ರಾಯಚೂರು: ಅನಾರೋಗ್ಯದ ನಡುವೆಯೂ ಕರ್ತವ್ಯ ನಿರ್ವಹಿಸಿದ ಡಿಸಿ ನಾಯಕ, ಎಲ್ಲೆಡೆ ಮೆಚ್ಚುಗೆ

ಕಳೆದ 3-4 ತಿಂಗಳಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುತ್ತಿದೆ. ಆದ್ರೂ ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸಿ ಜನರ ಸಮಸ್ಯೆಗಳ ಪರಿಹಾರದ ಜೊತೆಗೆ ಹತ್ತಾರು ವರ್ಷಗಳಿಂದ ಕೋರ್ಟ್ ಕೇಸ್ ನೆಪದಲ್ಲಿ ಪೇಡಿಂಗ್ ಬಿದ್ದಿರುವ ಕಂದಾಯ ಪ್ರಕರಣಗಳನ್ನ ಬಗ್ಗೆ ಹರಿಸುವಲ್ಲಿ ಯಶ್ವಸಿಯಾದ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ 

Raichur DC Chandrashekhar Naik Duty Despite his Illness grg

ವರದಿ: ಜಗನ್ನಾಥ ‌ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್‌, ರಾಯಚೂರು

ರಾಯಚೂರು(ನ.28): ಯಾವುದೇ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಭೇಟಿ ‌ಮಾಡಬೇಕು ಅಂದ್ರೆ ಗಂಟೆಗಟ್ಟಲೇ ಕಾದು ಕಾಮಾನ್. ಆದ್ರೂ ಜಿಲ್ಲಾಧಿಕಾರಿಗಳು ಸಿಗುವುದು ಅನುಮಾನ. ಸಿಕ್ಕರೂ ತಾಳ್ಮೆಯಿಂದ ಬಂದ ಜನರ ಸಮಸ್ಯೆ ಆಲಿಸುವುದು ತುಂಬಾ ವಿರಳ. ಅದರಲ್ಲೂ ಜಿಲ್ಲಾಧಿಕಾರಿಗಳು ಬರುತ್ತಿದ್ರೆ ಸಾಕು. ಕಚೇರಿಯಲ್ಲಿನ ಸಿಬ್ಬಂದಿ ಎಲ್ಲರಿಗೂ ದೂರ ಸರಿಸಿ. ಸಮಸ್ಯೆ ಹೇಳಲು ಬಂದ ಜನರಿಗೆ ಸಿಬ್ಬಂದಿಯೇ ಭೇಟಿ ‌ಮಾಡದಂತೆ ತಡೆಯುವುದು ಹಲವು ಕಡೆ ಇದೆ.

ಆದ್ರೆ ಅದಕ್ಕೆ ವಿರುದ್ಧ ಎಂಬಂತೆ ರಾಯಚೂರು ಜಿಲ್ಲಾಧಿಕಾರಿ ಒಬ್ಬ ಸಾಮಾನ್ಯ ರೈತನೂ ಬಂದರೂ ಅವರ ಸಮಸ್ಯೆಯನ್ನ ಆಲಿಸುವಷ್ಟು ತಾಳ್ಮೆ ಡಿಸಿ ಎಲ್. ಚಂದ್ರಶೇಖರ್ ನಾಯಕ ಅವರಿಗೆ ಇದೆ. ಸರಳ ಸ್ವಭಾವದ ಎಲ್. ಚಂದ್ರಶೇಖರ್ ನಾಯಕ.‌ ಕಳೆದ 3-4 ತಿಂಗಳಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುತ್ತಿದೆ. ಆದ್ರೂ ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸಿ ಜನರ ಸಮಸ್ಯೆಗಳ ಪರಿಹಾರದ ಜೊತೆಗೆ ಹತ್ತಾರು ವರ್ಷಗಳಿಂದ ಕೋರ್ಟ್ ಕೇಸ್ ನೆಪದಲ್ಲಿ ಪೇಡಿಂಗ್ ಬಿದ್ದಿರುವ ಕಂದಾಯ ಪ್ರಕರಣಗಳನ್ನ ಬಗ್ಗೆ ಹರಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಮಂತ್ರಾಲಯದಲ್ಲಿ ತುಂಗಾರತಿ & ತೆಪ್ಪೋತ್ಸವ ಸಂಭ್ರಮ..ಲಕ್ಷಾಂತರ ಭಕ್ತರಿಂದ ತುಂಬಿ ತುಳುಕಿದ ರಾಯರ ಮಠ

ಆದೇಶದ ಜೊತೆಗೆ ಕರ್ತವ್ಯ ನಿರ್ವಹಣೆ: 

ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ‌ನಾಯಕ, ಬರುವ ಮುಂಚೆ ಹತ್ತಾರು ಜಮೀನು ವಿವಾದದ ಕೇಸ್ ಗಳು ‌ಬಾಕಿ ಇದ್ದವು, ಚಿಕ್ಕ - ಪುಟ್ಟ ಕಾರಣಕ್ಕೆ ಕಂದಾಯ ಫೈಲ್ ಗಳನ್ನ ಪೇಂಡಿಂಗ್ ಇಟ್ಟು ಜನ ಸಾಮಾನ್ಯರಿಗೆ ಕಿರಿಕಿರಿ ‌ಮಾಡುವುದು ಹೆಚ್ಚಾಗಿತ್ತು. ಇದನ್ನ ಅರಿತ ರಾಯಚೂರು ‌ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ‌ನಾಯಕ. ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕೋರ್ಟ್ ನಲ್ಲಿ ಇರುವ ಒಟ್ಟು ಪ್ರಕರಣಗಳ ಮಾಹಿತಿ ‌ಕಲೆಹಾಕಿದ್ರು. ಆ ಬಳಿಕ ವಿಶೇಷ ಮುತುವರ್ಜಿವಹಿಸಿ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ಮೋಜಣಿ ಪ್ರಕರಣಗಳು‌ ಮತ್ತು ಪಹಣಿ ತಿದ್ದುಪಡಿ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ.

ಕಂದಾಯ ಇಲಾಖೆಯಲ್ಲಿ ಕಳೆದ 6 ತಿಂಗಳಲ್ಲಿ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ನ್ಯಾಯಾಲಯ, ಸಹಾಯಕ ಆಯುಕ್ತರ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಹಲವಾರು ವರ್ಷಗಳಿಂದ ಬಾಕಿ ಇದ್ದ ಒಟ್ಟು 5852 ಪ್ರಕರಣಗಳ ಪೈಕಿ ಇಲ್ಲಿಯವರೆಗೆ 3174 ಪ್ರಕಣಗಳನ್ನು ವಿಲೇವಾರಿಗೊಳಿಸಿದ್ದಾರೆ. ಇನ್ನೂ ಬಾಕಿ ಉಳಿದ 2,678 ಪ್ರಕರಣಗಳನ್ನು ಅವಧಿಗನುಗುಣವಾಗಿ ಆದ್ಯತೆಯ ಮೇರೆಗೆ ವಿಲೇವಾರಿಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಭೂ-ದಾಖಲೆಗಳ ಹಾಗೂ ಕಂದಾಯ ಇಲಾಖೆಯಲ್ಲಿ  ಮೇ ಅಂತ್ಯಕ್ಕೆ ಒಟ್ಟು 22,137 ಮೋಜಣಿ ಪ್ರಕರಣಗಳು ಹಾಗೂ ಪಹಣಿ ತಿದ್ದುಪಡಿ ಪ್ರಕರಣಗಳು ಬಾಕಿ ಇದ್ದು, ತದ ನಂತರದ 6 ತಿಂಗಳಲ್ಲಿ 20,872 ಹೊಸ ಪ್ರಕರಣಗಳು ಸ್ವೀಕೃತಿಯಾಗಿ ಒಟ್ಟು 43,009 ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ ಇಲ್ಲಿಯವರೆಗೆ 24,643 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಶೇಕಡಾವಾರು 57.29 ಪ್ರತಿಶತ ಪ್ರಗತಿ ಸಾಧಿಸಲಾಗಿದೆ. ಇನ್ನೂ ಬಾಕಿ ಉಳಿದ ಪ್ರಕರಣಗಳನ್ನು ಮುಂಬರುವ ದಿನಗಳಲ್ಲಿ ಆದ್ಯತೆಯ ಮೇರೆಗೆ ವಿಲೇವಾರಿಗೊಳಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ.

ತಾಂಡಾ ಮತ್ತು ದೊಡ್ಡಿ ಹಾಗೂ ಕ್ಯಾಂಪ್ ಗಳನ್ನ ಕಂದಾಯ ಗ್ರಾಮ ಪ್ರಕ್ರಿಯೆ: ರಾಯಚೂರು ಜಿಲ್ಲೆಯಲ್ಲಿ  87 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ. ಅವುಗಳಲ್ಲಿ ಇದುವರೆಗೆ 43 ಗ್ರಾಮಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಬಾಕಿ ಉಳಿದ 44 ಗ್ರಾಮಗಳಲ್ಲಿ 8 ಗ್ರಾಮಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಉಳಿದ 36 ಗ್ರಾಮಗಳನ್ನು ಡಿಸೆಂಬರ್ ಅಂತ್ಯದೊಳಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ ತಯಾರಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಅವರ  ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Latest Videos
Follow Us:
Download App:
  • android
  • ios