಾ, ಯಡಿಯೂರಪ್ಪ ನಂಬಿ ನಾವು ಬಿಜೆಪಿಗೆ ಬಂದಿದ್ದೇವೆ
* ನಾನು ಈಗಲೂ ಸಚಿವನಿದ್ದಂತೆ 

Ramesh Jarkiholi Talks Over CM BS Yediyurappa grg
Author
Bengaluru, First Published Jun 18, 2021, 10:26 AM IST
  • Facebook
  • Twitter
  • Whatsapp

ಗೋಕಾಕ(ಜೂ.18):  ಇಂದಿನಿಂದ ಹೊಸ ಬಿ.ಎಸ್‌.ಯಡಿಯೂರಪ್ಪ ಜನರ ಮುಂದೆ ಬರುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ. ಮುಂದಿನ 2 ವರ್ಷ ಯಡಿಯೂರಪ್ಪನವರೇ ಸಿಎಂ ’ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂ.18ರ ನಂತರ ಹೊಸ ಯಡಿಯೂರಪ್ಪ ಆಗಿ ನಮ್ಮ ಮುಖ್ಯಮಂತ್ರಿಗಳು ರಾಜ್ಯದ ಮುಂದೆ ಬರಲಿದ್ದಾರೆ. ಸಚಿವ ಕೆ.ಎಸ್‌.ಈಶ್ವರಪ್ಪ ಒಳ್ಳೆಯವರು. ಎಲ್ಲವನ್ನೂ ನಮ್ಮ ಹಾಗೇ ಮುಕ್ತವಾಗಿಯೇ ಹೇಳುತ್ತಾರೆ. ಅವರು ಹೇಳಿಕೆಯ ಉದ್ದೇಶನ್ನು ತಿರುಚಲಾಗಿದೆ ಎಂದು ರಮೇಶ್‌ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಸಿಎಂ ವಿರುದ್ಧ ಬಹಿರಂಗ ಹೇಳಿಕೆ, ವಿಶ್ವನಾಥ್ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಂಬಿ ನಾವು ಬಿಜೆಪಿಗೆ ಬಂದಿದ್ದೇವೆ. ಸಚಿವನಾಗಿ ಮಾತ್ರ ಕೆಲಸ ಮಾಡಬೇಕು ಅಂತಾ ಏನೂ ಇಲ್ಲ. ಶಾಸಕನಾಗಿಯೂ ಕೆಲಸ ಮಾಡಬಹುದು. ನಾನು ಈಗಲೂ ಸಚಿವನಿದ್ದಂತೆ ಎಂದು ತಿಳಿಸಿದರು.

ಸಚಿವ ಸಿ.ಪಿ.ಯೋಗೇಶ್ವರ ನನ್ನ ಮಿತ್ರ, ಸರ್ಕಾರ ರಚನೆಗೆ ಯೋಗೇಶ್ವರ, ಉಳಿದ ಶಾಸಕರ ಪಾತ್ರ ದೊಡ್ಡದಿದೆ. ಯೋಗೇಶ್ವರ ಮುಖ್ಯಮಂತ್ರಿಯೊಂದಿಗೆ ಕುಳಿತು ಚರ್ಚೆ ನಡೆಸಬೇಕು. ನಾನು ಸಹ ಯೋಗೇಶ್ವರ ಸಿಎಂ ಪರ ಇರುವಂತೆ ಮನವೊಲಿಸುವೆ ಎಂದರು.
 

Follow Us:
Download App:
  • android
  • ios