ಉತ್ತರ ಕನ್ನಡ: ರೇಬಿಸ್‌ಗೆ ತುತ್ತಾದ ಹಸುವಿನಿಂದ ಜನರ ಮೇಲೆ ದಾಳಿ

 ರೇಬಿಸ್‌ ರೋಗಕ್ಕೆ ತುತ್ತಾದ ಹಸವೊಂದು ಪಟ್ಟಣದಲ್ಲಿ ದಾರಿ ಹೋಕರ ಮೇಲೆ ದಾಳಿ ನಡೆಸಿ ನೆಲಕ್ಕುರುಳಿಸಿ ಗಾಯಗೊಳಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಪಟ್ಟಣದ ಪುರಸಭಾ ವ್ಯಾಪ್ತಿಯ ವಾಜಂತ್ರಿಕೇರಿಯಲ್ಲಿ ಬೀಡಾಡಿ ಹಸು ಕಳೆದ 4 ದಿನಗಳಿಂದ ವಾಸವಾಗಿತ್ತು ಎನ್ನಲಾಗಿದೆ. ಕಳೆದ 15 ದಿನಗಳ ಹಿಂದೆ ಒಂದು ಪುಟ್ಟಕರುವಿಗೆ ಈ ಹಸು ಜನ್ಮ ನೀಡಿದೆ.

Rabies infected cow attacks people in ankola at uttarakannada rav

ಅಂಕೋಲಾ (ಆ.4) :  ರೇಬಿಸ್‌ ರೋಗಕ್ಕೆ ತುತ್ತಾದ ಹಸವೊಂದು ಪಟ್ಟಣದಲ್ಲಿ ದಾರಿ ಹೋಕರ ಮೇಲೆ ದಾಳಿ ನಡೆಸಿ ನೆಲಕ್ಕುರುಳಿಸಿ ಗಾಯಗೊಳಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಪಟ್ಟಣದ ಪುರಸಭಾ ವ್ಯಾಪ್ತಿಯ ವಾಜಂತ್ರಿಕೇರಿಯಲ್ಲಿ ಬೀಡಾಡಿ ಹಸು ಕಳೆದ 4 ದಿನಗಳಿಂದ ವಾಸವಾಗಿತ್ತು ಎನ್ನಲಾಗಿದೆ. ಕಳೆದ 15 ದಿನಗಳ ಹಿಂದೆ ಒಂದು ಪುಟ್ಟಕರುವಿಗೆ ಈ ಹಸು ಜನ್ಮ ನೀಡಿದೆ.

ಅಂತೆಯೇ ತಾಯಿ ಹಸುವಿನ ಸಂಗಡ ಪುಟ್ಟಕರುವೊಂದು ಇದ್ದು, ತನ್ನ ಕರುವಿಗೆ ಯಾವುದೇ ತೊಂದರೆ ನೀಡದೆ ಇನ್ನುಳಿದ ಜಾನುವಾರುಗಳು ಪಕ್ಕಕ್ಕೆ ಬಂದರೆ ಅವುಗಳನ್ನು ಈ ಹಸು ಓಡಿಸಿಕೊಂಡು ಹೋಗಿ ನೆಲಕ್ಕೆ ಉರುಳಿಸುತ್ತಿದೆ. ಹಿಂದೂ ಜಾಗರಣಾ ವೇದಿಕೆ ಯುವಕರು ಹಗ್ಗದಿಂದ ಕಟ್ಟಿಪಶುಸಂಗೋಪನಾ ಇಲಾಖೆ, ಪುರಸಭೆಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಬರುತ್ತಿದ್ದಂತೆ ತಪ್ಪಿಸಿಕೊಂಡ ಹಸು ದಾರಿಹೋಕ ಯುವಕನ್ನು ಎತ್ತಿ ಬಿಸಾಡಿದೆ. ಬಳಿಕ ಇಬ್ಬರು ಮಹಿಳೆಯರನ್ನು ನೆಲಕ್ಕುರುಳಿಸಿದೆ. ಅಲ್ಲಿಂದ ಕರುವಿನೊಂದಿಗೆ ಅಂಬಾರಕೊಡ್ಲದ ವರೆಗೆ ಓಡಿದೆ. ಅಲ್ಲಿ ಹಸು ಹಿಡಿದು ಮರಕ್ಕೆ ಕಟ್ಟಲಾಗಿದೆ.

 

ರೇಬಿಸ್‌ ಪತ್ತೆಗೆ ಬೀದರ್‌, ಹಾಸನದಲ್ಲಿ ಪ್ರಯೋಗಾಲಯ ಶುರು

ಪುರಸಭೆ ಸದಸ್ಯರಾದ ಪ್ರಕಾಶ ಗೌಡ, ಮಂಜುನಾಥ ನಾಯ್ಕ, ಕಾರ್ತಿಕ ನಾಯ್ಕ, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಕಿರಣ ನಾಯ್ಕ, ಸುಂದರ ಖಾರ್ವಿ, ಮೂರ್ತಿ ನಾಯ್ಕ. ಲಕ್ಷ್ಮೀಕಾಂತ ನಾಯ್ಕ, ಗೋಪೇಶ ನಾಯ್ಕ, ಗಣೇಶ ನಾಯ್ಕ, ರವಿ ವಾಜಂತ್ರಿ ಸೇರಿದಂತೆ ಇತರ ಸ್ಥಳೀಯರು ಸೇರಿ ಈ ಹಸುವನ್ನು ಕಟ್ಟುವಲ್ಲಿ ಯಶಸ್ವಿಯಾದರು.

Bengaluru: ರೇಬೀಸ್ ರೋಗ ತಡೆಗಟ್ಟಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಮೀಕ್ಷೆ

ರೇಬಿಸ್‌ ಕಾಯಿಲೆ ಬಾಧಿಸಿದ ಮೇಲೆ ಯಾವುದೇ ಪ್ರಾಣಿಗಳನ್ನು ಉಳಿಸುವುದು ಕಷ್ಟ. ಈ ಹಸು ಇನ್ನುಳಿದ ಹಸುಗಳಿಗೂ ತೊಂದರೆ ನೀಡುವುದಕ್ಕೂ ಮೊದಲು ಅದನ್ನು ಕಟ್ಟಬೇಕು. ಇದರ ಸಮೀಪ ಬಂದ ಇನ್ನುಳಿದ ಜಾನುವಾರುಗಳಿಗೂ ಲಸಿಕೆ ನೀಡಬೇಕಾಗುತ್ತದೆ. ವೈದ್ಯರ ಸಲಹೆಯನ್ನು ಈ ವಿಚಾರದಲ್ಲಿ ಪಡೆಯುವುದು ಮುಖ್ಯ.

ಎಂ.ಎಂ. ಹೆಗಡೆ ಜಾನುವಾರು ಅಭಿವೃದ್ಧಿ ಅಧಿಕಾರಿ

Latest Videos
Follow Us:
Download App:
  • android
  • ios