ರಾಯಚೂರು ಲಾಕಪ್ ಡೆತ್ ಆರೋಪ: ಯುವಕ ಸಾವಿನ ಬಗ್ಗೆ SP ಸ್ಪಷ್ಟನೆ ಹೀಗಿದೆ...

ಪಿಎಸ್ ಐ ಹೊಡೆತಕ್ಕೆ  ಗಬ್ಬೂರು ಗ್ರಾಮ ಯುವಕ ಸಾವು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ ಹೇಳಿಕೆ ಬಿಡುಗಡೆ ಮಾಡಿದ್ದು, ಡಾ. ಸಿ. ಬಿ. ವೇದಮೂರ್ತಿ ಸ್ಪಷ್ಟನೆ ಈ ಕೆಳಗಿನಂತಿದೆ.

Raichur SP vedamurthy clarification about youth lockup death alligation

ರಾಯಚೂರು, [ಸೆ.15]: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಪಿಎಸ್ ಐ ಹೊಡೆತಕ್ಕೆ ಯುವಕ ಸಾವು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ಎಸ್ಪಿ ಡಾ. ಸಿ. ಬಿ. ವೇದಮೂರ್ತಿ ಘಟನೆ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಲಾಕಪ್ ಡೆತ್: PSI ಹೊಡೆತಕ್ಕೆ ಯುವಕ ಸಾವು ಆರೋಪ, ಗಬ್ಬೂರು ಉದ್ವಿಗ್ನ

ಈ ಘಟನೆ ಬಗ್ಗೆ ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ. ಬಿ. ವೇದಮೂರ್ತಿ ಹೇಳಿಕೆ ಬಿಡುಗಡೆ ಮಾಡಿದ್ದು, ಅದು ಈ ಕೆಳಗಿನಂತಿದೆ.

"ನಿನ್ನೆ [ಶನಿವಾರ] ಗಬ್ಬೂರಿನಲ್ಲಿ ಗಣೇಶ ವಿಸರ್ಜನೆಯ ನಂತರ ಹತ್ತಿರದ ಡಾಬಾಕ್ಕೆ ಊಟಕ್ಕೆ ಹೋಗಿದ್ದರು. ಆದ್ರೆ  ಡಾಬಾದಲ್ಲಿ ಊಟ ಖಾಲಿಯಾಗಿತ್ತು. ಇದರಿಂದ  ಡಾಬಾ ಮಾಲೀಕನೊಂದಿಗೆ ಯುವಕರು ವಾಗ್ವಾದ ನಡೆಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಂದು [ಭಾನುವಾರ] ಯುವಕರನ್ನು ವಿಚಾರಣೆ ಕರೆಸಲಾಗಿತ್ತು

ಈ ಸಂದರ್ಭದಲ್ಲಿ ಯುವಕ ಶಿವಕುಮಾರನಿಗೆ ಮೂರ್ಛೆ ರೋಗ ಬಂದಿದೆ. ತಕ್ಷಣ ಪಿಎಸ್ಐ ಸ್ಥಳೀಯ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ. ಅಲ್ಲಿಂದ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಆದ್ರೆ,  ಚಿಕಿತ್ಸೆ ಫಲಕಾರಿಯಾಗದೆ ಯುವಕ ಶಿವಕುಮಾರ ಸಾವನ್ನಪ್ಪಿದ್ದಾನೆ" ಎಂದು ಎಸ್ಪಿ ಡಾ. ಸಿ. ಬಿ. ವೇದಮೂರ್ತಿ ಸ್ಪಷ್ಟನೆ ಕೊಟ್ಟಿದ್ದಾರೆ.

ಈಗ ಗಬ್ಬೂರು ಗ್ರಾಮದಲ್ಲಿ ಶಾಂತಿ ಕಾಪಾಡಲು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸಿದ್ದು, ಪ್ರಕರಣದ ಕುರಿತು ಸೂಕ್ತ ತನಿಖೆ ಮಾಡಿಸಲಾಗುವುದು. ತಪ್ಪಿತಸ್ಥರಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಜನರು ವದಂತಿಗೆ ಕಿವಿಗೊಡಬಾರದೆಂದು ಎಸ್ ಪಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪೊಲೀಸ್ ವಶದಲ್ಲಿದ್ದ ಶಿವಕುಮಾರ್ (23) ಎಂಬ ಯುವಕ ಇಂದು [ಭಾನುವಾರ] ದಿಢೀರ್ ಸಾವನ್ನಪ್ಪಿದ್ದಾನೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಪಿಎಸ್ ಐ ಹೊಡೆತಕ್ಕೆ ಯುವಕ ಸಾವನ್ನಪ್ಪಿದ್ದಾನೆ ಎಂದು ಗಂಭೀರ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದಾರೆ.ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

Latest Videos
Follow Us:
Download App:
  • android
  • ios