ಬಿಜೆಪಿ ಸೇರಲು ಸಜ್ಜಾದ್ರು ಜೆಡಿಎಸ್ ಹಾಗೂ ಕೈ ಮುಖಂಡರು
ಹಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳಲು ಸಜ್ಜಾಗಿದ್ದಾರೆ. ಶೀಘ್ರವೇ ಇವರು ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಯಾರವರು..?
ಬೆಂಗಳೂರು (ಆ.28): ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕಾರ್ಪೋರೇಟರ್ಸ್‌ಗಳು ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದಾರೆ.
ಕಳೆದ ಒಂದು ವರ್ಷದಿಂದ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಮುಖಂಡರು ಇದೀಗ ಅಧಿಕೃತವಾಗಿ ಬಿಜೆಪಿ ಸೇರಲು ಮುಂದಾಗಿದ್ದಾರೆ.
ಕಳೆದ ವಿಧಾನಸಭೆ ಉಪ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಗೊಂಡಿದ್ದ ಶಾಸಕರ ಬೆಂಬಲಿಗರು ಇವರಾಗಿದ್ದು, ಬಿಜೆಪಿ ಸೇರಲು ಸಾಕಷ್ಟು ಕಸರತ್ತು ನಡೆಸುತ್ತಿದ್ದರು.
ಕಳೆದ ಮೇಯರ್ ಚುನಾವಣೆ ವೇಳೆಯೂ ಸಹ ಬಿಜೆಪಿಗೆ ಬೆಂಬಲ ನೀಡಿದ್ದು, ಇನ್ನೂ 12 ದಿನಗಳ ಕಾಲ ಪಾಲಿಕೆ ಸದಸ್ಯರ ಅವಧಿ ಇದ್ದು, ಈ ಅವಧಿ ಪೂರ್ಣಗೊಂಡ ಬಳಿಕ ಪಕ್ಷ ಸೇರಲಿದ್ದಾರೆ.
ಕಾಂಗ್ರೆಸ್ ಭಿನ್ನರಿಗೆ ಸೋನಿಯಾ ಪರೋಕ್ಷ ಸಂದೇಶ ರವಾನೆ...
ಜೆಡಿಎಸ್ ಸದಸ್ಯರಾದ ಲಗ್ಗೆರೆ ವಾರ್ಡಿನ ಮಂಜುಳ ನಾರಾಯಣ ಸ್ವಾಮಿ, ಕೆ. ದೇವದಾಸ್, ದೊಮ್ಮಲೂರು ವಾರ್ಡಿನ ಪಕ್ಷೇತರ ಸದಸ್ಯ ಲಕ್ಷ್ಮೀ ನಾರಾಯಣ, ಮಾರತಳ್ಳಿ ವಾರ್ಡಿನ ಎನ್. ರಮೇಶ್, ಕೋನೇನ ಅಗ್ರಹಾರ ವಾರ್ಡಿನ ಚಂದ್ರಪ್ಪ ರೆಡ್ಡಿ ಹಾಗೂ ರಮೇಶ್ ಬಿಜೆಪಿ ಸೇರ್ಪಡೆಗೊಳ್ಳಲು ನಿರ್ಧಾರ ಮಾಡಿದ್ದಾರೆ.
ಟಿಪ್ಪು ಬಗ್ಗೆ ವಿಶ್ವನಾಥ್ ಹೇಳಿಕೆ ನೀಡಬಾರದಿತ್ತು: ಈಶ್ವರಪ್ಪ...
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಗೆಲುವು ಕಂಡಿದ್ದ ಶಾಸಕರು ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಅವರ ಬೆಂಬಲಿಗರಾಗಿದ್ದ ಮುಖಂಡರು ಅವರ ಮೂಲ ಪಕ್ಷದಲ್ಲಿಯೇ ಇದ್ದು ಇದೀಗ ತೊರೆಯಲು ಸಜ್ಜಾಗಿದ್ದಾರೆ.