ಕೊಟ್ಟ ಮಾತು ಈಡೇರಿಸದ ಯಡಿಯೂರಪ್ಪ, ಈಗ ಮುಳುಗಡೆ ಭೀತಿಯಲ್ಲಿ ಕೊಳ್ಳೂರು ಸೇತುವೆ

ಅಂದು ಸಿಎಂ ಆಗಿದ್ದ ವೇಳೆ ಬಿಎಸ್ ಯಡಿಯೂರಪ್ಪ ಕೊಟ್ಟ ಮಾತು ಈಡೇರಿಸಿಲ್ಲ. ಇದರಿಂದ ಈಗ ಗ್ರಾಮಕ್ಕೆ ಕಲ್ಪಿಸುವ ಸೇತುವೆ ಒಂದು ಮುಳುಗಡೆ ಭೀತಿಯಲ್ಲಿದೆ. ಇದರಿಂದ ಜನರು ಆಕ್ರೋಶಗೊಂಡಿದ್ದಾರೆ.
 

Raining In Maharashtra Flood In Yadgir District rbj

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ, (ಜುಲೈ.18):
ನೆರೆಯ ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಅಲ್ಲಿ ಮಳೆರಾಯನ‌ ರುದ್ರನರ್ತನ ಇತ್ತ ಕಲ್ಯಾಣ ಕರ್ನಾಟಕದಲ್ಲಿ ನೆರೆಯ ಭೀತಿ ಎದುರಾಗಿದೆ. ಜೊತೆಗೆ ಹಲವಾರು ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯಕ್ಕೆ ಒಳಹರಿವು ಕೂಡ ಹೆಚ್ಚಾಗಿದೆ. ನದಿತೀರದ ಗ್ರಾಮದವರು ಅಲರ್ಟ್ ಆಗಿರಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ‌.

ಕೃಷ್ಣಾ ನದಿತೀರದಲ್ಲಿ ಪ್ರವಾಹದ ಭೀತಿ
ಮಹಾರಾಷ್ಟ್ರದ ಲ್ಲಿ ವರುಣನ ಅಬ್ಬರ ಇನ್ನು ತಣ್ಣಗಾಗಿಲ್ಲ. ಮಹಾರಾಷ್ಟ್ರದ ಕೊಯ್ನಾ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ಉತ್ತರ ಕರ್ನಾಟಕದ ಬಹುತೆಕ ನದಿಗಳು ಅಪಾಯದ ಮಟ್ಟ ತುಂಬಿ ಹರಿಯುತ್ತಿವೆ. ಯಾದಗಿ ಜಿಲ್ಲೆಗೆ ಎರಡು ನದಿಗಳಾದ ಕೃಷ್ಣಾ ಹಾಗೂ ಭೀಮಾ ನದಿಯು ರೈತರು ಹಾಗೂ ನದಿತೀರದ ಜನರಿಗೆ ಆತಂಕದಲ್ಲಿ ಜೀವನ ಕಳೆಯುವಂತಾಗಿದೆ. ಈಗಾಗಲೇ ಬಸವಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿರುದರಿಂದ ಯಾವ ಕ್ಷಣದಲ್ಲಾದ್ರು ಕೃಷ್ಣಾ ನದಿ ನೀರು ಬಿಡುವ ಸಾಧ್ಯತೆ ಇದೆ. ಸದ್ಯ ಕೃಷ್ಣ ನದಿಗೆ 1 ಲಕ್ಷ 70 ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಜನರಿಗೆ ಢವಢವ ಗುರುವಾಗಿದೆ.

Yadgir; ವಾಸಕ್ಕೆ ಮನೆಯಿಲ್ಲದೇ ಮದುವೆಯಿಂದ ವಂಚಿತ, ರಾತ್ರಿ ವಾಸಕ್ಕೆ 6 ಕಿಮೀ ಅಲೆದಾಟ!

ಮುಳುಗಡೆ ಭೀತಿಯಲ್ಲಿ ಕೊಳ್ಳೂರು(ಎಂ) ಸೇತುವೆ
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು (ಎಂ) ಗ್ರಾಮದ ಬಳಿಯ ಸೇತುವೆ ಮುಳುಗುವ ಹಂತ ತಲುಪಿದೆ. ರಾಯಚೂರು-ಕಲಬುರಗಿ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಈ ಕೊಳ್ಳೂರು (ಎಂ) ಬ್ರಿಡ್ಜ್ ಆಗಿದೆ. ಈ ಎರಡು ಜಿಲ್ಲೆಗಳಿಗೆ ವ್ಯಾಪಾರ, ವಹಿವಾಟು ನಡೆಸುವುದಕ್ಕೆ ಸಂಪರ್ಕಕೊಂಡಿಯಾಗಿರುವ ಸೇತುವೆ ಮುಳುಗಡೆ ಭಿತಿಯಲ್ಲಿದೆ.

