ರಾಜೇಶ್ ಶೆಟ್ಟಿ 

ಕಲಬುರಗಿ[ಫೆ.08]: ಸಬ್ಸಿಡಿ ಲಾಬಿ ಜೋರಾಗಿದೆ. ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಮೊಬೈಲ್ ನಿಂದ ಸಿನಿಮಾ ತೆಗೆದು 10 ಲಕ್ಷ, 20 ಲಕ್ಷ ಸಬ್ಸಿಡಿ ಪಡೆಯಲಾಗುತ್ತದೆ. -ಸೋಷಿಯಲ್ ಮೀಡಿಯಾ ಮಾಫಿಯಾ ಇದೆ. ಸೋಷಿಯಲ್ ಮೀಡಿಯಾ ಪುಟಗಳನ್ನು ಹೊಂದಿರುವವರು ಪಬ್ಲಿಸಿಟಿಗೆ 2 ಲಕ್ಷ ರು. ದುಡ್ಡು ಕೇಳುತ್ತಾರೆ. ಕೊಡದಿದ್ದರೆ ಸಿನಿಮಾ ಬಿಡುಗಡೆ ದಿನವೇ ನೆಗೆಟಿವ್ ಪಬ್ಲಿಸಿಟಿ ಮಾಡುತ್ತಾರೆ. 

ಅನೇಕ ನಿರ್ಮಾಪಕರು ಶೋಕಿಗಾಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ. ನಿರ್ಮಾಪಕರಿಗೆ ಚಿತ್ರರಂಗ ಹೇಗೆ ಬೆಳೆಸಬೇಕು, ಯಾವ ಕೆಲಸ ಮುಖ್ಯವಾಗಿ ಆಗಬೇಕು ಎಂಬ ಅರಿವು ಇರಬೇಕು. -ಚಿತ್ರನಗರಿ ವಿಚಾರದಲ್ಲಿ ಕಾಲಯಾಪನೆ ಬೇಡ. ಚಿತ್ರನಗರಿ ಮೈಸೂರಲ್ಲೇ ಆಗಲಿ. ರಾಜಕಾರಣಿಗಳೇ, ನಿಮ್ಮ ರಾಜಕಾರಣವನ್ನು ಕಲೆಗೆ ಲೇಪಿಸಬೇಡಿ. ಇವು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮಾತುಗಳು. 

ಕಲಬುರಗಿ ಅಕ್ಷರ ಜಾತ್ರೆಗೆ ತೆರೆ: 8 ಲಕ್ಷ ಜನ ಸಮ್ಮೇಳನಕ್ಕೆ ಭೇಟಿ

ಚಲನಚಿತ್ರ-ಕನ್ನಡ ಸಾಹಿತಕ್ಯ ಎಂಬ ವಿಚಾರ ಗೋಷ್ಠಿಯಲ್ಲಿ ಕನ್ನಡ ಚಿತ್ರರಂಗದ ಮುಂದಿರುವ ಸವಾಲುಗಳು ವಿಚಾರ ಕುರಿತು ಮಾತನಾಡಿದ ಅವರು ಎಂದಿಗಿಂತ ಸ್ವಲ್ಪ ಗಟ್ಟಿ ದನಿಯಲ್ಲೇ ಮಾತನಾಡಿದರು. ಅವರ ಸ್ಪಷ್ಟ ವಿರೋಧ ದಾಖಲಾಗಿದ್ದು ಸರ್ಕಾರದ ವಿರುದ್ಧ ಮತ್ತು ಅಧಿಕಾರಿಗಳ ವಿರುದ್ಧ. ಅನಂತರ ಚಿತ್ರರಂಗಕ್ಕೆ ಸಂಬಂಧಿಸಿದವರ ಕುರಿತ ಅಸಮಾಧಾನ ಹಂಚಿಕೊಂಡರು. 

ಸಾಹಿತ್ಯ ಸಮ್ಮೇಳನದಲ್ಲಿ ಮೊಳಗಿದ ಸಿಎಎ ವಿರೋಧಿ ಧ್ವನಿ!

ಬೆಂಗಳೂರಿನಲ್ಲಿರುವ 600 ಥಿಯೇಟರ್‌ಗಳಲ್ಲಿ400 ಥಿಯೇಟರ್‌ಗಳಲ್ಲಿ ಪರಭಾಷೆ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. 200 ಮಾತ್ರ ನಮಗೆ ಸಿಗುತ್ತಿವೆ. ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಟೂರಿಂಗ್ ಟಾಕೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದೆ. ಆದರೆ ಓಬಿರಾಯನ ಕಾಲದ ಲೈಸೆನ್ಸ್ ನೀಡುವ ಪದ್ಧತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ಅಧಿಕಾರಿಗಳು ಸ್ಪಂದಿಸದೆ ಯೋಜನೆ ಕೈಗೂಡಲಿಲ್ಲ. ಮಹಾರಾಷ್ಟ್ರದಲ್ಲಿ ಮರಾಠಿ ಸಿನಿಮಾ ಪ್ರದರ್ಶನ ಕಡ್ಡಾಯ ಮಾಡಿದ್ದಾರೆ. ನಮ್ಮಲ್ಲಿ ಕನ್ನಡ ಸಿನಿಮಾ ಪ್ರದರ್ಶನ ಕಡ್ಡಾಯ ಮಾಡಿ ಅಂದ್ರೆ ಮಾಡಲ್ಲ. ಸಿನಿಮಾ ಟಿಕೆಟ್ ದರ ಕಡಿಮೆ ಮಾಡಿಲ್ಲ ಎಂದು ಬೇಸರಿಸಿದರು.