ರಾಜ್ಯಕ್ಕೆ ಶನಿವಾರ ಕಾಲಿಟ್ಟ ಮುಂಗಾರು, ಭಾನುವಾರ ರಾಜಧಾನಿಯ ವಿವಿಧ ಭಾಗದಲ್ಲಿ ಮಳೆಯಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ನಗರದಲ್ಲಿ ಬಿಸಿಲಿನ ವಾತಾವರಣ ಕಂಡು ಬಂದರೂ ಸಂಜೆ ವೇಳೆ ನಗರದ ಹಲವೆಡೆ ಸಾಧಾರಣ ಮಳೆಯಾಗಿದೆ.

ಬೆಂಗಳೂರು(ಜೂ.12): ರಾಜಧಾನಿ ಬೆಂಗಳೂರಿಗೆ ಮುಂಗಾರು ಮಳೆ ಆಗಮನವಾಗಿದ್ದು, ಭಾನುವಾರ ನಗರದ ಕೆಲವೆಡೆ ಸಾಧಾರಣ ಮಳೆಯಾಗಿದೆ. ರಾಜ್ಯಕ್ಕೆ ಶನಿವಾರ ಕಾಲಿಟ್ಟ ಮುಂಗಾರು, ಭಾನುವಾರ ರಾಜಧಾನಿಯ ವಿವಿಧ ಭಾಗದಲ್ಲಿ ಮಳೆಯಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ನಗರದಲ್ಲಿ ಬಿಸಿಲಿನ ವಾತಾವರಣ ಕಂಡು ಬಂದರೂ ಸಂಜೆ ವೇಳೆ ನಗರದ ಹಲವೆಡೆ ಸಾಧಾರಣ ಮಳೆಯಾಗಿದೆ.

ದಾಸರಹಳ್ಳಿ, ಮಹದೇವಪುರ, ಮೆಜೆಸ್ಟಿಕ್‌, ಶಿವಾನಂದ ವೃತ್ತ, ಆನಂದ್‌ ರಾವ್‌ ವೃತ್ತ, ಗಾಂಧಿನಗರ, ಕೆ.ಆರ್‌.ಸರ್ಕಲ್‌, ಮಲ್ಲೇಶ್ವರ ಸೇರಿದಂತೆ ವಿವಿಧ ಭಾಗದಲ್ಲಿ ಮಳೆಯಾದ ವರದಿಯಾಗಿದೆ. ಕೆಲವು ಭಾಗದಲ್ಲಿ ಸೋನೆ ಮಳೆಯಾದರೆ, ಮತ್ತೆ ಕೆಲವು ಕಡೆ ಸಾಧಾರಣ ಮಳೆಯಾಗಿದೆ. ಮಹದೇವಪುರ ವಲಯದ ರಾಮಮೂರ್ತಿ ನಗರದಲ್ಲಿ 1 ಸೆಂ.ಮೀ. ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಕರಾವಳಿಗೆ ಈಗ ಚಂಡಮಾರುತ ದಾಳಿ ಭೀತಿ: ಇಂದಿನಿಂದ ಕರಾವಳಿಯಲ್ಲಿ 3 ದಿನ ಮಳೆ ಸಾಧ್ಯತೆ

ಇನ್ನು ಮುಂಗಾರು ಮಳೆಗೆ ತುಮಕೂರು ರಸ್ತೆಯ ಪೀಣ್ಯ ಫ್ಲೈಓವರ್‌ ಮೇಲೆ ಭಾರೀ ಪ್ರಮಾಣ ನೀರು ನಿಂತು ವಾಹನ ಸವಾರರ ಪರದಾಡಿದ ಘಟನೆ ನಡೆದಿದೆ.