ರಾಯಚೂರಿನಲ್ಲಿ ಕಾಂಗ್ರೆಸ್ ಮೇಲುಗೈ, ಬಿಜೆಪಿ ಕಳಪೆ ಸಾಧನೆ

ಬಿಜೆಪಿಯ ಶಿವನಗೌಡ ನಾಯಕ್ ಅವರ ದೇವದುರ್ಗ ಪುರಸಭೆಯಲ್ಲಿ ಕಾಂಗ್ರೆಸ್ ಕೈ ಮೇಲಾಗಿದೆ. ಲಿಂಗಸುಗೂರು ವ್ಯಾಪ್ತಿಯ 2 ಪುರಸಭೆ, 1 ಪಟ್ಟಣ ಪಂಚಾಯ್ತಿ ಕಾಂಗ್ರೆಸ್ ಗೆದ್ದುಕೊಂಡಿದೆ. 

Raichur local Body Election Results Congress Wins Majority

ರಾಯಚೂರು[ಸೆ.03]: ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮೇಲುಗೈ ಸಾಧಿಸಿದ್ದು ಬಿಜೆಪಿ ಕಳಪೆ ಸಾಧನೆ ಮಾಡಿದೆ. 

ರಾಯಚೂರು ನಗರಸಭೆ ಹಾಗೂ ದೇವದುರ್ಗ ಪುರಸಭೆಯನ್ನು ಹೊರತುಪಡಿಸಿದರೆ ಉಳಿದೆಡೆ ಬಿಜೆಪಿಗೆ ಬಹುತೇಕ ಮುಖಭಂಗವಾಗಿದೆ. ಮಾನ್ವಿ ಪುರಸಭೆ ಸಿಂಧನೂರು ನಗರಸಭೆಯಲ್ಲಿ ಕಮಲ ಪಕ್ಷ ಶೂನ್ಯ ಸಾಧನೆ ಮಾಡಿದೆ. ಮಾನ್ವಿ ಹಾಗೂ ಮುದಗಲ್'ನಲ್ಲಿ ಜೆಡಿಎಸ್ ಉತ್ತಮ ಸ್ಥಾನ ಗಳಿಸಿದ್ದು ಕೈ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

ಬಿಜೆಪಿಯ ಶಿವನಗೌಡ ನಾಯಕ್ ಅವರ ದೇವದುರ್ಗ ಪುರಸಭೆಯಲ್ಲಿ ಕಾಂಗ್ರೆಸ್ ಕೈ ಮೇಲಾಗಿದೆ. ಲಿಂಗಸುಗೂರು ವ್ಯಾಪ್ತಿಯ 2 ಪುರಸಭೆ, 1 ಪಟ್ಟಣ ಪಂಚಾಯ್ತಿ ಕಾಂಗ್ರೆಸ್ ಗೆದ್ದುಕೊಂಡಿದೆ. ರಾಯಚೂರು ನಗರಸಭೆ ಅತಂತ್ರವಾಗಿ ಕಾಂಗ್ರೆಸ್ ಕೈ ವಶವಾಗುವುದು ಸ್ಪಷ್ಟವಾಗಿದ್ದು ಸಚಿವ ವೆಂಕಟರಾವ್ ನಾಡಗೌಡರ ಸ್ವಕ್ಷೇತ್ರದ ಸಿಂಧನೂರು ನಗರಸಭೆ ಕೂಡ ಕಾಂಗ್ರೆಸ್ ಪಾಲಾಗಿದೆ.

ರಾಯಚೂರು

ನಗರಸಭೆ

ರಾಯಚೂರು 
ಒಟ್ಟು - 35
ಬಿಜೆಪಿ - 12
ಕಾಂಗ್ರೆಸ್ - 11
ಜೆಡಿಎಸ್ - 3
ಇತರೆ  -10

ಸಿಂಧನೂರು
ಒಟ್ಟು - 31
ಬಿಜೆಪಿ - 0
ಕಾಂಗ್ರೆಸ್ - 20
ಜೆಡಿಎಸ್ - 11

ಪುರಸಭೆ

ದೇವದುರ್ಗ
ಒಟ್ಟು - 23
ಬಿಜೆಪಿ - 8
ಕಾಂಗ್ರೆಸ್ - 11
ಜೆಡಿಎಸ್ - 3
ಇತರೆ - 1

ಲಿಂಗಸನೂರು
ಒಟ್ಟು - 23
ಬಿಜೆಪಿ - 2
ಕಾಂಗ್ರೆಸ್ - 13
ಜೆಡಿಎಸ್ - 4
ಇತರೆ - 4

ಮಾನ್ವಿ
ಒಟ್ಟು - 27
ಬಿಜೆಪಿ - 0
ಕಾಂಗ್ರೆಸ್ - 13
ಬಿಜೆಪಿ - 8
ಇತರೆ - 6

ಮುದಗಲ್
ಒಟ್ಟು - 23
ಬಿಜೆಪಿ - 1
ಕಾಂಗ್ರೆಸ್ - 15
ಜೆಡಿಎಸ್ - 7

ಪಟ್ಟಣ ಪಂಚಾಯತ್ 
ಹಟ್ಟಿ 
ಒಟ್ಟು - 13
ಬಿಜೆಪಿ - 0
ಕಾಂಗ್ರೆಸ್ - 8
ಜೆಡಿಎಸ್ - 3
ಇತರೆ - 2

Latest Videos
Follow Us:
Download App:
  • android
  • ios