ಮೈಸೂರು (ನ.29):  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಈ ಹಿಂದೆ ಕಾರ್ಯನಿರ್ವಹಿಸಿದ ಜಿಲ್ಲೆಗಳಲ್ಲಿ ದಕ್ಷ ಮತ್ತು ಪ್ರಮಾಣಿಕತೆಗೆ ಹೆಸರು ಗಳಿಸಿಕೊಂಡಿದ್ದು, ಈಗಷ್ಟೆಮೈಸೂರು ಜಿಲ್ಲೆಯಲ್ಲಿ ಕೆಲಸ ಆರಂಭಿಸಿದ್ದಾರೆ. ಆಗಲೇ ಅಪಸ್ವರ ಎತ್ತುವುದು ಸರಿಯಲ್ಲ ಎಂದು ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್‌. ರಘು ತಿಳಿಸಿದರು.

'ವಿಜ್ಞಾನಕ್ಕೆ ಸವಾಲಾದ ಅಲಮೇಲಮ್ಮನ ಶಾಪ' .

ಜನಪ್ರತಿನಿಧಿಗಳು ರಚನಾತ್ಮಕವಾಗಿ ಕಾರ್ಯ ನಿರ್ವಹಿಸಲು ಸಲಹೆ ನೀಡಬೇಕು. ಮಹಿಳೆಯ ಬಗ್ಗೆ ಮಾತನಾಡುವಾಗ ಏಕವಚನದಲ್ಲಿ ಮಾತನಾಡಿ ಅಸಭ್ಯ ಪದ ಬಳಕೆ ಮಾಡಬಾರದು. ಶಿಷ್ಟಾಚಾರ ಉಲ್ಲಂಘನೆಯಾಗಿದ್ದರೆ ಸಂಬಂಧಪಟ್ಟವೇದಿಕೆಗಳಲ್ಲಿ ಚರ್ಚಿಸಿ, ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.

ಮಹಾರಾಜ ಯದುವೀರ್-ತ್ರಿಶಿಖಾ ಇಂಟರೆಸ್ಟಿಂಗ್ ಲವ್ ಸ್ಟೋರಿ : ದಿನಚರಿ ಹೇಗಿರುತ್ತೆ..? ಮಾಂಸಹಾರಿಯೋ-ಸಸ್ಯಹಾರಿಯೋ..?

ಮೈಸೂರಿನ ರಾಜವಂಶಸ್ಥರು ತಮ್ಮದೇ ಆದ ಪರಂಪರೆಯನ್ನು ಹೊಂದಿದ್ದು, ರಾಜಕೀಯ ದುರುದ್ದೇಶದಿಂದ ರಾಜವಂಶಸ್ಥರಿಗೆ ಅವಮಾನ ಆಗುವಂತ ಮಾತುಗಳನ್ನು ಆಡಬಾರದು. ರಾಜಮನೆತನಕ್ಕೆ ಗೌರವ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದರು.