Asianet Suvarna News Asianet Suvarna News

'ಕೈ' ಬಿಟ್ಟು ಕಮಲ ಹಿಡಿದ ನಾಯಕಗೆ ತಪ್ಪಿತು ಸಚಿವ ಸ್ಥಾನ, ಹೊರಬಿತ್ತು ಅಸಮಾಧಾನ..!

ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಕಷ್ಟು ಶ್ರಮಿಸಿದ ನಾಯಕರಲ್ಲಿ ಒಬ್ಬರಾದ ಸಿ. ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೈ ತಪ್ಪಿರೋದು ಅಸಮಧಾನ ಸೃಷ್ಟಿಸಿದೆ. ಪ್ರಭಾವಿ ನಾಯ​ಕ​ರಾ​ಗಿ​ರುವ ಸಿ.ಪಿ.​ಯೋ​ಗೇ​ಶ್ವರ್‌ ಅವ​ರಿಗೆ ಪಕ್ಷ ಸಂಘ​ಟನೆ ಉದ್ದೇ​ಶ​ದಿಂದ ಮಂತ್ರಿ​ಗಿರಿ ಸಿಗು​ತ್ತದೆ ಎಂದು ಎಲ್ಲರೂ ಭಾವಿ​ಸಿ​ದ್ದರು. ಆದರೆ ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಿದೆ.

Ramanagara bjp workers unhappy as C. P. Yogeeshwara not getting Portfolio
Author
Bangalore, First Published Aug 21, 2019, 1:20 PM IST

ಬೆಂ. ಗ್ರಾಮಾಂತರ(ಆ.21): ಜೆಡಿ​ಎಸ್‌ - ಕಾಂಗ್ರೆಸ್‌ ಮೈತ್ರಿ ಸರ್ಕಾ​ರ​ವನ್ನು ಕೆಡವಿ ಯಡಿ​ಯೂ​ರಪ್ಪ ನೇತೃ​ತ್ವದ ಬಿಜೆಪಿ ಸರ್ಕಾರ ಅಸ್ತಿ​ತ್ವಕ್ಕೆ ಬರಲು ಶ್ರಮಿ​ಸಿ​ದ​ವರಲ್ಲಿ ಒಬ್ಬ​ರಾದ ಸಿ.ಪಿ.​ಯೋ​ಗೇ​ಶ್ವರ್‌ ಅವ​ರಿಗೆ ಸಚಿವ ಸ್ಥಾನ ಕೈ ತಪ್ಪಿರುವುದು ಕಮಲ ಪಡೆಯ ಕಾರ್ಯ​ಕ​ರ್ತ​ರಲ್ಲಿ ಬೇಸರ ತಂದಿದೆ.

ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಹಾಗೂ ಮಾಜಿ ಸಚಿವ ಡಿ.ಕೆ.​ಶಿ​ವ​ಕು​ಮಾರ್‌ ಪ್ರತಿ​ನಿ​ಧಿ​ಸುವ ಜಿಲ್ಲೆ​ಯಲ್ಲಿ ಬಿಜೆ​ಪಿಯ ಪ್ರಭಾವಿ ನಾಯ​ಕ​ರಾ​ಗಿ​ರುವ ಸಿ.ಪಿ.​ಯೋ​ಗೇ​ಶ್ವರ್‌ ಅವ​ರಿಗೆ ಪಕ್ಷ ಸಂಘ​ಟನೆ ಉದ್ದೇ​ಶ​ದಿಂದ ಮಂತ್ರಿ​ಗಿರಿ ಸಿಗು​ತ್ತದೆ ಎಂದು ಎಲ್ಲರೂ ಭಾವಿ​ಸಿ​ದ್ದರು. ಆದರೆ, ಪಕ್ಷದ ವರಿ​ಷ್ಠರ ತೀರ್ಮಾನ ಇದೀಗ ಬಿಜೆಪಿ ಕಾರ್ಯ​ಕ​ರ್ತ​ರು ಅಸ​ಮಾ​ಧಾ​ನ​ಗೊ​ಳ್ಳು​ವಂತೆ ಮಾಡಿದೆ.

