ಮಲೆನಾಡಿನಲ್ಲಿ ಮುಂಗಾರು ಅಬ್ಬರ : ತುಂಬಿ ಹರಿಯುತ್ತಿರುವ ತುಂಗೆ, ಭದ್ರೆ
ಕೆಲವು ದಿನಗಳ ಹಿಂದೆ ಬಿಡುವು ನೀಡಿದ್ದ ಮುಂಗಾರು ಮಳೆ ಮಲೆನಾಡಿನಲ್ಲಿ ಶುಕ್ರವಾರ ಚುರುಕುಗೊಂಡಿತ್ತು. ಗುರುವಾರ ರಾತ್ರಿಯಿಂದಲೇ ಆರಂಭವಾದ ಮಳೆ ಶುಕ್ರವಾರ ಮಲೆನಾಡಿನ ಹಲವೆಡೆ ನಿರಂತರವಾಗಿ ಸುರಿಯಿತು. ಚಿಕ್ಕಮಗಳೂರಿನ ಹಲವೆಡೆ ಮಳೆ ಬಾರದೆ ಕುಡಿಯುವ ನೀರಿಗೂ ಹಾಹಾಕಾರವಿತ್ತು.
ಚಿಕ್ಕಮಗಳೂರು(ಜು.27): ಕೆಲವು ದಿನಗಳ ಹಿಂದೆ ಬಿಡುವು ನೀಡಿದ್ದ ಮುಂಗಾರು ಮಳೆ ಮಲೆನಾಡಿನಲ್ಲಿ ಶುಕ್ರವಾರ ಚುರುಕುಗೊಂಡಿತ್ತು. ಗುರುವಾರ ರಾತ್ರಿಯಿಂದಲೇ ಆರಂಭವಾದ ಮಳೆ ಶುಕ್ರವಾರ ಮಲೆನಾಡಿನ ಹಲವೆಡೆ ನಿರಂತರವಾಗಿ ಸುರಿಯಿತು.
ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲೂಕುಗಳಲ್ಲಿ ಗುರುವಾರ ರಾತ್ರಿಯಿಂದಲೇ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಸ್ವಲ್ಪಮಟ್ಟಿಗೆ ಏರಿಕೆ ಕಂಡುಬಂದಿದೆ. ಮುಂದಿನ 24 ಗಂಟೆಗಳಲ್ಲಿ ಈ ನದಿಗಳ ಜಲಾಶಯಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗಲಿದೆ.
ಬಿಡುವಿಲ್ಲದ ಮಳೆ:
ಶೃಂಗೇರಿ ತಾಲೂಕಿನಾದ್ಯಂತ ಬಿಡುವಿಲ್ಲದೇ ಮಳೆ ಸುರಿಯುತ್ತಿದೆ. ಕೊಪ್ಪ ತಾಲೂಕಿನಲ್ಲಿ ಬೆಳಗ್ಗೆಯಿಂದ ಮಳೆ ಸುರಿದಿದ್ದು, ಮಧ್ಯಾಹ್ನದ ವೇಳೆಗೆ ಸ್ವಲ್ಪ ಬಿಡುವು ಕೊಟ್ಟಿತ್ತಾದರೂ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಮೂಡಿಗೆರೆ ಮತ್ತು ನರಸಿಂಹರಾಜಪುರ ತಾಲೂಕುಗಳಲ್ಲೂ ಮಳೆ ಮತ್ತು ಮೋಡ ಮುಂದುವರಿದಿತ್ತು.
