ಶಿವಮೊಗ್ಗ: ಜಿಲ್ಲಾದ್ಯಂತ ಭಾರೀ ಮಳೆ

ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಮತ್ತೊಮ್ಮೆ ಚುರುಕುಗೊಂಡಿದೆ. ಕೆಲವು ದಿನಗಳ ಹಿಂದೆ ಮಲೆನಾಡಿನಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿತ್ತು. ಇದೀಗ ಮತ್ತೆ ಮುಂಗಾರು ಚುರುಕುಗೊಂಡಿದ್ದು ಶುಕ್ರವಾರವೂ ಮಳೆ ಮುಂದುವರಿದಿದೆ.

Rain Lashes in Shivamogga District

ಶಿವಮೊಗ್ಗ(ಜು): ಮಲೆನಾಡಿನಲ್ಲಿ ಕೆಲವು ದಿನಗಳ ಹಿಂದೆ ಮಳೆ ಕಡಿಮೆಯಾಗಿತ್ತು. ಇದೀಗ ಮತ್ತೆ ಮುಂಗಾರು ಚುರುಕುಗೊಂಡಿದ್ದು ಜಿಲ್ಲೆಯಾದ್ಯಂತ ಮಳೆಯಾಗಿದೆ.

ಗುರುವಾರ ರಾತ್ರಿಯಿಂದಲೆ ಚುರುಕುಗೊಂಡಿದ್ದ ಮುಂಗಾರು ಮಳೆ ಶುಕ್ರವಾರವೂ ಮುಂದುವರಿದಿದೆ. ಕೆಲದಿನಗಳಿಂದ ಇಳಿಕೆಯಾಗಿದ್ದ ಮಳೆಯ ಪ್ರಮಾಣ ಮತ್ತೆ ಹೆಚ್ಚಾಗುವ ಭರವಸೆ ಮೂಡಿಸಿದೆ.

ಭಾರಿ ಮಳೆ-ಗಾಳಿ : ಕರಾವಳಿಯಲ್ಲಿ ಕಟ್ಟೆಚ್ಚರ

ಶುಕ್ರವಾರ ಬೆಳಗ್ಗೆ 8 ರವರೆಗೆ ಶಿವಮೊಗ್ಗ 6.60 ಮಿ.ಮೀ., ಭದ್ರಾವತಿ 16.20 ಮಿ.ಮೀ., ತೀರ್ಥಹಳ್ಳಿ 18.60 ಮಿ.ಮೀ., ಸಾಗರ 21.80 ಮಿ.ಮೀ., ಶಿಕಾರಿಪುರ 2 ಮಿ.ಮೀ., ಸೊರಬ 8.30 ಮಿ.ಮೀ ಹಾಗೂ ಹೊಸನಗರ 23.20 ಮಿ.ಮೀ., ಮಳೆಯಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭದ್ರಾ ಜಲಾಶಯ ನೀರಿನ ಮಟ್ಟ:

ಗರಿಷ್ಠ ಮಟ್ಟ- 186 ಅಡಿ.

ಇಂದಿನ ಮಟ್ಟ- 141.20 ಅಡಿ.

ಒಳ ಹರಿವು- 6,220 ಕ್ಯು.

ಹೊರಹರಿವು- 213 ಕ್ಯು.

Latest Videos
Follow Us:
Download App:
  • android
  • ios