Tumakuru Rain; ಮುಳುಗಿದ ಏಷ್ಯಾದ ಅತೀ ದೊಡ್ಡ ಸೌರ ಘಟಕ, ಯುವಕ ಈಜುತ್ತಿರುವ ವಿಡಿಯೋ ವೈರಲ್

ಏಷ್ಯಾದ ಅತೀ ದೊಡ್ಡ ಸೌರ ಘಟಕ ಅನ್ನೋ ಹೆಗ್ಗಳಿಕೆ ಹೊಂದಿರುವ ತುಮಕೂರು ಜಿಲ್ಲೆಯ  ಪಾವಗಡದ ಸೋಲಾರ್ ಪಾರ್ಕ್ ಮಳೆಯಿಂದಾಗಿ ಮುಳುಗಡೆಯಾಗಿದೆ. ಪಾರ್ಕ್ ನಲ್ಲಿ   ಯುವಕನೋರ್ವ ಈಜು ಹೊಡೆದಿದ್ದು, ಇದಕ್ಕೆ ಆಕ್ರೋಶ ವ್ಯಕ್ತವಾಗಿದೆ.

Rain damages Asia's largest Pavagada solar plant gow

ಬೆಂಗಳೂರು (ಅ.17):  ತುಮಕೂರು ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆ ಪಾವಗಡದ ಸೋಲಾರ್ ಪಾರ್ಕ್ ಮುಳುಗಡೆಯಾಗಿದೆ. ಇದು  ಏಷ್ಯಾದ ಅತೀ ದೊಡ್ಡ ಸೌರ ಘಟಕ ಅನ್ನೋ ಹೆಗ್ಗಳಿಕೆ ಹೊಂದಿದೆ. ಇನ್ನು ಜಲಾವೃತವಾಗಿರುವ ಸೋಲಾರ್ ಪಾರ್ಕ್ ನಲ್ಲಿ   ಯುವಕನೋರ್ವ ಈಜು ಹೊಡೆದಿದ್ದು, ಯುವಕ ಈಜುತ್ತಿರುವ ವಿಡಿಯೋ ವೈರಲ್ ಆಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಗ್ರಾಮದಲ್ಲಿ ಈ ಸೋಲಾರ್ ಪಾರ್ಕ್ ಇದ್ದು  ಸುಮಾರು 12500 ಎಕರೆ ವಿಸ್ತೀರ್ಣದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ವಳ್ಳೂರು ಮತ್ತು ಕ್ಯಾತಗಾನ ಕೆರೆ ಗ್ರಾಮಗಳ ಮದ್ಯೆ ಮುಳುಗಡೆ ಸೋಲಾರ್ ಘಟಕ ಮುಳುಗಡೆಯಾಗಿದ್ದು. ಎರಡು ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯವನ್ನು ಇದು ಹೊಂದಿದೆ. ಮುಳುಗಡೆಯಾಗಿರುವ ಸೋಲಾರ್ ಪ್ಯಾನೆಲ್ ಗಳ ಸುತ್ತಲೂ ವಿದ್ಯುತ್ ಪ್ರವಹಿಸುತ್ತಿದೆ, ಆದರೆ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟಕದಲ್ಲಿ  ಯುವಕ ಈಜಾಡಿದ್ದಾನೆ. ಈ ವೇಳೆ ಅವಘಡವಾಗಿದ್ರೆ ಯಾರು ಹೊಣೆ ಅನ್ನೋದು ಸಾರ್ವಜನಿಕರ ಪ್ರಶ್ನೆ. ಸಾರ್ವಜನಿಕ ವಲಯದಲ್ಲಿ ಸೌರ ಪಾರ್ಕ್ ವೈಫಲ್ಯದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮೂವತ್ತು ವರ್ಷಕ್ಕಿಂತ ಮೇಲಾಗಿ ರೋಡ್ ಲ್ಲಿ ಓಡಾಡ್ತಾ ಇದ್ದರೆ, ಅದನ್ನು ಖಾಯಂ ರೋಡಾಗಿ ಬಳಸಲು ಸೂಚನೆ: ಮಾಧುಸ್ವಾಮಿ 
ಮೂವತ್ತು ವರ್ಷಕ್ಕಿಂತ ಮೇಲಾಗಿ ರೋಡ್ ಲ್ಲಿ ಓಡಾಡ್ತಾ ಇದ್ದರೆ, ಅದನ್ನು ಖಾಯಂ ರೋಡಾಗಿ ಬಳಸಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ. ಪ್ರತಿ ತಿಂಗಳಲ್ಲಿ ಡಿಸಿ ಒಂದು ಹಳ್ಳಿಗೆ ಹೋಗಲೇಬೇಕು.ಸರ್ವೆ ಸಮಸ್ಯೆ ಪರಿಹರಿಸಬೇಕು. ಇಂದಿನ ಸಭೆಯಲ್ಲಿ ಮಳೆ‌ ನಿರ್ವಹಣೆ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಆಯುಷ್ ಮಾನ್ ಭಾರತ್ ಕಾರ್ಡ್ ಸಕಾಲದಲ್ಲಿ ತಲುಪಿಸಬೇಕು. ಕಂದಾಯ ಇಲಾಖೆಯಲ್ಲಿ ಪೌತಿ , ಅಳತೆ ,ಜಮೀನು ದಾರಿ ಸಮಸ್ಯೆ ಇದರ ಬಗ್ಗೆ ಚರ್ಚೆ ಆಗಿದೆ. ಅದರ  ಪರಿಶೀಲನೆಗೆ ಸೂಚನೆ ಆಸ್ಪತ್ರೆ ಬಗ್ಗೆ ಚರ್ಚೆ  ಹೆರಿಗೆ ಆದ ತಾಯಿಂದರ ಮಕ್ಕಳ ಸಾವು ಪಕ್ಕದ ರಾಜ್ಯಕ್ಕೆ ಹೋಲಿಕೆ ಮಾಡಿದಾಗ ನಮ್ಮಲ್ಲಿ ಜಾಸ್ತಿ ಇದೆ. ಇದರ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತವಾಯಿತು.