ತುಂತುರು ಮಳೆಯಿಂದ ಬೆಳೆಗಳಿಗೆ ತೇವಾಂಶ:
ಜಿಲ್ಲಾ ಕೇಂದ್ರದಲ್ಲಿ ಬೆಳಗ್ಗೆಯಿಂದಲೇ ಮಳೆ ನಿರಂತರವಾಗಿ ಬರುತ್ತಿತ್ತು. ಸಂಜೆಯಾದರೂ ಮಳೆ ನಿಂತರಲಿಲ್ಲ. ಆದರೆ, ಮಳೆ ತುಂತುರು ಆಗಿದ್ದರಿಂದ ಜನರಿಗೆ ಪಿರಿಪಿರಿ ಎನಿಸುತ್ತಿತ್ತು. ಆದರೂ, ಇನ್ನು ಮಳೆ ಬರಲೀ ಎಂದು ಆಶಿಸುತ್ತಿದ್ದಾರೆ. ಕಡೂರು ಮತ್ತು ತರೀಕೆರೆ ತಾಲೂಕಿನ ಬಯಲುಸೀಮೆ ಪ್ರದೇಶದಲ್ಲೂ ತುಂತುರು ಮಳೆಯಾಗಿದೆ. ಬಿಸಿಲಿನ ಝಳಕ್ಕೆ ತತ್ತರಿಸಿದ ಬೆಳೆಗಳಿಗೆ ತೇವಾಂಶದ ಆಶ್ರಯ ಸಿಕ್ಕಿದಂತಾಗಿದೆ.
ಶಿವಮೊಗ್ಗ: ಜಿಲ್ಲಾದ್ಯಂತ ಭಾರೀ ಮಳೆ
ಎಲ್ಲೆಲ್ಲಿ ಎಷ್ಟೆಷ್ಟು ಮಳೆ?:
ಶುಕ್ರವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳಲ್ಲಿ ಹೋಬಳಿವಾರು ಆಗಿರುವ ಮಳೆಯ ವಿವರ ಮಿ.ಮೀ.ಗಳಲ್ಲಿ ಇಂತಿದೆ. ಚಿಕ್ಕಮಗಳೂರು ತಾಲೂಕಿನ ಕಸಬಾ ಹೋಬಳಿ 36, ಅಂಬಳೆ ಹೋಬಳಿ 6, ಆಲ್ದೂರು 10, ಸಂಗಮೇಶ್ವರಪೇಟೆ 19, ಕಳಸಾಪುರ 2, ಆವತಿ 16, ಜಾಗರ 10, ವಸ್ತಾರೆ 9, ಕಡೂರು ತಾಲೂಕಿನ ಬೀರೂರು 2, ಹಿರೇನಲ್ಲೂರು 1, ಸಖರಾಯಪಟ್ಟಣ 1, ಸಿಂಗಟಗೆರೆ 3, ಯಗಟಿ 1, ಹಿರೇಚೌಳೂರು 1, ಪಂಚನಹಳ್ಳಿ ಹೋಬಳಿಯಲ್ಲಿ 11 ಮಿ.ಮೀ. ಮಳೆಯಾಗಿದೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೊಪ್ಪ ತಾಲೂಕಿನ ಕಸಬಾ ಹೋಬಳಿಯಲ್ಲಿ 11, ಹರಿಹರಪುರ 17, ಮೇಗುಂದ 26, ಮೂಡಿಗೆರೆ ತಾಲೂಕಿನ ಕಸಬಾ 17, ಬಣಕಲ್ 22, ಗೋಣಿಬೀಡು 27, ಕಳಸ 25, ಜಾವಳಿ 24, ನರಸಿಂಹರಾಜಪುರ ತಾಲೂಕಿನ ಕಸಬಾ 13, ಬಾಳೆಹೊನ್ನೂರು 13, ಶೃಂಗೇರಿ ತಾಲೂಕಿನ ಕಸಬಾ 31, ಕಿಗ್ಗ 46, ತರೀಕೆರೆ ತಾಲೂಕಿನ ಕಸಬಾ 10, ಅಜ್ಜಂಪುರ 2, ಅಮೃತಾಪುರ 6, ಲಕ್ಕವಳ್ಳಿ 14, ಲಿಂಗದಹಳ್ಳಿ 3 ಹಾಗೂ ಶಿವನಿ ಹೋಬಳಿಯಲ್ಲಿ 1 ಮಿ.ಮೀ. ಮಳೆಯಾಗಿದೆ.