ಗದಗ ಮಳೆ ಅವಾಂತರ : ಪೆಟ್ರೋಲ್ ಬಂಕ್, ಹಾಸ್ಟೆಲ್‌ಗೆ ನುಗ್ಗಿದ ನೀರು..!
ಗದಗನಲ್ಲಿ ಭಾರೀ ಮಳೆಯಾಗಿದ್ದು ನಗರದ ಕೆಲವೆಡೆ ಮನೆ, ಹಾಸ್ಟೆಲ್, ಪೆಟ್ರೋಲ್ ಬಂಕ್‌ಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ
ಗದಗ (ಜು.28) : ನಗರದ ಕಲವೆಡೆ ರಾತ್ರಿ ಸುರಿದ ಮಳೆಯಿಂದಾಗಿ ಅವಂತರ ಸೃಷ್ಟಿಯಾಗಿತ್ತು.. ಮಧ್ಯರಾತ್ರಿಯಿಂದ ಧಾರಾಕಾರ ಸುರಿದಮಳೆ ಬೆಳಗಿನವರೆಗೆ ಮುಂದುವರೆದಿತ್ತು.. ಇದ್ರಿಂದಾಗಿ ರಾಜಕಾಲುವೆ ತುಂಬಿ ಕೆಲ ಬಡಾವಣೆಯಲ್ಲಿ ನೀರು ನುಗ್ಗಿತ್ತು.. ಬೆಟಗೇರಿಯ ಮಂಜುನಾಥ್(Betageri Manjunath) ನಗರದ ರಾಜಕಾಲುವೆ(Rajakaaluve) ತುಂಬಿ, ಪಕ್ಕದ ಏರಿಯಾಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಜನರು ಪರದಾಡುವಂತಾಗಿದೆ. ಸುಮಾರು 100 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ. ಮನೆಯೊಳಗೆ ನೀರು ನುಗ್ಗಿ ಮನೆಯಲ್ಲಿನ ಎಲ್ಲಾ ವಸ್ತುಗಳು ನೀರಲ್ಲಿ ನಿಂತಿವೆ. ಆಹಾರ ಪದಾರ್ಥಗಳು, ಅಡುಗೆ ಸಿಲಿಂಡರ್, ಫ್ರಿಡ್ಜ್, ಬಟ್ಟೆಗಳು ಸಹ ನೀರಲ್ಲಿ ತೊಯ್ದು ಹೋಗಿದ್ವು..
ಹೋಟೆಲ್ ಗೆ ಹೊಕ್ಕ ನೀರು.. ಪೆಟ್ರೋಲ್ ಟ್ಯಾಂಕ್ ನಲ್ಲೂ ನೀರು..!
ಮಂಜುನಾಥ್ ಬಡಾವಣೆಯ ಸಾವಜಿ ಹೋಟೆಲ್ನಲ್ಲೂ ನೀರು ಹೊಕ್ಕು ಹೋಟೆಲ್ ಸಿಬ್ಬಂದಿ ಪರದಾಡಿದ್ರು. ಮಕ್ಕಳು ಮಹಿಳೆಯರು, ವೃದ್ಧರು ಊಟ ನಿದ್ದೆ ಇಲ್ದೆ ರಾತ್ರಿ ಪರದಾಡಿದ್ದಾರೆ.. ಕಾಲುವೆಯ ಹೆಚ್ಚುವರಿ ನೀರು ನುಗ್ಗಿ ಮುಖ್ಯ ರಸ್ತೆಬಳಿಯ ಪರ್ವತಗೌಡ ಪೆಟ್ರೋಲ್ ಬಂಕ್ನಲ್ಲೂ ನೀರು ಹೊಕ್ಕು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.. ಪೆಟ್ರೋಲ್, ಡೀಸೆಲ್ ಟ್ಯಾಂಕ್ ನಲ್ಲಿ ನೀರು ಹೊಕ್ಕಿದೆ.. ಪರಿಣಾಮ ನೀರಿನ ಜೊತೆಗೆ ಪೆಟ್ರೋಲ್ ಮಿಶ್ರಣವಾಗಿ ವಾಹನಗಳಿಗೆ ಹಾಕದಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕಾಲುವೆಯಲ್ಲಿನ ಹೂಳೆತ್ತದಿರುವುದು ಒಂದು ಕಾರಣ ಮತ್ತು ರಾಜಕಾಲುವೆಯನ್ನ ಅವೈಜ್ನಾನಿಕವಾಗಿ ನಿರ್ಮಾಣ ಮಾಡಿದ್ದರಿಂದ ಇಕ್ಕಾಟಗಿದ್ದರಿಂದ ನೀರು ಸರಾಗವಾಗಿ ಹರಿದುಹೋಗಲು ಆಸ್ಪದವಾಗದೇ ನೀರೆಲ್ಲ ಬಡವಾಣೆಗಳಲ್ಲಿ ಹೊಕ್ಕಿದೆ. ಆದ್ರೆ ಅಧಿಕಾರಿಗಳು ಮಾತ್ರ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾ ಜನ ಆರೋಪಿಸಿದ್ದಾರೆ.
