ರಾಯಚೂರು, [ಸೆ.15]: ಪೊಲೀಸ್ ಕಸ್ಟಡಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕನೊಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು[ಭಾನುವಾರ] ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

ಶಿವಕುಮಾರ್ (23) ಮೃತ ಯುವಕ. ಶಿವರಾಜ್ ಸಾವಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ್ದು,  ಡಿವೈಎಸ್ ಪಿ  ವಾಹನದ ಗಾಜು ಪುಡಿ ಪುಡಿಯಾಗಿದೆ. 

ರಾಯಚೂರು ಲಾಕಪ್ ಡೆತ್ ಆರೋಪ: ಯುವಕ ಸಾವಿನ ಬಗ್ಗೆ SP ಸ್ಪಷ್ಟನೆ ಹೀಗಿದೆ...

ಯುವಕನ ಸಾವಿಗೆ ಪೊಲೀಸರು ಕಾರಣವೆಂದು ರಾಜ್ಯ ಹೆದ್ದಾರಿ ತಡೆದು ಟಯರ್ ಬೆಂಕಿ ಹಚ್ವಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಗೊಬ್ಬೂರಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಗ್ರಾಮಸ್ಥರ ಆರೋಪವೇನು?
ಗಬ್ಬೂರು ಗ್ರಾಮದಲ್ಲಿ ನಿನ್ನೆ [ಶನಿವಾರ] ಗಣೇಶ ವಿಸರ್ಜನೆ ವೇಳೆ  ಗಲಾಟೆ ನಡೆದಿತ್ತು. ಆ ವೇಳೆ ಶಿವಕುಮಾರ್ ನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಹಿಗ್ಗಾಮುಗ್ಗಾ ಹೊಡೆದು ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರ ಅಸ್ವಸ್ಥಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರ ಆರೋಪವಾಗಿದೆ.