Asianet Suvarna News Asianet Suvarna News

ಬೆಳಗಾವಿಯಲ್ಲಿ ಚುರುಕಾದ ಮಳೆ: ರೈತನ ಮೊಗದಲ್ಲಿ ಕಳೆ..!

ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ಸಹಜವಾಗಿ ಈ ಭಾಗದ ರೈತರು ಹಾಗೂ ಜನರ ಮುಖದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯವನ್ನೇ ಮಾಡಿಲ್ಲ. ಅಲ್ಪ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಿದ್ದರೂ ಬೆಳೆಗಳಿಗೆ ನೀರಿಲ್ಲದೇ ಕಮರುತ್ತಿವೆ. ಕಬ್ಬಿಗೆ ಸರಿಯಾದ ನೀರಿನಲ್ಲಿದೇ ಒಣಗುತ್ತಿರುವುದು ಕಂಡುಬಂದಿದೆ. ಬತ್ತದ ನಾಟಿ ಕೂಡ ಸಂಪೂರ್ಣವಾಗಿ ಆಗಿರಲಿಲ್ಲ. ಈಗ ಮಳೆಯಾಗುತ್ತಿರುವುದರಿಂದ ಸಹಜವಾಗಿ ಕೃಷಿ ಚಟುವಟಿಕೆಗಳು ತೀವ್ರ ಚುರುಕುಗೊಂಡಿವೆ.

Rain Starts in Belagavi District grg
Author
First Published Jul 19, 2023, 10:00 PM IST

ಬೆಳಗಾವಿ(ಜು.19): ಕಳೆದ ಎರಡ್ಮೂರು ದಿನಗಳಿಂದ ಬೆಳಗಾವಿ ಸೇರಿದಂತೆ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದೆ. ಜೂನ್‌ನಲ್ಲಿ ಮಳೆಯ ಪ್ರಮಾಣ ತೀವ್ರ ಕುಸಿತವಾಗಿತ್ತು. ಜುಲೈ ಮಧ್ಯಮಾವಧಿವರೆಗೂ ಅದೇ ಪರಿಸ್ಥಿತಿ ಮುಂದುವರಿದಿತ್ತು. ಆದರೆ, ಕಳೆದ ಎರಡ್ಮೂರು ದಿನಗಳಿಂದ ಪಶ್ಚಿಮಘಟ್ಟ, ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ನದಿಗಳಲ್ಲಿ ನೀರಿನಮಟ್ಟವು ಕೂಡ ಏರಿಕೆಯಾಗಿದೆ.

ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ಸಹಜವಾಗಿ ಈ ಭಾಗದ ರೈತರು ಹಾಗೂ ಜನರ ಮುಖದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯವನ್ನೇ ಮಾಡಿಲ್ಲ. ಅಲ್ಪ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಿದ್ದರೂ ಬೆಳೆಗಳಿಗೆ ನೀರಿಲ್ಲದೇ ಕಮರುತ್ತಿವೆ. ಕಬ್ಬಿಗೆ ಸರಿಯಾದ ನೀರಿನಲ್ಲಿದೇ ಒಣಗುತ್ತಿರುವುದು ಕಂಡುಬಂದಿದೆ. ಬತ್ತದ ನಾಟಿ ಕೂಡ ಸಂಪೂರ್ಣವಾಗಿ ಆಗಿರಲಿಲ್ಲ. ಈಗ ಮಳೆಯಾಗುತ್ತಿರುವುದರಿಂದ ಸಹಜವಾಗಿ ಕೃಷಿ ಚಟುವಟಿಕೆಗಳು ತೀವ್ರ ಚುರುಕುಗೊಂಡಿವೆ.

ಖಾನಾಪುರ: ಅನೈತಿಕ ಚಟುವಟಿಕೆ, ಕಾಡಿನಲ್ಲಿ ಜಲಪಾತಗಳ ವೀಕ್ಷಣೆಗೆ ನಿರ್ಬಂಧ

ಆರಂಭದಲ್ಲಿಯೇ ಮಳೆ ಕ್ಷೀಣಗೊಂಡಿದ್ದರಿಂದ ಕುಡಿಯುವ ನೀರಿಗೂ ಸಮಸ್ಯೆ ಉದ್ಭವವಾಗುವ ಆತಂಕ ರೈತರು ಹಾಗೂ ಜನರಲ್ಲಿತ್ತು. ಇದೀಗ ವರುಣ ದೇವ ತಡವಾಗಿಯಾದರೂ ಕೃಪೆ ತೋರಿದ್ದಾನೆ ಎಂದು ಸಂತಸಪಡುವಂತಾಗಿದೆ. ಬೆಳಗ್ಗೆಯಿಂದಲೇ ಉತ್ತಮ ಮಳೆ ಆರಂಭವಾಗಿದ್ದು, ಆಗಾಗ್ಗೆ ಸ್ವಲ್ಪ ಬಿರುಸಿನಿಂದಲೂ ಸುರಿಯುತ್ತಿದೆ.

