ರೇಬಿಸ್ ಪತ್ತೆಗೆ ಬೀದರ್, ಹಾಸನದಲ್ಲಿ ಪ್ರಯೋಗಾಲಯ ಶುರು
ಬೀದರ್ ಜಿಲ್ಲೆಯ ಭಾಲ್ಕಿ ಹಾಗೂ ಔರಾದ್ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದೇವಣಿ ಹಸು ತಳಿಯ ಸಂಖ್ಯೆಯು ಕ್ಷೀಣಿಸುತ್ತಿರುವುದರಿಂದ ನಮ್ಮ ವಿಜ್ಞಾನಿಗಳು ಕ್ಷೇತ್ರ ಮಟ್ಟದ ಪರಿಸ್ಥಿತಿಗಳಲ್ಲಿ ಬಹು ಅಂಡೋತ್ಪತ್ತಿ ಮತ್ತು ಭ್ರೂಣ ವರ್ಗಾವಣೆ ತಂತ್ರಜ್ಞಾನದ ಮೂಲಕ ಉತ್ಕೃಷ್ಟದೇವಣಿ ಜಾನುವಾರುಗಳನ್ನು ಹೆಚ್ಚಿಸುವಲ್ಲಿ ಮುಂದಿನ ದಿನಗಳಲ್ಲಿ ಯಶಸ್ವಿಯಾಗಲಿದ್ದಾರೆ: ಪ್ರೊ. ಕೆ.ಸಿ ವೀರಣ್ಣ
ಬೀದರ್(ಜು.14): ಜಾನುವಾರುಗಳಲ್ಲಿ ರೇಬಿಸ್ ರೋಗ ಪತ್ತೆ ಹಚ್ಚಲು ಬೀದರ್ ಮತ್ತು ಹಾಸನದಲ್ಲಿ ಪ್ರಯೋಗಾಲಯ ಆರಂಭಿಸಲಾಗಿದೆ ಎಂದು ಕರ್ನಾಟಕ ಪಶು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಸಿ ವೀರಣ್ಣ ತಿಳಿಸಿದರು.
ವಿಶ್ವ ವಿದ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲ್ಯಾಟರಲ್ ಫೊ್ಲೕ ಅಸ್ಸೆ (ಎಲ್‌ಎಫ್‌ಎ) ಮತ್ತು ಡೈರೆಕ್ಟ್ ಫೊ್ಲೕರೊಸೆಂಟ್ ಅಂಟಿಬಾಡಿ ಟೆಸ್ಟ್ (ಡಿಎಫ್‌ಎ) ಮೂಲಕ ರೇಬೀಸ್ ರೋಗ ನಿರ್ಣಯಕ್ಕಾಗಿ ಈ ರೇಬೀಸ್ ರೋಗ ನಿರ್ಣಯ ಪ್ರಯೋಗಾಲಯವು ದೇಶದಲ್ಲಿ ಏಕೈಕ ಮಾನ್ಯತೆ ಪಡೆದ ಪ್ರಯೋಗಾಲಯ ಆಗಿದೆ ಎಂದರು.
ಕಲ್ಯಾಣದ ಅಭಿವೃದ್ಧಿಗೆ ಬಜೆಟ್ ಪೂರಕ: ಸಚಿವ ಈಶ್ವರ್ ಖಂಡ್ರೆ
ರಾರಯಪಿಡ್ ಪೊ್ಲೕರೊಸೆಂಟ್ ಫೋಕಸ್ಡ್ ಇನ್ಹಿಬಿಷನ್ ಟೆಸ್ಟ್ (ಆರ್‌ಎಫ್‌ಎಫ್‌ಐಟಿ) ಮೂಲಕ ಸಾಕು ಪ್ರಾಣಿಗಳನ್ನು ರೇಬೀಸ್‌ನಿಂದ ರಕ್ಷಿಸಬಹುದು ಎಂದು ಪ್ರಮಾಣೀಕರಿಸಲು ಇಡೀ ದೇಶದ ಏಕೈಕ ಪ್ರಮಾಣೀಕರಿಸುವ ಪ್ರಾಧಿಕಾರವಾಗಿದೆ. ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಬೆಂಗಳೂರು ವಿವಿಧ ರೀತಿಯ ಸ್ವತಂತ್ರ ಯೋಜನೆಗಳು ಹಾಗೂ ವಿವಿಧ ಸಂಸ್ಥೆಗಳೊಂದಿಗೆ ಸಂಕೀರ್ಣ (ನೆಟ್‌ವರ್ಕ್) ವ್ಯವಸ್ಥೆಯಲ್ಲಿ ಯೋಜನೆಗಳನ್ನು ಪಡೆಯುತ್ತಿದೆ.