ದಗ: ಪ್ರವಾಹದಿಂದ ನಲುಗಿದವರಿಗೆ ಬೇಕಿದೆ ಪರಿಹಾರ
ಹಾಸ್ಟೆಲ್ ನಲ್ಲೂ ಮಳೆ ನೀರು ವಿಧ್ಯಾರ್ಥಿಗಳಿಗೆ ತೊಂದರೆ:
ಗದಗ ನಗರದ ಹಾತಲಗೇರಿ ರಸ್ತೆಯಲ್ಲಿರುವ ಸಾಯಿಬಾಬಾ ದೇವಸ್ಥಾನ ಹತ್ತಿರವಿರುವ ಪೋಸ್ಟ್ ಮೆಟ್ರಿಕ್ ಬಾಯ್ಸ್ ಹಾಸ್ಟೆಲ್ ಒಳಗೆ ನುಗ್ಗಿದ ಮಳೆಯ ನೀರಿನಿಂದಾಗಿ ರಾತ್ರಿಯಿಡಿ ವಿದ್ಯಾರ್ಥಿಗಳು ಮಲಗದೆ ಪರದಾಡಿದ ಘಟನೆ ನಡೆದಿದೆ. ಹಾಸ್ಟೆಲ್ ಗೆ ನೀರು ನುಗ್ಗುವ ವಿಚಾರವನ್ನ ಅನೇಕಬಾಗಿ ಮೆಲಧಿಕಾರಿಗಳಿಗೆ ತಿಳಿಸಲಾಗಿದ್ಯಂತೆ.. ಆದ್ರೆ ಪರಿಹಾರ ಸಿಗ್ತಿಲ್ಲ ಅಂತಾ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..
ಶಾಲೆಗೆ ನುಗ್ಗಿದ ನೀರು.. ಪಠ್ಯ ಪರಿಕರಗಳು ನೀರುಪಾಲು:
ನಗರದ ಹುಡ್ಕೊ ಬಡಾವಣೆಯ ಸಿದ್ಧಲಿಂಗ ಕ್ರಾಸ್ ನಲ್ಲಿರೋ ಸರ್ಕಾರಿ ಶಾಲೆಯಲ್ಲಿ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.. ರಸ್ತೆ ಪಕ್ಕದ ಗಟಾರು ಬ್ಲಾಕ್ ಆಗಿ, ಮಳೆ ನೀರು ಶಾಲಾ ಆವರಣಕ್ಕೆ ನುಗ್ಗಿದೆ.. ಇದ್ರಿಂದಾಗಿ ಮಕ್ಕಳ ಶಿಕ್ಷಣಕ್ಕೆ ತಯಾರಿಸಲಾಗಿದ್ದ ಪಠ್ಯ ಪರಿಕರ ನೀರಿನಲ್ಲಿ ನೆಂದು ಹೋಗಿವೆ..
ಮಲಪ್ರಭಾ ಜಲಾಶಯ ಭರ್ತಿಗೆ ಕ್ಷಣಗಣನೆ: ಪ್ರವಾಹ ಭೀತಿ
ನಗರಸಭೆ ಅಧ್ಯಕ್ಷರ ಸಿಟಿ ರೌಡ್ಸ್:
ಬೆಟಗೇರಿಯ ಮಂಜುನಾಥ್ ನಗರ, ಆಶ್ರಯ ಕಾಲೊನಿ, ಭಜಂತ್ರಿ ಓಣಿ, ಎಸ್ ಕೃಷ್ಣಾ ನಗರ, ಹುಡ್ಕೊ ಕಾಲೊನಿಯ ಮೂಲ ಮಾರುತಿ ದೇವಸ್ಥಾನ ಬಳಿಯ ಮಳೆ ಹಾನಿ ಪ್ರದೇಶಕ್ಕೆ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಭೇಟಿ ನೀಡಿದ್ರು.. ಅಲ್ದೆ, ಕಮಿಷನರ್ ರಮೇಶ್ ಸುಣಾಗಾರ್, ಯೋಜನಾ ನಿರ್ದೇಶಕ ಮಾರುತಿ ತಹಶೀಲ್ದಾರ್ ಕಿಶನ್ ಕಲಾಲ್, ನಗರಸಭೆ ಕಿರಿಯ ಅಭಿಯಂತರ ಬಂಡಿವಡ್ಡರ್ ಅವರನ್ನ ಕರೆಸಿ ಜನರ ಸಮಸ್ಯೆಗೆ ಸ್ಪಂದಿಸ್ಬೇಕು ಅಂತಾ ಸೂಚಿಸಿದ್ರು..
ಈ ಹಿಂದೆಯೂ ಗಂಗಿಮಡಿ ಪ್ರದೇಶದಲ್ಲಿ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.. ಈ ಬಾರಿಯೂ ಮಳೆ ನೀರು ನುಗ್ಗಿ ಜನ ಸಂಕಷ್ಟಕ್ಕೀಡಾಗಿದ್ರು.. ಮಳೆ ನೀರು ನುಗ್ಗದ ರೀತಿಯಲ್ಲಿ ಅಧಿಕಾರಿಗಳು ಕ್ರಮ ವಹಿಸ್ಬೇಕಿದೆ..