ಕೊಟ್ಟ ಮಾತು ಈಡೇರಿಸದ ಅಂದಿನ ಬಿಎಸ್‌ವೈ ಸರ್ಕಾರ
Raining In Maharashtra Flood In Yadgir District rbj

ಈಗಿನ ಶಹಾಪುರ ತಾಲೂಕಿನ ಕೊಳ್ಳುರ ಎಂ ಗ್ರಾಮದಲ್ಲಿ ಹರಿಯುವ ಕೃಷ್ಣಾ ನದಿಗೆ 1968 ರಲ್ಲಿ ಸೇತುವೆ ನಿರ್ಮಾಣಮಾಡಲಾಗಿತ್ತು. ಇದು ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಸಂಪರ್ಕ ಪ್ರಮುಖ ರಸ್ತೆಯಾಗಿದೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಈಗಾಲೇ ಒಂದು ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಶಹಾಪುರ ತಾಲೂಕಿನ ಕೊಳ್ಳುರು ಎಂ ಸೇತುವೆ ಮುಳುಗಡೆ ಭೀತಿ ಶುರುವಾಗಿದೆ. ಸೇತುವೆ ಮುಳುಗಡೆಗೆ ಇನ್ನು ಎರಡರಿಂದ ಮೂರು ಅಡಿ ಮಾತ್ರ ಬಾಕಿ ಉಳಿದಿದೆ. ಅತ್ತ ಮಹಾರಾಷ್ಟ್ರದಲ್ಲಿ ಕ್ಷಣ ಕ್ಷಣಕ್ಕೂ ವರುಣಾರ್ಭಟ ಜೋರಾಗಿದ್ದೂ ಯಾವುದೇ ಕ್ಷಣಲದಲ್ಲಾದ್ರು ಮತ್ತೆ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಾದ್ಯತೆ ಇದೆ.

ಇದರಿಂದಾಗಿ ಕೊಳ್ಳುರ ಸೇತುವೆ ಮುಳುಗಡೆ ಭಿತಿ ಶುರುವಾಗಿದೆ. ಒಂದು ವೇಳೆ ಸೇತುವೆ ಮುಳುಗಡೆಯಾದ್ರೆ ಯಾದಗಿರಿ- ರಾಯಚೂರುಗೆ ಸಂಪರ್ಕ ಕಡಿತಗೊಳ್ಳುವ ಆತಂಕ ಕೃಷ್ಣಾ ನದಿ ತೀರದಲ್ಲಿ ಗ್ರಾಮಸ್ಥರಲ್ಲಿ ಶುರುವಾಗಿದೆ. 2019 ರಲ್ಲಿ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಸೇತುವೆಗೆ ಭೇಟಿ ನೀಡಿದ್ದರು, ಕೊಳ್ಳುರು ಸೇತುವೆ ಎತ್ತರಕ್ಕೆ ನಿರ್ಮಾಣ ಮಾಡುವ ಭರವಸೆ ನೀಡಿದ್ದರು. ಹಲವು ಸರ್ಕಾರಗಳು ಬಂದರು ಬರಿ ಭರವಸೆ ನೀಡುತ್ತಿದ್ದಾರೆ. ಕಾಗದ ಪತ್ರಗಳಿಗೆ ಮಾತ್ರ ಹೇಳಿಕೆಗಳು ಸೀಮಿತವಾಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದು, ಕೂಡಲೇ ಸೇತುವೆ ಎತ್ತರಕ್ಕೆ ಏರಿಸದಿದ್ದರೆ ಕೊಳ್ಳುರು ಗ್ರಾಮ ಸೇರಿದಂತೆ ಸುತ್ತ ಹತ್ತು ಹಳ್ಳಿ ಸೇರಿ ಉಗ್ರ ಹೋರಾಟ ಮಾಡುತ್ತೆವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು.

ಹಲವು ಗ್ರಾಮಗಳಿಗೆ ಮುಳುಗಡೆಯ ಭೀತಿ
ಯಾದಗಿರಿ ಜಿಲ್ಲೆಯ ಎರಡು ನದಿಗಳು ಅವಾಂತರ ಸೃಷ್ಟಿಸುವ ಸಾಧ್ಯತೆಯಿದ್ದು, ಕೃಷ್ಣಾ ನದಿಯ ಪ್ರವಾಹದಿಂದ ಹಲವು ಗ್ರಾಮಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ. ಯಾದಗಿರಿ ಜಿಲ್ಲೆಯ ತಾಲೂಕುಗಳಾದ ಸುರಪುರ, ಶಹಾಪುರ, ವಡಿಗೇರಾ ಗಳಲ್ಲಿ ಹೆಚ್ಚಿನ ಹಾನಿಯಾಗುವ ಸಾಧ್ಯತೆಯಿದೆ. ಶಹಾಪುರ ತಾಲೂಕಿನ ಕೊಳ್ಳೂರು, ಟೊಣ್ಣೂರು, ಮರ್ಕಲ್, ಗೌಡೂರು, ಯಕ್ಷಂತಿ ಗ್ರಾಮ ಸೇರಿ ಹಲವು ಗ್ರಾಮದ ಜನರು ರಾಯಚೂರು ಜಿಲ್ಲೆಗೆ ಹೆಚ್ಚಾಗಿ ವ್ಯಾಪಾರ ವ್ಯವಹಾರಕ್ಕೆ ಹೆಚ್ಚಾಗಿ ಹೋಗ್ತಾರೆ. ಅಷ್ಟೇ ಅಲ್ಲ, ಆಸ್ಪತ್ರೆ ಈಭಾಗದ ಜನ್ರು ಹೆಚ್ಚಾಗಿ  ರಾಯಚೂರು ಭಾಗಕ್ಕೆ ಆಸ್ಪತ್ರೆಗೆ ತೆರಳುತ್ತಾರೆ. ಈದೀಗ ಸೇತುವೆ ಮುಳುಗಡೆಯಾದ್ರೆ ಈ ಭಾಗದ ಜನ್ರಿಗೆ ಸಂಪರ್ಕ ಕಡಿತವಾಗಲಿದೆ.

Latest Videos
Follow Us:
Download App:
  • android
  • ios