ರಾಯಚೂರು(ಜು.19): ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಸಿ.ಎಚ್‌. ಪೌಡರ್ ಜಪ್ತಿ ಮಾಡಿಕೊಂಡಿದ್ದಾರೆ.

ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದರು. ನೂರು ಕೆ.ಜಿ. ಸಿ.ಎಚ್. ಪೌಡರ್ ಮತ್ತು ಟ್ರಾಕ್ಟರ್‌ನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕಲಬೆರಕೆ ಶೇಂದಿ ತಯಾರಿಸಲು ಸಿ.ಎಚ್‌. ಪೌಡರ್ ಸಾಗಿಸಲಾಗುತ್ತಿತ್ತು.

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ : ಕ್ರಿಮಿನಲ್ ಕೇಸ್ ದಾಖಲು

ಕಡಗಂದೊಡ್ಡಿ ಗ್ರಾಮದ ದಂಧೆಕೋರರು 5 ಚೀಲಗಳಲ್ಲಿ ಸಾಗಿಸಲಾಗುತ್ತಿದ್ದ 1 ಲಕ್ಷ ರೂ. ಮೌಲ್ಯದ ಸಿ.ಎಚ್. ಪೌಡರ್ ರಾಯಚೂರಿನಿಂದ ಸಾಗಿಸಲಾಗುತ್ತಿತ್ತು. ಆರೋಪಿಗಳಾದ ಜಂಬನಗೌಡ, ತಾಯಣ್ಣಗೌಡ, ಮುಕುಂದ, ನರಸಿಂಹ ಮತ್ತು ಶಾಂತಮ್ಮ ಪರಾರಿಯಾಗಿದ್ದಾರೆ. ಈ ಆರೋಪಿಗಳು ಕಲಬೆರಕೆ ಶೇಂದಿ ದಂಧೆಯಲ್ಲಿ ಹಲವಾರು ಪ್ರಕರಣ ಎದುರಿಸುತ್ತಿದ್ದಾರೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.