ಬೆಳಗಾವಿ(ಜೂ.22): ಸದಾಶಿವ ನಗರದ ರಾಜೀವ ಕೃಷ್ಣಾ ಮೇತ್ರಿ ಅವರು ಯುನೈಟೆಡ್‌ ಕಿಂಗಡಮ್‌ನ ನಾರ್ಥವ್ಹೆಲ್ಸ್‌ ಬಾಡೆಲ್‌ವಿಡನ್‌ ನಗರದ ಕೌನ್ಸಿಲರ್‌ ಆಗಿ ಆಯ್ಕೆಗೊಂಡಿದ್ದಾರೆ. ಇವರು ಇಂಗ್ಲೆಂಡಿನ ನಾರ್ತ್ ವ್ಹೆಲ್ಸ್‌ ನಗರದ ಗ್ಲಾನ್‌ಕ್ಲುಯ್ಡ್‌ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಹಿರಿಯ ಸ್ಟಾಫ್‌ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದವರಾದ ಇವರು 2001 ರಿಂದ ಇಂಗ್ಲೆಂಡಿನಲ್ಲಿ ಸ್ಟಾಫ್‌ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ಧರ್ಮಪತ್ನಿ ರೀನಾ ರಾಜೀವ ಮೇತ್ರಿ ಕೂಡ ಸ್ಟಾಫ್‌ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿಯ ಸರ್ಕಾರಿ ಆಸ್ಪತ್ರೆಯ ಕೊರೋನಾ ವಾರ್ಡ್‌ನಲ್ಲಿ ಫ್ರಂಟ್‌ಲೈನ್‌ ವಾರಿಯರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಅವರಿಗೂ ಕೊರೋನಾ ತಗುಲಿತ್ತು. ನಂತರ ಸೋಂಕಿನ ಚಿಕಿತ್ಸೆಯ ಜೊತೆಗೆ ಪ್ರಾಣಾಯಾಮ, ಯೋಗಾಸನದಿಂದ ಸೋಂಕು ಮುಕ್ತರಾಗಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೂಡ ಇವರಿಗೆ ಕರೆ ಮಾಡಿ ಇಂಗ್ಲೆಂಡಿನ ನಾಥ್‌ವೇಲ್ಸ್‌ನಲ್ಲಿ ಬಳಸುವ ವಿಧಾನಗಳ ಬಗ್ಗೆ ವಿವರವಾಗಿ ತಿಳಿಸಿದರು.

ಬೆಳಗಾವಿ: ಸೂರ್ಯಗ್ರಹಣದಂದು ಬಾಡೂಟ ಸೇವಿಸಿ ಮೌಢ್ಯಕ್ಕೆ ಸಡ್ಡು ಹೊಡೆದರು..!

ಇವರು 38 ವರ್ಷ ಹಳೆಯದಾದ ಕನ್ನಡ ಬಳಗ ಯು.ಕೆ. ಯ ಕಾರ್ಯಕಾರಣಿ ಮಂಡಳಿಯ ಸದಸ್ಯರಲ್ಲದೇ ಖಜಾಂಚಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕೌನ್ಸಲರಾಗಿ ನೇಮಕಗೊಂಡ ಇವರ ಸಾಧನೆಯನ್ನು ಪರಿಗಣಿಸಿ ಬ್ರಿಟಿಷ್‌ ಕನ್ನಡ ಸಮುದಾಯವು ಮೆಚ್ಚುಗೆ ವ್ಯಕ್ತಪಡಿಸಿದೆ.