ಮಂಗಳೂರು(ಡಿ.04): ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕಾಣಿಸಿರುವ ಮಳೆ ಇನ್ನೂ ಎರಡ್ಮೂರು ದಿನ ಮುಂದುವರಿಯಲಿದೆ. 

ಕಳೆದ ಎರಡು ದಿನಗಳಿಂದ ದ.ಕ.ಜಿಲ್ಲೆಯಲ್ಲಿ ಸಂಜೆ ಹಾಗೂ ನಸುಕಿನ ಜಾವ ಸುರಿಯುತ್ತಿದ್ದ ಮಳೆ ಮಂಗಳವಾರವೂ ತನ್ನ ಇರವು ತೋರಿಸಿದೆ. ಮಂಗಳೂರು ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗಿನವರೆಗೆ ಸಾಧಾರಣ ಮಳೆಯಾಗಿದೆ. ಆದರೆ ಹಗಲು ಹೊತ್ತು ಮಳೆ ಕಾಣಿಸಿಲ್ಲ. ಸಂಜೆ ವರೆಗೂ ಮೋಡ ಕವಿದ ತಂಪಾದ ವಾತಾವರಣ ಕಂಡುಬಂದಿತ್ತು.

ರಾಜ್ಯದ ಈ ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ

ವಾಯುಭಾರ ಕುಸಿತದ ಪರಿಣಾಮ ಇನ್ನೂ ಎರಡ್ಮೂರು ದಿನಗಳ ಕಾಲ ಮುಂದುವರಿಯಲಿದ್ದು, ಮಳೆ ಅಥವಾ ಮಳೆಯ ವಾತಾವರಣ ಇರಲಿದೆ. ಕಡಲು ಪ್ರಕ್ಷುಬ್ದ ಸ್ಥಿತಿಯಲ್ಲಿ ಇರುವ ಸಂಭವ ಕಾರಣಕ್ಕೆ ಮೀನುಗಾರಿಕೆÜಗೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಂಗಳೂರು ಗರಿಷ್ಠ ಮಳೆ:

ಮಂಗಳವಾರ ಬೆಳಗ್ಗಿನ ವರೆಗೆ ಮಂಗಳೂರಲ್ಲಿ ಗರಿಷ್ಠ 17.4 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಬಂಟ್ವಾಳ 4.5 ಮಿ.ಮೀ, ಬೆಳ್ತಂಗಡಿ 2.3 ಮಿ.ಮೀ, ಪುತ್ತೂರು 1.3 ಮಿ.ಮೀ, ಸುಳ್ಯ 2.3 ಮಿ.ಮೀ. ಮಳೆ ದಾಖಲಾಗಿದೆ. ದಿನದ ಒಟ್ಟು ಮಳೆ 5.6 ಮಿ.ಮೀ. ಆಗಿದ್ದು, ಕಳೆದ ವರ್ಷ ಈ ದಿನ ಮಳೆಯಾಗಿಲ್ಲ. ಸರಾಸರಿ 19.6 ಮಿ.ಮೀ. ಮಳೆಯಾಗಿದ್ದು, ಡಿಸೆಂಬರ್‌ನಲ್ಲಿ ಒಟ್ಟು 16.2 ಮಿ.ಮೀ. ಮಳೆ ದಾಖಲಾಗಿದೆ.

ಸಂಸತ್ತಲ್ಲಿ ತುಳುಭಾಷೆ ಪರ ಧ್ವನಿಯೆತ್ತಿದ ಕೇರಳ ಸಂಸದ! ಕರಾವಳಿ ಎಂಪಿಗಳಿಗೆ ನೆಟ್ಟಿಗರ ಛೀಮಾರಿ!

ಜನವರಿಯಿಂದ ಈವರೆಗೆ ಒಟ್ಟು 4,183.9 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ 4,604.9 ಮಿ.ಮೀ. ಮಳೆಯಾಗಿತ್ತು. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ 6 ಮೀಟರ್‌ ಹಾಗೂ ಕುಮಾರಧಾರ ನದಿ 5 ಮೀಟರ್‌ ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿ 5 ಮೀಟರ್‌ ಎತ್ತರದಲ್ಲಿ ಹರಿಯುತ್ತಿದೆ.