Asianet Suvarna News Asianet Suvarna News

ಜೈನಮುನಿ ಹತ್ಯೆ ಆರೋಪಿಗಳಿಗೆ ಜು. 21ರವರೆಗೆ ನ್ಯಾಯ್ಯಾಂಗ ಕಸ್ಟಡಿಗೆ

ಜು.17 ರಂದು ಮತ್ತೆ ವಿಚಾರಣೆ ನಡೆಸಿದ ನ್ಯಾಯ್ಯಾಲಯ ಜು.21 ರವರೆಗೆ ನ್ಯಾಯ್ಯಾಂಗ್‌ ಬಂಧನಕ್ಕೆ (ಕಸ್ಟಡಿಗೆ) ಚಿಕ್ಕೋಡಿಯ ಪ್ರಧಾನ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ಚಿದಾನಂದ ಬಡಿಗೇರ ಆದೇಶ ನೀಡಿದರು.

Jain Monk Murder Case Accused July 21st to Judicial Custody grg
Author
First Published Jul 18, 2023, 9:02 PM IST

ಚಿಕ್ಕೋಡಿ(ಜು.18):  ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರನ್ನು ಅಮಾನುಷವಾಗಿ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಚಿಕ್ಕೋಡಿಯ ಪ್ರಧಾನ ದಿವಾಣಿ ನ್ಯಾಯಾಲಯ ಜು.21ರವರೆಗೆ ನ್ಯಾಯ್ಯಾಂಗ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. 

ನಂದಿ ಪರ್ವತದ ಕಾಮಕುಮಾರ ಸ್ವಾಮೀಜಿಯವರನ್ನು ಭೀಭತ್ಸವಾಗಿ ಹತ್ಯೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಕೊಳೆವೆ ಬಾವಿಗೆ ಹಾಕಿದ ಎ 1 ಆರೋಪಿ ನಾರಾಯಣ ಮಾಳಿ ಹಾಗೂ ಎ 2 ಆರೋಪಿ ಹಸನ್‌ ಡಾಲಾಯತ್‌ ಕಳೆದ ಒಂದು ವಾರ ಕಾಲ ತನಿಖೆಗಾಗಿ ಪೊಲೀಸ್‌ ಕಸ್ಟಡಿಗೆ ನೀಡಿತ್ತು. ಜು.17 ರಂದು ಮತ್ತೆ ವಿಚಾರಣೆ ನಡೆಸಿದ ನ್ಯಾಯ್ಯಾಲಯ ಜು.21 ರವರೆಗೆ ನ್ಯಾಯ್ಯಾಂಗ್‌ ಬಂಧನಕ್ಕೆ (ಕಸ್ಟಡಿಗೆ) ಚಿಕ್ಕೋಡಿಯ ಪ್ರಧಾನ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ಚಿದಾನಂದ ಬಡಿಗೇರ ಆದೇಶ ನೀಡಿದರು.

Jain monk murder case: ಎದೆ ಬಡಿದುಕೊಂಡು ಅತ್ತಿದ್ದ ಮುನಿ ಹಂತಕ ಮಾಳಿ!

ತನಿಖಾಧಕಾರಿ ಡಿವೈಎಸ್ಪಿ ಬಸವರಾಜ ಯಲಿಗಾರ ನೇತೃತ್ವದ ಪೊಲೀಸ್‌ ತಂಡ ಬಿಗಿ ಬಂದೋಬಸ್ತ್‌ನಲ್ಲಿ ಚಿಕ್ಕೋಡಿಯ ಪ್ರಧಾನ ದಿವಾಣಿ ನ್ಯಾಯಾಲಯಕ್ಕೆ ತಂದು ಆರೋಪಿಗಳನ್ನು ಹಾಜರು ಪಡಿಸಿದ ಬಳಿಕ ಮತ್ತೆ ಜು.21 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದರಿಂದ ಆರೋಪಿಗಳನ್ನು ಬೆಳಗಾವಿ ನಗರದ ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಲಾಯಿತು.

Follow Us:
Download App:
  • android
  • ios