ಜಿಲ್ಲೆಯ ಭಾಲ್ಕಿ ಹಾಗೂ ಔರಾದ್ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದೇವಣಿ ಹಸು ತಳಿಯ ಸಂಖ್ಯೆಯು ಕ್ಷೀಣಿಸುತ್ತಿರುವುದರಿಂದ ನಮ್ಮ ವಿಜ್ಞಾನಿಗಳು ಕ್ಷೇತ್ರ ಮಟ್ಟದ ಪರಿಸ್ಥಿತಿಗಳಲ್ಲಿ ಬಹು ಅಂಡೋತ್ಪತ್ತಿ ಮತ್ತು ಭ್ರೂಣ ವರ್ಗಾವಣೆ ತಂತ್ರಜ್ಞಾನದ ಮೂಲಕ ಉತ್ಕೃಷ್ಟದೇವಣಿ ಜಾನುವಾರುಗಳನ್ನು ಹೆಚ್ಚಿಸುವಲ್ಲಿ ಮುಂದಿನ ದಿನಗಳಲ್ಲಿ ಯಶಸ್ವಿಯಾಗಲಿದ್ದಾರೆ ಎಂದರು.
2022-23ನೇ ಸಾಲಿನಲ್ಲಿ 45 ಸಂಶೋಧನೆಗಳನ್ನು ಪೂರ್ಣಗೊಳಿಸಲಾಗಿದೆ. 72 ಸಂಶೋಧನಾ ಯೋಜನೆಗಳು ಚಾಲ್ತಿಯಲ್ಲಿರುತ್ತವೆ. ಡೈರಿ ಉತ್ಪನ್ನಗಳ ತಯಾರಿಕೆಗಾಗಿ ನಾವು ಬೆಂಗಳೂರು ಮತ್ತು ಕಲಬುರಗಿಯ ಮಹಾಗಾಂವದಲ್ಲಿ ಹೈನು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ಟಾರ್ಚ್ ಅಪ್ ಇಂಕ್ಯುಬೇಷನ್ ಕೇಂದ್ರ ಪ್ರಾರಂಭಿಸುವ ಗುರಿ ಇದೆ ಎಂದು ತಿಳಿಸಿದರು.
ಸಸಿ ನಿರ್ವಹಣೆಗೆ ಆಡಿಟ್, ಜಿಯೋ ಟ್ಯಾಗ್: ಸಚಿವ ಈಶ್ವರ ಖಂಡ್ರೆ
ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯ ಶಿಕ್ಷಣ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಪ್ರಗತಿ ಸಾಧಿಸುವ ಮೂಲಕ ರೈತರ ಸಾಮಾಜಿಕ ಹಾಗೂ ಆರ್ಥಿಕ ಮಟ್ಟಸುಧಾರಿಸಲು ಸರ್ವ ಪ್ರಯತ್ನಗಳನ್ನು ಮಾಡಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಶು ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎನ್.ಎ.ಪಾಟೀಲ, ಪಶು ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ.ವಿ ಶಿವಪ್ರಕಾಶ, ಸ್ನಾತಕೋತ್ತರ ಶಿಕ್ಷಣ ಕೇಂದ್ರ ನಿರ್ದೇಶಕ ಡಾ.ದೀಪಕ ಕುಮಾರ, ಪಶು ವಿಶ್ವವಿದ್ಯಾಲಯದ ಡೀನ್ ಡಾ.ಅಶೋಕ ಪವಾರ ಸೇರಿದಂತೆ ಪಶು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.