ಮಂಗಳೂರು: ಕರಾವಳಿಯಲ್ಲಿ ಮಳೆ ಮತ್ತಷ್ಟು ಕ್ಷೀಣ
ಗ್ರಾಮಾಂತರ ಪ್ರದೇಶದಲ್ಲೂ ಇಡೀ ದಿನ ಮೋಡ, ಬಿಸಿಲು ಇತ್ತು. ಆದರೆ ಇಂದು ಗ್ರಾಮೀಣ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯ ಮುನ್ಸೂಚನೆ ನೀಡಿದ ಭಾರತೀಯ ಹವಾಮಾನ ಇಲಾಖೆ
ಮಂಗಳೂರು(ಆ.11): ಕರಾವಳಿಯಲ್ಲಿ ಮಳೆ ಮತ್ತಷ್ಟು ಕ್ಷೀಣವಾಗಿದೆ. ದ.ಕ.ಜಿಲ್ಲೆಯಲ್ಲಿ ಗುರುವಾರ ಮಳೆ ದೂರವಾಗಿದ್ದು, ಹಗಲು ಹೊತ್ತು ಬಿಸಿಲು, ಮೋಡ ಕಂಡುಬಂದಿದೆ. ಗ್ರಾಮಾಂತರ ಪ್ರದೇಶದಲ್ಲೂ ಇಡೀ ದಿನ ಮೋಡ, ಬಿಸಿಲು ಇತ್ತು. ಆದರೆ ಇಂದು(ಶುಕ್ರವಾರ) ಗ್ರಾಮೀಣ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಗುರುವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಸುಳ್ಯದಲ್ಲಿ ಗರಿಷ್ಠ 8.7 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬೆಳ್ತಂಗಡಿ 5.3 ಮಿ.ಮೀ, ಬಂಟ್ವಾಳ 5.6 ಮಿ.ಮೀ, ಮಂಗಳೂರು 1.5 ಮಿ.ಮೀ, ಪುತ್ತೂರು 4.2 ಮಿ.ಮೀ, ಮೂಡುಬಿದಿರೆ 6.1 ಮಿ.ಮೀ, ಕಡಬ 1.4 ಮಿ.ಮೀ, ಮೂಲ್ಕಿ 3.2 ಮಿ.ಮೀ, ಉಳ್ಳಾಲ 4.4 ಮಿ.ಮೀ. ಮಳೆಯಾಗಿದೆ. ದಿನದ ಸರಾಸರಿ ಮಳೆ 4.9 ಮಿ.ಮೀ. ಆಗಿದೆ.
ದ.ಕೊರಿಯಾದಲ್ಲಿ ಚಂಡಮಾರುತ; ರಾಜ್ಯದ 124 ಮಂದಿ ಸ್ಥಳಾಂತರ!
ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 24.20 ಮೀಟರ್, ಬಂಟ್ವಾಳ ನೇತ್ರಾವತಿ ನದಿ 3 ಮೀಟರ್, ಎಎಂಆರ್ ಡ್ಯಾಂ 18.9 ಮೀಟರ್, ತುಂಬೆ ಹಳೆ ಡ್ಯಾಂ 2.9 ಮೀಟರ್‌ನಲ್ಲಿ ಹರಿಯುತ್ತಿದೆ.