ಬಿಜೆ​ಪಿ​ಯಿಂದ ರೇಷ್ಮೆ​ನ​ಗರಿ ಕಡೆ​ಗ​ಣನೆ:

ಜಿಲ್ಲೆಯ ನಾಲ್ಕು ವಿಧಾ​ನ​ಸಭಾ ಕ್ಷೇತ್ರ​ಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಅಧಿಕಾರದಲ್ಲಿದ್ದರೆ, ಇನ್ನುಳಿದ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿಡಿತ ಸಾಧಿಸಿದೆ. ಇದರಲ್ಲೂ ಮೂರು ಕ್ಷೇತ್ರಗಳು ಮಾತ್ರ ಘಟಾನುಘಟಿ ನಾಯಕರನ್ನು ಹೊಂದಿದೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌, ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರು ಶಾಸಕರಾಗಿದ್ದಾರೆ. ಈಗ ಬಿಜೆಪಿ ಸ​ರ್ಕಾರ ರಚನೆಯಾದ ಬಳಿಕ ಜಿಲ್ಲೆಯನ್ನು ಪ್ರತಿ​ನಿ​ಧಿ​ಸಲು ಬಿಜೆಪಿ ಶಾಸ​ಕರೇ ಇಲ್ಲ. ಹೀಗಾಗಿ ಸಿ.ಪಿ.​ಯೋ​ಗೇ​ಶ್ವರ್‌ ಅವ​ರಿಗೆ ಸಚಿವ ಸ್ಥಾನ ನೀಡಿ ಆನಂತರ ವಿಧಾ​ನ ಪರಿ​ಷತ್‌ ಸದ​ಸ್ಯ​ರ​ನ್ನಾಗಿ ಮಾಡಿ​ಕೊ​ಳ್ಳುವ ಅಥವಾ ಶಾಸ​ಕರ ರಾಜೀನಾ​ಮೆ​ಯಿಂದ ತೆರ​ವಾ​ಗಿ​ರುವ ಯಾವು​ದಾ​ದರು ಕ್ಷೇತ್ರ​ದಿಂದ ಸ್ಪರ್ಧೆ​ಗಿ​ಳಿಸಿ ಗೆಲ್ಲಿ​ಸಿ​ಕೊ​ಳ್ಳುವ ಲೆಕ್ಕಾ​ಚಾರ ಬಿಜೆಪಿ ವಲ​ಯ​ದಲ್ಲಿ ನಡೆ​ದಿ​ತ್ತು.

ಜೆಡಿಎಸ್, ಕಾಂಗ್ರೆಸ್ ಪ್ರಭಾವಿ ನಾಯಕರನ್ನು ಎದುರಿಸುವ ಸವಾಲು:

ಜೆಡಿ​ಎಸ್‌ ಮತ್ತು ಕಾಂಗ್ರೆಸ್‌ನ ಪ್ರಭಾವಿ ನಾಯ​ಕ​ರನ್ನು ಸಮ​ರ್ಥ​ವಾಗಿ ಎದು​ರಿ​ಸ​ಬೇ​ಕಾ​ಗಿದೆ. ಜತೆಗೆ ಹಳೇ ಮೈಸೂರು ಭಾಗ​ದಲ್ಲಿ ಮೈಸೂರು- ಕೊಡಗು ಹೊರತು ಪಡಿಸಿ ಉಳಿದೆಡೆ ಬಿಜೆಪಿ ಪಕ್ಷಕ್ಕೆ ನೆಲೆ ಇಲ್ಲ. ಈ ಭಾಗ​ದಲ್ಲಿ ಒಕ್ಕ​ಲಿಗ ಮತ​ಗ​ಳನ್ನು ಸೆಳೆ​ಯ​ಬೇ​ಕಾ​ದರೆ ಯೋಗೇ​ಶ್ವರ್‌ ಅವ​ರಂತಹ ನಾಯ​ಕ​ರಿಗೆ ಮನ್ನಣೆ ನೀಡ​ಬೇ​ಕು.

ಹಳೇ ಮೈಸೂರು ಭಾಗ​ದಲ್ಲಿ ಪಕ್ಷ ಸಂಘ​ಟನೆ ದೃಷ್ಟಿ​ಯಿಂದ ಯೋಗೇ​ಶ್ವರ್‌ ಅವ​ರಿಗೆ ಸಚಿವ ಸ್ಥಾನ ನೀಡ​ಬೇ​ಕೆ​ನ್ನುವ ಕೂಗು ಪಕ್ಷ​ದ​ಲ್ಲಿ ಕೇಳಿ​ಬಂದಿತ್ತು. ಅಲ್ಲದೆ, ಸಚಿವ ಸ್ಥಾನ ಗಿಟ್ಟಿ​ಸಿ​ಕೊ​ಳ್ಳಲು ಇನ್ನಿ​ಲ್ಲದ ಕಸ​ರತ್ತು ನಡೆ​ಸಿ​ದ್ದ ಯೋಗೇ​ಶ್ವರ್‌ ಕೂಡ ಮುಖ್ಯ​ಮಂತ್ರಿ ಯಡಿ​ಯೂ​ರಪ್ಪ ಹಾಗೂ ಕೇಂದ್ರದ ಕೆಲವು ನಾಯ​ಕರ ಮೂಲಕ ವರಿ​ಷ್ಠರ ಮೇಲೆ ಒತ್ತಡ ಹೇರಿ​ದ್ದರು. ಅದ್ಯಾ​ವುದು ಪ್ರಯೋ​ಜ​ನಕ್ಕೆ ಬಂದಂತೆ ಕಾಣು​ತ್ತಿಲ್ಲ.

