ಚಿತ್ರದುರ್ಗದಿಂದ ಸ್ಪರ್ಧಿಸಲು ಸಕಲ ಪ್ಲಾನ್ ಮಾಡಿರೋ ರಘು ಅಚಾರ್

  • ಚುನಾವಣೆ ಹತ್ತಿರ ಬರ್ತಿದ್ದಂತೆ ವರಸೆ ಬದಲಿಸಿದ ರಘು ಅಚಾರ್.
  • ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಸಕಲ ಪ್ಲಾನ್ ಮಾಡಿರೋ ಆಚಾರ್.
  • 3 ಎಕರೆ ಒಳಗಿನ ರೈತರಿಗೆ ಉಚಿತವಾಗಿ ಬಿತ್ತನೆ ಮಾಡಿ ಕೊಡ್ತಿರೋ ರಘು ಅಚಾರ್ ಅಭಿಮಾನಿಗಳು.
Raghu Achar plans to compete from Chitradurga gow

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜೂ.9): ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ (Assembly elections) ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವ ಬೆನ್ನಲ್ಲೇ ಆಯಾ ಕ್ಷೇತ್ರದಲ್ಲಿ ಟಿಕೆಟ್ ಪಡೆಯೋದಕ್ಕೆ ರಾಜಕಾರಣಿಗಳ ಈಗಲೇ ಸರ್ಕಸ್ ಮಾಡ್ತಿದ್ದಾರೆ. ಇದಕ್ಕೆ ಸೂಕ್ತ ನಿದರ್ಶನ ಎಂದ್ರೆ ಕೋಟೆನಾಡು ಚಿತ್ರದುರ್ಗದಲ್ಲಿ ಎರಡು ಬಾರಿ ಗೆದ್ದು MLC ಆಗಿದ್ದ ರಘು ಆಚಾರ್ ಈ ಬಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಎಲ್ಲಾ ರೀತಿಯ ಕಸರತ್ತು ಮಾಡ್ತಿದ್ದಾರೆ.

ಎಸ್ ಕಳೆದ ಎರಡು ತಿಂಗಳಿಂದ ಚಿತ್ರದುರ್ಗ ಕ್ಷೇತ್ರದಲ್ಲೇ ಠಿಕಾಣಿ ಹೂಡಿರೋ ಆಚಾರ್ ಈಗ ಮತ್ತೊಂದು ಹೊಸ ಪ್ಲಾನ್ ಮಾಡಿದ್ದಾರೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಸಣ್ಣ ರೈತರಿಗೆ ತಮ್ಮ ಕೈಲಾದಷ್ಟು ಉಚಿತವಾಗಿ ಬಿತ್ತನೆ ಮಾಡಿ‌ ಕೊಡುವ ಮೂಲಕ ಕ್ಷೇತ್ರದ ಜನರ ಗಮನ ಸೆಳೆಯೋದಕ್ಕೆ ಪ್ಲಾನ್ ಮಾಡಿದ್ದಾರೆ. ಇಂದು ಚಿತ್ರದುರ್ಗ ತಾಲ್ಲೂಕಿನ ಮಠದ ಕುರುಬರಹಟ್ಟಿ ಯಲ್ಲಿ ನಡೆದ ರೈತರ ಬಿತ್ತನೆ ಕಾರ್ಯಕ್ಕೆ ಉಚಿತ ಟ್ರಾಕ್ಟರ್ ಹಾಗೂ ಬಿತ್ತನೆ ಬೀಜ, ಗೊಬ್ಬರದ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿತ್ರದುರ್ಗ ಕ್ಷೇತ್ರದಲ್ಲಿ ೩ ಎಕರೆ ಜಮೀನಿಗಿಂತ ಕಡಿಮೆ ಇರುವ ಎಲ್ಲಾ ರೈತರಿಗೂ ಉಚಿತ ಬಿತ್ತನೆ ಮಾಡಿಕೊಡಲಾಗುವುದು ಎಂದು ರಘು ಆಚಾರ್ ತಿಳಿಸಿದರು. ಅಲ್ಲದೇ ಈಗಾಗಲೇ ಮುಂಗಾರು ಬಿತ್ತನೆ ಎಲ್ಲಾ ಕಡೆ ಶುರುವಾಗಿದೆ, ಆದ್ರೆ ಕೆಲ ರೈತರು ಬಿತ್ತನೆ ಮಾಡಲಾಗದೇ, ಜಮೀನುಗಳನ್ನು ಬೀಳು ಬಿಡ್ತಾರೆ. ಅಂತವರಿಗೆ ಯಾವುದೇ ರೀತಿ ಅನ್ಯಾಯ ಆಗದ ರೀತಿಯಲ್ಲಿ ಈ ರೀತಿಯ ನೂತನ ಪ್ಲಾನ್ ಮಾಡಲಾಗಿದೆ ಎಂದರು. 

