ತುಮಕೂರು (ಫೆ.19):  ತುಮಕೂರಿನಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಮಳೆಯಾಗಿದೆ. 

ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಆದರೆ ಮಧ್ಯಾಹ್ನದ ವೇಳೆ ಮೋಡ ಮರೆಯಾಗಿ ಸುಡು ಬಿಸಲಿತ್ತು. 

ರಾತ್ರಿ 8.15 ಕ್ಕೆ ಆರಂಭವಾದ ಮಳೆ 8.45 ರವರೆಗೆ ಸುರಿಯಿತು. ಮಳೆಯಿಂದಾಗಿ ತಂಪಿನ ವಾತಾವರಣವಿತ್ತು. ಕಳೆದ ಮೂರು ದಿವಸಗಳಿಂದ ಸಾಕಷ್ಟುಸೆಖೆ ಇದ್ದು ಈ ಮಳೆಯಿಂದಾಗಿ ಜನ ಖುಷಿಗೊಂಡಿದ್ದಾರೆ.

ರಾಜ್ಯದ ವಿವಿಧೆಡೆ ಅಕಾಲಿಕ ಮಳೆ: ಸಿಡಿಲಿಗೆ ಕಾರ್ಮಿಕ ಸಾವು ..

ಹಲವು ಜಿಲ್ಲೆಗಳಲ್ಲಿ ಮಳೆ 
ಮೈಸೂರು, ತುಮಕೂರು, ಮಂಡ್ಯ, ಚಿತ್ರದುರ್ಗ, ಧಾರವಾಡ, ಹಾವೇರಿ, ಕೊಪ್ಪಳ, ಗದಗ, ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಗುರುವಾರ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಅಕಾಲಿಕವಾಗಿ ಸುರಿದ ದಿಢೀರ್‌ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.