ಕಮಲ ಹಿಡಿದು ಮಂತ್ರಿಯಾಗಿದ್ದರು:

ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಂದ ಸಚಿವ ಸ್ಥಾನ ಹಾಗೂ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿ​ದ್ದ​ರಿಂದ ಬೇಸ​ರ​ಗೊಂಡಿದ್ದ ಸಿ.ಪಿ.​ಯೋ​ಗೇ​ಶ್ವರ್‌ ಬಿಜೆಪಿ ಸೇರ್ಪ​ಡೆ​ಯಾ​ದರು. 2008ರ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಚನ್ನ​ಪ​ಟ್ಟಣ ಕ್ಷೇತ್ರ​ದಲ್ಲಿ ಜೆಡಿ​ಎಸ್‌ ಅಭ್ಯರ್ಥಿ ಎಂ.ಸಿ.​ಅ​ಶ್ವತ್‌ ವಿರುದ್ಧ ಯೋಗೇ​ಶ್ವರ್‌ ಪರಾ​ಭವ ಹೊಂದಿ​ದ್ದರು. ಆದರೆ ,ಬಿಜೆಪಿ ಅಂದು ಆರಂಭಿಸಿದ ಆಪರೇಷನ್‌ ಕಮಲದ ಮೂಲಕ ಜೆಡಿಎಸ್‌ ಶಾಸಕರಾಗಿ​ದ್ದ ಎಂ.ಸಿ.ಅಶ್ವಥ್‌ ಅವರಿಂದ ರಾಜೀನಾಮೆ ಕೊಡಿ​ಸಿ​ದ್ದರು. ಆಗ ಎದು​ರಾದ ಉಪಚುನಾವಣೆಯಲ್ಲಿ ಯೋಗೇ​ಶ್ವರ್‌ ಬಿಜೆಪಿ ಪಕ್ಷ​ದಿಂದ ಜಯಭೇರಿ ಬಾರಿಸಿದರು. ಯಡಿ​ಯೂ​ರಪ್ಪ ನೇತೃ​ತ್ವದ ಸರ್ಕಾ​ರ​ದಲ್ಲಿ ಅರಣ್ಯ ಸಚಿವರಾಗಿ ಅಧಿಕಾರ ನಡೆಸಿದ್ದ​ರು.

ಆನಂತರ ಬಿಜೆಪಿ ತೊರೆದ ಯೋಗೇ​ಶ್ವರ್‌, ಸಮಾ​ಜ​ವಾದಿ ಪಕ್ಷದ ಸೈಕಲ್‌ ತುಳಿದು ವಿಧಾ​ನ​ಸೌಧ ಪ್ರವೇ​ಶಿಸಿ​ದರು. ಸಿದ್ದ​ರಾ​ಮಯ್ಯ ನೇತೃ​ತ್ವ​ದ ಕಾಂಗ್ರೆಸ್‌ ಸರ್ಕಾ​ರಕ್ಕೆ ಬೆಂಬಲ ನೀಡಿ​ದರು. ಕಾಂಗ್ರೆಸ್‌ ಪಕ್ಷ ಪೂರ್ಣ ಬಹು​ಮತ ಹೊಂದಿ​ದ್ದ​ರಿಂದ ಯೋಗೇ​ಶ್ವರ್‌ ಅವ​ರಿಗೆ ಮಂತ್ರಿ ಯೋಗ ಸಿಗ​ಲಿ​ಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಳೇ ಮೈಸೂರು ಭಾಗ​ದಲ್ಲಿ ಜೆಡಿ​ಎಸ್‌- ಕಾಂಗ್ರೆಸ್‌ ಪಕ್ಷ​ಗ​ಳಿಗೆ ಪರ್ಯಾ​ಯ​ವಾಗಿ ಬಿಜೆಪಿ ಪಕ್ಷ ಸಂಘ​ಟಿ​ಸುವ ಉದ್ದೇ​ಶ​ದಿಂದ ಯೋಗೇ​ಶ್ವರ್‌ ಮತ್ತೊಮ್ಮೆ ಕಮಲ ಪಾಳಯ ಸೇರಿ​ದ​ರು. ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ತನ್ನ ರಾಜ​ಕೀಯ ವಿರೋಧಿಗಳು ಹೆಣೆದ ಚಕ್ರ​ವ್ಯೂ​ಹ​ವನ್ನು ಭೇದಿಸಲಾ​ರದೆ ಸೈನಿಕ ಯೋಗೇ​ಶ್ವರ್‌ ಸೋಲು ಅನು​ಭ​ವಿ​ಸಿ​ದರು. ಜೆಡಿ​ಎಸ್‌ - ಕಾಂಗ್ರೆಸ್‌ ದೋಸ್ತಿ ಸರ್ಕಾರ ಕೆಡ​ವಿದ್ದ ಕಾರ​ಣ​ಕ್ಕಾ​ದರು ಸಚಿವ ಸ್ಥಾನ ಸಿಗು​ತ್ತ​ದೆ​ ಎಂಬ ಆಸೆಯೂ ನುಚ್ಚು ನೂರಾ​ಗಿ​ದೆ.

