ರಾಯಚೂರು[ಫೆ.18]  ಮಸ್ಕಿ ತಾಲೂಕಿನ ತಲೆಖಾನದಲ್ಲಿ ಯುವಕರ ಗುಂಪುವೊಂದು ಸೈನಿಕರ ಮೇಲಿನ ದಾಳಿಯನ್ನು ಸಂಭ್ರಮಿಸಿತ್ತು.  ಖಾಜಾಸಾಬ ಸೇರಿದಂತೆ ಆರು ಜನರ ವಿರುದ್ದ ಪ್ರಕರಣ ದಾಖಲಾಗಿತ್ತು. ಐದು ಜನರನ್ನು ಮಸ್ಕಿ ಪೊಲೀಸರು ಬಂಧಿಸಿದ್ದರು.

ಆರೋಪಿಗಳ ಪರವಾಗಿ ಯಾರು ವಾದ ಮಾಡದಂತೆ ವಕೀಲರ ಸಂಘ ನಿರ್ಧಾರ ತೆಗೆದುಕೊಂಡಿದೆ. ದೇಶದ್ರೋಹ ಮಾಡಿದವರು ಯಾವುದೇ ಕಾರಣಕ್ಕೆ ಬಿಡುಗಡೆಯಾಗಬಾರದು ಎಂಬ ಉದ್ದೇಶ ಇದರ ಹಿಂದಿದೆ. ಜಾಮೀನಿಗಾಗಿ ಸಿಂಧನೂರಿನಿಂದ ಓರ್ವ ವಕೀಲರು ಆಗಮಿಸಿದ್ದರು. ಆದರೆ ಅವರಿಗೆ ವಕೀಲರ ಸಂಘದ ನಿರ್ಣಯ ಹಾಗು ಪ್ರಕರಣದ ಗಂಭೀರತೆ ಅರ್ಥ ಮಾಡಿಸಿದ್ದರಿಂದ ಅವರು ಸಹ ಬೇಲ್ ಅರ್ಜಿ ಹಾಕಲಿಲ್ಲ.

ತುಮಕೂರು ಯೋಧ ಕಂಡ ಪುಲ್ವಾಮಾ ದುರಂತದ ದೃಶ್ಯಾವಳಿ

ಇನ್ನೂ ಜಿಲ್ಲೆಯ ಯಾವುದೇ ವಕೀಲರು ಜಾಮೀನಿಗಾಗಿ ಅರ್ಜಿ ಹಾಕದಂತೆ ನಿರ್ಣಯ ಕೈಗೊಂಡ ಲಿಂಗಸಗೂರು ವಕೀಲರ ತಂಡ  ದೇಶದ್ರೋಹಿಗಳ ಪರ ವಕಾಲತ್ತು ವಹಿಸದ ಖಡಕ್ ನಿರ್ಧಾರ ತೆಗೆದುಕೊಂಡಿದೆ.