Udupi; ಕಾರ್ಮಿಕನೊಬ್ಬ ಲಕ್ಷಾಂತರ ರೂಪಾಯಿ ದಾನ ಮಾಡುವ ಕಥೆ ಕೇಳಿದ್ದೀರಾ?

ಸದ್ಯಕ್ಕೆ ಈ ಯೋಜನೆಯು ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತ. ಮುಂದಿನ ದಿನಗಳಲ್ಲಿ ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಲ್ಲಿಯೂ ಈ ರೀತಿಯ ಉಚಿತ ಬಿತ್ತನೆ ಕಾರ್ಯ ಮಾಡಲಾಗುವುದು ಎಂದರು.

ಇನ್ನೂ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮುರುಘಾ ಶರಣರು, ರೈತ ಈ ದೇಶದ ಬೆನ್ನೆಲುಬು. ರೈತರ ಸಂಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದಿಸ್ತಿರೋ ಸ್ವಾಗತಾರ್ಹ ಸಂಗತಿ. ಜಿಲ್ಲೆಯಲ್ಲಿ ಎರಡು ಬಾರಿ MLC ಆಗಿದ್ದ ರಘು ಆಚಾರ್ ಅವರು ಈ ರೀತಿಯ ರೈತರಿಗೆ ಸಹಾಯ ಮಾಡಲು ಮುಂದಾಗಿರೋದು ಖುಷಿಯ ವಿಚಾರ. ರೈತರು ಬೆಳೆ ಬೆಳೆದ್ರೆ ಮಾತ್ತ ಮನೆತನ ನಡೆಯೋದು. ತಮ್ಮ ಜಮೀನುಗಳಲ್ಲಿ ಹಾಕಿರೋ ಬೆಳೆಯನ್ನೇ ನಂಬಿಕೊಂಡು ಜೀವನ ಸಾಗಿಸ್ತಿರೋ ಸಾವಿರಾರು ರೈತ ಕುಂಟುಬಗಳು ಈ ರಾಜ್ಯದಲ್ಲಿವೆ. ಇಂತಹ ಉತ್ತಮ ಕಾರ್ಯಗಳು ಜಿಲ್ಲೆಯಲ್ಲಿ ನಡೆಯಲಿ ರೈತರಿಗೆ ಅನುಕೂಲವಾಗಲಿ ಎಂದು ಆಶೀರ್ವದಿಸಿದರು.