ಸೇಡು ತೀರಿ​ಸಿ​ಕೊಂಡ ಸೈನಿಕ?

ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸುವ ಪ್ರತಿಜ್ಞೆಯೊಂದಿಗೆ ಬಿಜೆಪಿ ಸೇರಿದ ಸೈನಿಕನನ್ನು ತನ್ನ ತವರು ನೆಲದಲ್ಲೆ ಕೆಡವಲು ಕೊನೆಕ್ಷಣದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.​ಶಿ​ವ​ಕು​ಮಾರ್‌ ತಂತ್ರ​ಗಾ​ರಿಕೆ ರೂಪಿ​ಸಿ​ದರು. ಅದ​ರಂತೆ ಕುಮಾ​ರ​ಸ್ವಾಮಿ ರಾಮ​ನ​ಗರ ಮತ್ತು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿ​ಸಿದರು.

5 ಬಾರಿ ಗೆಲುವು ಸಾಧಿಸಿ 6ನೇ ಬಾರಿಗೆ ವಿಧಾನಸೌಧದ ಮೆಟ್ಟಿಲತ್ತುವ ಯೋಗೇಶ್ವರ್‌ ಕನಸು ಕೈಗೂಡಲಿಲ್ಲ. ವಿಧಾನಸಭಾ ಚುನಾ​ವ​ಣೆ ಸೋಲಿನ ಬಳಿಕ ಸುಮ್ಮನೆ ಕೂರದ ಯೋಗೇಶ್ವರ್‌ ಕೆಲ ಶಾಸಕರನ್ನು ಬಿಜೆಪಿಗೆ ಕರೆತರಲು ಆಪರೇಷನ್‌ ಆರಂಭಿಸಿದರು. ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡು ಆಪರೇಷನ್‌ ಕಮಲಕ್ಕೆ ಯೋಗೇಶ್ವರ್‌ ಪ್ರಯತ್ನಿಸಿದ ವಿಷ​ಯ ಗುಟ್ಟಾಗಿ ಉಳಿದ ಸಂಗತಿಯೇನಲ್ಲ.

ಜನರ ಮುಂದೆ ಕಣ್ಣೀರಿಟ್ಟ ನೂತನ ಸಚಿವ ಸಿ.ಟಿ.ರವಿ

6 ತಿಂಗಳ ಹಿಂದೆ ಖುದ್ದು ಸಿಎಂ ಕುಮಾರಸ್ವಾಮಿ ಅವರೇ ಯೋಗೇಶ್ವರ್‌ ನನ್ನ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿರುವ ಕಿಂಗ್‌ಪಿನ್‌ ಎಂದು ಬಹಿರಂಗವಾಗಿ ಆರೋಪಿಸಿದ್ದರು. ಅಂತಿ​ಮ​ವಾಗಿ ಯೋಗೇ​ಶ್ವರ್‌ ಜೆಡಿ​ಎಸ್‌ - ಕಾಂಗ್ರೆಸ್‌ನ ಅತೃಪ್ತ ಶಾಸ​ಕ​ರಿಂದ ರಾಜೀ​ನಾಮೆ ಕೊಡಿಸಿ ದೋಸ್ತಿ ಸರ್ಕಾರ ಕೆಡ​ವು​ದರ ಮೂಲಕ ಕುಮಾ​ರ​ಸ್ವಾಮಿ ಮತ್ತು ಡಿ.ಕೆ.​ಶಿ​ವ​ಕು​ಮಾರ್‌ ವಿರುದ್ಧ ತನ್ನ ಸೋಲಿನ ಸೇಡು ತೀರಿ​ಸಿ​ಕೊಂಡಿ​ದ್ದ​ರು.

Follow Us:
Download App:
  • android
  • ios