Asianet Suvarna News Asianet Suvarna News

ಡಿಕೆ ಸಹೋದರರಿಗೆ ಕೊಟ್ಟ ಮಾತಿನಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮುಖಂಡ

ಡಿ.ಕೆ ಸಹೋದರರ ಮಾತಿನಂತೆ ಮುಖಂಡರೋರ್ವರು ತಮ್ಮ ಹುದ್ದೆ ರಾಜೀನಾಮೆ ನೀಡಿ ಕೆಳಕ್ಕೆ ಇಳಿದಿದ್ದಾರೆ. ಈ ಮೊದಲು ನಡೆದ ಮಾತಿನಂತೆ ನಡೆದುಕೊಂಡಿದ್ದಾರೆ.

ramanagara ZP President H Basappa Quits his Post
Author
Bengaluru, First Published Aug 28, 2020, 1:46 PM IST

ರಾಮ​ನ​ಗರ (ಆ.28): ಕಾಂಗ್ರೆಸ್‌ ಪಕ್ಷ​ದಲ್ಲಿ ನಡೆ​ದಿದ್ದ ಅಧಿ​ಕಾರ ಹಂಚಿಕೆ ಸೂತ್ರ​ದಂತೆ ಜಿಲ್ಲಾ ಪಂಚಾ​ಯಿತಿ ಅಧ್ಯಕ್ಷ ಸ್ಥಾನಕ್ಕೆ ಎಚ್‌.ಬ​ಸಪ್ಪ ಸಲ್ಲಿ​ಸಿದ್ದ ರಾಜೀ​ನಾಮೆ ಅಂಗೀ​ಕಾ​ರ​ಗೊಂಡಿದೆ.

ಕಳೆದ ಆಗಸ್ಟ್‌ 10ರಂದು ಬಸಪ್ಪ ರವರು ಜಿಪಂ ಅಧ್ಯಕ್ಷ ಸ್ಥಾನಕ್ಕೆ ಸ್ವಯಿ​ಚ್ಛೆ​ಯಿಂದ ಸಲ್ಲಿ​ಸು​ತ್ತಿ​ರುವ ರಾಜೀ​ನಾಮೆಯನ್ನು ಅಂಗೀ​ಕ​ರಿ​ಸು​ವಂತೆ ಕೋರಿ ಗ್ರಾಮೀ​ಣಾ​ಭಿ​ವೃದ್ಧಿ ಮತ್ತು ಪಂಚಾ​ಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯ​ದರ್ಶಿ (ಪಂ.​ರಾಜ್‌)ಗಳಿಗೆ ​ರಾ​ಜೀ​ನಾಮೆ ಪತ್ರ ಸಲ್ಲಿ​ಸಿ​ದ್ದ​ರು.

ಅಶೋಕ್‌ ಆಯ್ಕೆ ಖಚಿ​ತ:

ಈ ಹಿಂದೆ ಕಾಂಗ್ರೆಸ್‌ ನಾಯ​ಕರ ಸಮ್ಮು​ಖ​ದಲ್ಲಿ ನಡೆ​ದಿದ್ದ ಒಡಂಬ​ಡಿ​ಕೆ​ಯಂತೆ ಎಚ್‌.ಬ​ಸಪ್ಪ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀ​ನಾಮೆ ಸಲ್ಲಿ​ಸಿ ಮಾತು ಉಳಿ​ಸಿ​ಕೊಂಡಿ​ದ್ದಾರೆ. ಅವ​ರಿಂದ ತೆರ​ವಾಗಿರುವ ಸ್ಥಾನಕ್ಕೆ ಕೂಟಗಲ್ ಕ್ಷೇತ್ರದ ಸದಸ್ಯ ಎಚ್‌.ಎನ್‌.ಅಶೋಕ್‌(ತಮ್ಮಾಜಿ) ಆಯ್ಕೆ​ಯಾ​ಗು​ವುದು ಬಹು​ತೇಕ ಖಚಿ​ತ​ವಾ​ಗಿದೆ. ಜಿಪಂನ ಅಧಿ​ಕಾ​ರದ ಅವಧಿ ಇನ್ನೂ 8 ತಿಂಗಳು ಮಾತ್ರ ಬಾಕಿ ಉಳಿ​ದಿದೆ. ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಸಂಸದ ಡಿ.ಕೆ.​ಸು​ರೇಶ್‌ ಅಧಿ​ಕಾರ ಹಂಚಿಕೆ ವೇಳೆ ಕೊಟ್ಟಿದ್ದ ಮಾತಿನಂತೆ ನಡೆ​ದು​ಕೊ​ಳ್ಳಲು ಮುಂದಾ​ಗಿ​ದ್ದಾ​ರೆ.