ಇನ್ನೂ ರಘು ಅಚಾರ್ ಅವರನ್ನ ವಿಚಾರಿಸಿದ್ರೆ, ಚಿತ್ರದುರ್ಗ ತಾಲ್ಲೂಕಿನ ಅತಿ ಹೆಚ್ಚಿನ ರೈತರು ಬಿತ್ತನೆ ಮಾಡೋದಕ್ಕೆ ಹರಸಾಹಸ ಪಡ್ತಿದ್ದಾರೆ. ಜೊತೆಗೆ ಅವರಿಗೆ ನೆರವಿನ ಹಸ್ತ ಬೇಕಿದೆ ಎಂದು ನಾವು ಮಾಡಿದ ಸರ್ವೇ ಮೂಲಕ ವಿಷಯ ತಿಳಿಯಿತು‌ ಹಾಗಾಗಿ ಸಣ್ಣರೈತರು ಈ ಕ್ಷೇತ್ರದಲ್ಲಿ ಯಾರೆಲ್ಲಾ ಇದ್ದಾರೆ ಅವರ ಜಮೀನುಗಳಿಗೆ ನಮ್ಮದೇ ಟ್ರಾಕ್ಟರ್ ಗಳು ತೆರಳಿ, ನಮ್ಮ ಬೀಜ, ಗೊಬ್ಬರ ಹಾಕಿ ಆ ರೈತರಿಗೆ ಫ್ರೀ ಆಗಿ ಬಿತ್ತನೆ ಮಾಡಿಕೊಡಲಾಗುವುದು ಎಂದರು.

Ramanagara ರೇಷ್ಮೆ ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆ

ಚುನಾವಣೆ ಹತ್ತಿರ ಇರೋದಕ್ಕೆ ನೀವು ಈ ರೀತಿ ಗಿಮಿಕ್ ಮಾಡ್ತಿರೋದ ಎಂಬ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಚುನಾವಣೆ ತುಂಬಾ ದೂರವಿದೆ. ಸದ್ಯಕ್ಕೆ ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ನನ್ನ ಕಾಂಗ್ರೆಸ್ ಪಕ್ಷ ನಿರ್ಧರಿಸಿಲ್ಲ. ಅವರು ಎಲ್ಲಿ ಟಿಕೆಟ್ ನೀಡ್ತಾರೋ ಅಲ್ಲಿ ಸ್ಪರ್ಧೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜಾಣ್ಮೆಯ ಉತ್ತರ ನೀಡಿದರು.

ಒಟ್ಟಾರೆಯಾಗಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಸದ್ಯ ಹಾಲಿ ಶಾಸಕ ತಿಪ್ಪಾರೆಡ್ಡಿ ಅವರ ಭದ್ರಕೋಟೆಯಾಗಿದೆ. ಎದುರಾಗಿ ಯಾರೇ ಬಂದ್ರು ಆತನ‌ ಮುಂದೆ ಗೆಲುವು ಸುಲಭವಲ್ಲ. ಆದ್ದರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಬಾರಿ MLC ಆಗಿ ಆಯ್ಕೆ ಆಗಿದ್ದ ರಘು ಆಚಾರ್ ಈ ಬಾರಿ ಏನಾದ್ರು ಮಾಡಿ MLA ಆಗಬೇಕು ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಆದ್ದರಿಂದಲೇ ಹಾಲಿ ಶಾಸಕ ತಿಪ್ಪಾರೆಡ್ಡಿ ಗೆ ಟಕ್ಕರ್ ಕೊಡಲು, ಸದ್ಯ ಮುಂಗಾರು ಬಿತ್ತನೆ ಆಗಿರೋದ್ರಿಂದ ರೈತರಿಗೆ ಉಚಿತವಾಗಿ ಬಿತ್ತನೆ ಮಾಡಿ ಕೊಡ್ತೀನಿ ಎಂದು ಮತ ಬ್ಯಾಂಕ್ ಕ್ರಿಯೇಟ್ ಮಾಡ್ಕೊಳ್ಳಿದಕ್ಕೆ ಸಿಕ್ಕಾಪಟ್ಟೆ ಸರ್ಕಸ್ ಮಾಡ್ತಿದ್ದಾರೆ. ಆದ್ರೆ ಇದೆಲ್ಲಾ ಮುಂದಿನ ಚುನಾವಣೆಗೆ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

Latest Videos
Follow Us:
Download App:
  • android
  • ios