Koppal: ಸೋಲಾರ್‌ ಕಂಪನಿಗೆ 400 ಎಕರೆ ರೈತರ ಭೂಮಿ

ಜಮೀನಿನಲ್ಲಿ ಅಕ್ರಮವಾಗಿ ಇದ್ದು ಉಳಿಮೆ ಮಾಡುತ್ತಿದ್ದವರಿಗೆ ಸಕ್ರಮ ಮಾಡುತ್ತೇವೆ. 3647 ಗ್ರಾಮ ಕಂದಾಯ ಗ್ರಾಮವಾಗಿ ಘೋಷಣೆ. 984 ಗ್ರಾಮಗಳಲ್ಲಿ ಹಕ್ಕು ಪತ್ರ ವಿತರಣೆ ಆಗಿದೆ. ರೆವಿನ್ಯೂ ಕೋರ್ಟ್ ನಲ್ಲಿ ಇರುವ ಕೇಸ್ ಗಳ ಬಗ್ಗೆ ಜಾಗ್ರತಿ ವಿಲೇವಾರಿ ಮಾಡಬೇಕು. ಡಿಸಿ ಜೊತೆ ಅಡಿಶ್ನಲ್ ಡಿಸಿ ಕೂಡ ವಿಲೇವಾರಿ ಮಾಡಲು ಸೂಚನೆ.

ಸೋಲಾರ್‌ ಪಾರ್ಕ್‌ನಲ್ಲಿ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ: ಡಿ.ಕೆ.ಶಿವಕುಮಾರ್‌

ಆಯುಷ್ ಮಾನ್ ಕಾರ್ಡ್ ನೀಡಲು ಟಾರ್ಗೆಟ್ ಫಿಕ್ಸ್: ನಗರೊತ್ಥಾನ 3885 ಕೋಟಿ ಅನುದಾನ ಕೊಡಲಾಗಿದೆ. ಮಾರ್ಚ್ 15 ರ ಒಳಗೆ ಮುಗಿಸಲು ಸೂಚನೆ. ಸಂಪೂರ್ಣ ಹಾಳಾಗಿರುವ ಮನೆ ಕಟ್ಟಲು ಹಣ ತಗೊಂಡವರು ಕಡಿಮೆ. ಎ ಕೆಟೆಗೆರಿಯವರು ಮನೆ ತಗೊಂಡವರು ಕಡಿಮೆ. ಅರ್ಹತೆ ಇಲ್ಲದವರು ಮನೆ ತಗೊಂಡರೆ ಮೂರು ನೊಟೀಸ್ ನೀಡಿ ಕ್ಯಾನ್ಸಲ್ ಮಾಡಬೇಕು. ಕ್ಯಾಟಗಿರಿ ಬಿ, ಸಿ ಮನೆಗೆ ಕಟ್ಟಿದ ಮೇಲೆ ಮತ್ತೆ ಡ್ಯಾಮೇಜ್ ಆದರೆ ndrf ಮಾನದಂಡದಡಿ ಮತ್ತೆ ಸರಿ ಮಾಡಿಕೊಡಬೇಕು.

Latest Videos
Follow Us:
Download App:
  • android
  • ios