ಬಿಜೆಪಿ ಸೇರಲು ಸಜ್ಜಾದ್ರು ಜೆಡಿಎಸ್ ಹಾಗೂ ಕೈ ಮುಖಂಡರು

ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೂಟ​ಗಲ್‌ ಕ್ಷೇತ್ರ ಸದಸ್ಯ ಎಚ್‌ .ಎನ್‌.ಅ​ಶೋಕ್‌ ಅವ​ರಿಗೆ ಅಧಿಕಾ​ರ ನೀಡಲು ಬಯ​ಸಿ​ದ್ದಾರೆ. ಆದರೆ, ಅಧ್ಯಕ್ಷ ಸ್ಥಾನದ ಕಣ್ಣಿ​ಟ್ಟಿ​ರುವ ಡಿಕೆ ಸಹೋ​ದ​ರರ ಸಂಬಂಧಿ​ಯಾ​ಗಿ​ರುವ ದೊಡ್ಡಾ​ಲ​ಹಳ್ಳಿ ಕ್ಷೇತ್ರದ ಶಿವ​ಕು​ಮಾರ್‌ ಕೂಡ ಪೈಪೋಟಿ ನಡೆ​ಸಿದರು ಅಚ್ಚರಿ ಎನ್ನು​ತ್ತಿವೆ ಕಾಂಗ್ರೆಸ್‌ ಪಕ್ಷದ ಮೂಲ​ಗ​ಳು.

ಸಮಾ​ನ​ವಾಗಿ ಅಧಿ​ಕಾರ ಹಂಚಿಕೆ :

ಮಳೂರು ಕ್ಷೇತ್ರ ಸದಸ್ಯ ಸಿ.ಪಿ.ರಾಜೇಶ್‌ ಅವರನ್ನು ಹೊರತು ಪಡಿ​ಸಿ​ದರೆ ಉಳಿ​ದಂತೆ ಅಧ್ಯ​ಕ್ಷರು ಮತ್ತು ಉಪಾ​ಧ್ಯ​ಕ್ಷರು ಅಧಿ​ಕಾರ ಹಂಚಿಕೆ ಸೂತ್ರ​ದಂತೆ ಆಡ​ಳಿತ ನಡೆಸಿ ತಮ್ಮ ಸ್ಥಾನ​ಗ​ಳಿಗೆ ರಾಜೀ​ನಾಮೆ ಸಲ್ಲಿ​ಸಿ​ದ್ದರು. ಇದೀಗ ಬಸಪ್ಪ ಅವರ ಬೆನ್ನ ಹಿಂದೆಯೇ ಉಪಾ​ಧ್ಯಕ್ಷೆ ಸ್ಥಾನಕ್ಕೆ ಉಷಾ ರವಿ ಅವರು ರಾಜೀ​ನಾಮೆ ನೀಡ​ಲಿ​ದ್ದಾರೆ.

ಕಾಂಗ್ರೆಸ್ ಭಿನ್ನರಿಗೆ ಸೋನಿಯಾ ಪರೋಕ್ಷ ಸಂದೇಶ ರವಾನೆ

ಸಹೋ​ದರ ಸಿ.ಪಿ.​ಯೋ​ಗೇ​ಶ್ವರ್‌ ಅವ​ರೊಂದಿಗೆ ಬಿಜೆಪಿ ಪಾಳ​ಯ​ದಲ್ಲಿ ಗುರು​ತಿ​ಸಿ​ಕೊಂಡು ಕಾಂಗ್ರೆಸ್‌ ಸದಸ್ಯ ಸಿ.ಪಿ.​ರಾ​ಜೇಶ್‌ ನಾಯ​ಕ​ರಿಗೆ ಸೆಡ್ಡು ಹೊಡೆದು 30 ತಿಂಗಳು ಅಧಿ​ಕಾರ ಅನು​ಭ​ವಿಸಿ ರಾಜಿ​ನಾಮೆ ಸಲ್ಲಿ​ಸಿ​ದರು. ಬಾಕಿ ಉಳಿದ 30 ತಿಂಗಳ ಅಧಿ​ಕಾ​ರ​ವನ್ನು ಮೂವ​ರಿಗೆ ಸಮಾ​ನ​ವಾಗಿ ಹಂಚಲು ಕಾಂಗ್ರೆಸ್‌ ವರಿ​ಷ್ಠರು ತೀರ್ಮಾ​ನಿ​ಸಿ​ದರು.ದೊಡ್ಡಮರಳವಾಡಿ ಕ್ಷೇತ್ರದ ಎಂ.ಎನ್‌.ನಾಗರಾಜು 12 ತಿಂಗಳು, ಬಸಪ್ಪ 10 ತಿಂಗಳು ಆಡ​ಳಿತ ನಡೆ​ಸಿದ್ದಾರೆ. ಬಾಕಿ ಉಳಿದ ಅವ​ಧಿಗೆ ಎಚ್‌.ಎನ್‌.ಅ​ಶೋಕ್‌ ಹಾಗೂ ಶಿವ​ಕು​ಮಾರ್‌ ಅವ​ರ ಪೈಕಿ ಯಾರು ಅಧ್ಯ​ಕ್ಷ​ರಾ​ಗ​ಬೇಕು ಎಂಬ ವಿಚಾ​ರ​ದಲ್ಲಿ ಡಿಕೆ ​ಸ​ಹೋ​ದ​ರರ ತೀರ್ಮಾ​ನವೇ ಅಂತಿ​ಮ​ವಾಗ​ಲಿದೆ.

Follow Us:
Download App:
  • android
  • ios