Asianet Suvarna News Asianet Suvarna News

ಗುಡ್ಡ ಕುಸಿತ: ಮಾರ್ಗ ಮಧ್ಯೆ ಸಿಲುಕಿದ ನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು

ಗುಡ್ಡ ಕುಸಿತದಿಂದ ಮಾರ್ಗ ಮಧ್ಯೆ ಸಿಲುಕಿದನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು| ಪ್ರಯಾಣಿಕರ ಪರದಾಟ| ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್‌-ಕರಂಜೋಳ ಬಳಿ ನಡೆದ ಘಟನೆ| ರೇಲ್ವೆ ಸಿಬ್ಬಂದಿಯ ಸತತ 12 ಗಂಟೆಗಳ ಕಾರ್ಯಾಚರಣೆಯ ಬಳಿಕ ಮಾರ್ಗ ತೆರವು| 

Railway Passengers Faced Problems due to Heavy Rain in Uttara Kannada District
Author
Bengaluru, First Published Aug 7, 2020, 10:16 AM IST

ಜೋಯಿಡಾ(ಆ.07):  ರೇಲ್ವೆ ಮಾರ್ಗದ ಮಧ್ಯೆ ಬುಧವಾರ ರಾತ್ರಿ ಗುಡ್ಡ ಕುಸಿತವಾಗಿ ನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು ಮಾರ್ಗ ಮಧ್ಯೆ ಸಿಲುಕಿ ಪ್ರಯಾಣಿಕರು ಪರದಾಡಿದ ಘಟನೆ ನಿನ್ನೆ(ಗುರುವಾರ) ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್‌-ಕರಂಜೋಳ ಬಳಿ ನಡೆದಿದೆ.

ರೇಲ್ವೆ ಸಿಬ್ಬಂದಿಯ ಸತತ 12 ಗಂಟೆಗಳ ಕಾರ್ಯಾಚರಣೆಯ ಬಳಿಕ ಮಾರ್ಗ ತೆರವುಗೊಳಿಸಿ ರೇಲ್ವೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. 

ವರುಣನ ಆರ್ಭಟ: ಕೊಡಗು ಜಿಲ್ಲೆಯಲ್ಲಿ ಸತತ ಮೂರನೇ ವರ್ಷ ಪ್ರಕೃತಿ ದುರಂತ..!

ಈ ವೇಳೆ ಎಂಜಿನ್‌ ಒಳಗೆ ಮಣ್ಣು ಸಿಲುಕಿಕೊಂಡಿತ್ತು, ಮಾರ್ಗವನ್ನು ತೆರವುಗೊಳಿಸಿದ ನಂತರ ಪುನಃ ಕ್ಯಾಸಲ್‌ರಾಕ್‌ ರೈಲ್ವೆ ನಿಲ್ದಾಣಕ್ಕೆ ತಂದು ಬೇರೆ ಎಂಜಿನ್‌ ಅಳವಡಿಸಿ ಗೋವಾಕ್ಕೆ ಕಳುಹಿಸಲಾಯಿತು.
 

Follow Us:
Download App:
  • android
  • ios