ಇನ್ನೂ ಪಶ್ಚಿಮ ಘಟ್ಟಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ದೂಧಗಂಗಾ, ಮಹದಾಯಿ ನದಿಗಳಲ್ಲಿನ ಅಲ್ಪ ಪ್ರಮಾಣದಲ್ಲಿ ನೀರು ಏರಿಕೆಯಾಗಿದೆ. ಜತೆಗೆ ಬರಡು ಭೂಮಿಯಂತಾಗಿದ್ದ ಜಲಾಶಯಗಳಲ್ಲಿ ನೀರು ಹರಿದು ಬರುತ್ತಿದೆ. ಸವದತ್ತಿ ನವಿಲು ತೀರ್ಥ ಜಲಾಶಯದಲ್ಲಿ 657 ಕ್ಯುಸೆಕ್‌ ನೀರು ಒಳಹರಿವಿದೆ. ಅದರಂತೆ ಘಟಪ್ರಭಾ ನದಿ ಪಾತ್ರದಲ್ಲಿಯೂ ಅಲ್ಪ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಹಿಡಕಲ್‌ ಡ್ಯಾಂ ಜಲಾಶಯದಲ್ಲಿ 2230 ಕ್ಯುಸೆಕ್‌ ನೀರು ಹರಿದುಬರುತ್ತಿದೆ.

ಜೈನಮುನಿ ಹತ್ಯೆ ಆರೋಪಿಗಳಿಗೆ ಜು. 21ರವರೆಗೆ ನ್ಯಾಯ್ಯಾಂಗ ಕಸ್ಟಡಿಗೆ

ಕಳೆದ ಕೆಲ ದಿನಗಳಿಂದ ಆಗಾಗ್ಗೆ ಮಳೆರಾಯನ ದರ್ಶನವಾಗುತ್ತಿದ್ದರೂ, ನದಿಪಾತ್ರಗಳಲ್ಲಿ ನೀರು ಹರಿದು ಬರುತ್ತಿರಲಿಲ್ಲ. ಅಲ್ಲದೇ ಬೆಳಗಾವಿ, ಖಾನಾಪೂರ ಪ್ರದೇಶಗಳ ಭಾಗದಲ್ಲಿನ ಬೆಳೆಗಳಿಗೆ ಅನುಕೂಲವಾಗಿತ್ತು. ಆದರೆ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನರು ಮತ್ತು ರೈತರು ಸ್ವಲ್ಪ ನಿಟ್ಟುಸಿರುವ ಬೀಡುವಂತಾಗಿದೆ. ಇನ್ನೂ ಖಾನಾಪೂರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾದ ಬೆಳಗಾವಿ -​ಪಣಜಿ ಹೆದ್ದಾರಿಯ ಮಲಪ್ರಭಾ ನದಿಯ ಸೇತುವೆ ಹತ್ತಿರ ಬೃಹತ್‌ ಆಕಾರದ ಮರಯೊಂದು ಬಿದ್ದು ಕೆಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಸ್ತವ್ಯಸ್ತ ಉಂಟಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ, ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಇನ್ನೀತರ ಸಂಬಧಿಸಿದ ಅಧಿಕಾರಿಗಳು ರಸ್ತೆ ಮೇಲೆ ಬಿದ್ದಿರುವ ಮರವನ್ನು ಕಟಾವು ಮಾಡಿ ತರವುಗೊಳಿಸಿ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು.

ಇನ್ನೂ ಬೆಳಗಾವಿ ನಗರ ಪ್ರದೇಶಗಳಲ್ಲಿರುವ ತೆಗ್ಗು, ಗುಂಡಿಗಳಲ್ಲಿ ಹಾಗೂ ನಡುರಸ್ತೆಯಲ್ಲಿ ನೀರು ಸಂಗ್ರಹವಾಗಿದ್ದರಿಂದ ಕರೆ, ಕಟ್ಟೆಗಳಾಗಿ ನೋಡುಗರ ಕಣ್ಣಿಗೆ ಕಾಣುತ್ತಿವೆ. ನಗರ ಖಾನಾಪೂರ ರಸ್ತೆಯ ವಾಣಿಜೋದ್ಯಮಿಗಳ ಸಂಘದ ಕಚೇರಿ ಹತ್ತಿರ ಮುಖ್ಯರಸ್ತೆಯ ಮೇಲೆ ಸುಮಾರು ಒಂದು ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಎದುರುವಂತಾಗಿತ್ತು. ಮಳೆರಾಯಣ ಆರ್ಭಟ ಹೆಚ್ಚಾಗಿದ್ದು ಮಳೆಯ ಅಬ್ಬರಕ್ಕೆ ಇಂತಹ ಬೃಹತ್‌ ಆಕಾರದ ಮರಗಳು ಬಿಳುವ ಸಾಧ್ಯತೆಗಳಿವೆ. ಆದ್ದರಿಂದ ಬಿಳುವ ಹಂತದಲ್ಲಿರುವ ಮರಗಳನ್ನು ಗಮನಿಸಿ ಅರಣ್ಯ ಇಲಾಖೆಯು ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಆಗ್ರಹಿಸಿದ್ದಾರೆ.

Follow Us:
Download App:
  • android
  • ios