ಮಹಾರಾಜ ಯದುವೀರ್-ತ್ರಿಶಿಖಾ ಇಂಟರೆಸ್ಟಿಂಗ್ ಲವ್ ಸ್ಟೋರಿ : ದಿನಚರಿ ಹೇಗಿರುತ್ತೆ..? ಮಾಂಸಹಾರಿಯೋ-ಸಸ್ಯಹಾರಿಯೋ..?

First Published 11, Nov 2020, 2:08 PM

ಇಂದು ಮೈಸೂರಿನ ಮಹಾರಾಣಿ ತ್ರಿಶಿಕಾ ಕುಮಾರಿ ಒಡೆಯರ್ ಅವರ ಜನ್ಮದಿನ. ಅದಕ್ಕೆ ಅವರ ಪತಿ, ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶುಭ ಹಾರೈಸಿದ್ದು ಹೀಗೆ:

ಸನ್ನಿಧಾನ ಸವಾರಿಯವರು ಮಹಾರಾಣಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ಜನ್ಮದಿನದಂದು ಅವರಿಗೆ ಶುಭ ಕೋರುತ್ತೇವೆ, ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ ಎಂದಿದ್ದಾರೆ.

ಮೈಸೂರು ಮಹಾರಾಜ ಯದುವೀರ್ ಒಡೆಯರ್ ಹಾಗೂ ರಾಣಿ ತ್ರಿಶಿಕಾದೂ ರಾಯಲ್ ನವ್ ಸ್ಟೋರಿ... ಅವರ ದಿನಚರಿಯ ಬಗ್ಗೆಯೂ ಕುತೂಹಲಕಾರಿ ವಿಚಾರಗಳಿಗೆ.. ಏನಿದೆ ಹಾಗಾದ್ರೆ..?

ಯದುವೀರ್ ಮತ್ತು ತ್ರಿಶಿಕಾ ಒಂದು ರೀತಿಯಲ್ಲಿ ಬಾಲ್ಯದ ಗೆಳೆಯರು ಎನ್ನಬಹುದು. ಇಬ್ಬರೂ ಪಾರ್ಟಿಗಳಲ್ಲಿ ಭೇಟಿ ಆಗುತ್ತಿದ್ದರು. ಯಾಕೆಂದರೆ ಇಬ್ಬರ ಮನೆತನದವರೂ ಜೊತೆಯಾಗಿ ಪಾರ್ಟಿ ಮಾಡುತ್ತಿದ್ದರು.

ಮೈಸೂರಿನ ರಾಜಮನೆತನದವರೂ, ಪಂಜಾಬ್‌ನ ರಾಜಮನೆತನದವರೂ ಕೂಡಿದಾಗ ಈ ಪಾರ್ಟಿಗಳು ನಡೆಯುತ್ತಿದ್ದವು. ಅಲ್ಲಿ ಇವರಿಬ್ಬರ ಪರಿಚಯ, ಸ್ನೇಹ ಉಂಟಾಗಿತ್ತು. ಅದು ಪ್ರೇಮಕ್ಕೆ ತಿರುಗಿದ್ದು ಅವರಿಬ್ಬರ ವಿದ್ಯಾಭ್ಯಾಸದ ಟೈಮ್‌ನಲ್ಲಿ. ಇಬ್ಬರೂ ಹೆಚ್ಚು ಕಡಿಮೆ ಸಮಾನ ವಯಸ್ಸಿನವರು. ಮದುವೆಯಾದಾಗ ಯದುವೀರ್‌ಗೆ ಇಪ್ಪತ್ತನಾಲ್ಕು, ತ್ರಿಶಿಕಾಗೆ ಇಪ್ಪತ್ತಮೂರು.

ಇಬ್ಬರೂ ತಮ್ಮ ಪ್ರಾಥಮಿ, ಪ್ರೌಢ ಶಿಕ್ಷಣಗಳನ್ನು ಬೆಂಗಳೂರಿನಲ್ಲಿ ಮಾಡಿದವರು. ಯದುವೀರ್‌ ಅವರು ವಿದ್ಯಾನಿಕೇತನ ಸ್ಕೂಲಿನಲ್ಲಿ, ತ್ರಿಶಿಕಾ ಬಾಲ್ಡ್‌ವಿನ್‌ ಕಾಲೇಜು, ಜ್ಯೋತಿನಿವಾಸ್‌ ಕಾಲೇಜು, ಕೆನಡಿಯನ್ ಇಂಟರ್‌ನ್ಯಾಶನಲ್‌ ಸ್ಕೂಲಿನಲ್ಲಿ ಕಲಿತವರು. ನಂತರದ ಶಿಕ್ಷಣವನ್ನು ಅಮೆರಿಕದಲ್ಲಿ ಇಬ್ಬರೂ ಇದ್ದು ಓದಿದವರು. ಆಮ್‌ಹರ್ಸ್ಟ್‌ನ ಮಸಾಚುಸೆಟ್ಸ್‌ ಯೂನಿವರ್ಸಿಟಿಯಲ್ಲಿ ಯದುವೀರ್‌ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದರು. ಇಕಾನಮಿಕ್ಸ್ ಮತ್ತು ಇಂಗ್ಲಿಷ್‌ ಓದಿದರು.

ಅದೇ ಸಂದರ್ಭದಲ್ಲಿ ತ್ರಿಶಿಕಾ ಕೂಡ ಬಾಸ್ಟನ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದರು. ಅದೇ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು ಹಾಗೂ ಇಬ್ಬರಲ್ಲೂ ಪ್ರೀತಿ ಮೂಡಿತ್ತು ಎಂದು ಹೇಳಲಾಗುತ್ತದೆ. ನಂತರ ಇಬ್ಬರ ಹಿರಿಯರೂ ಅವರ ವಿವಾಹವನ್ನು ನಿಶ್ಚಯಿಸಿದರು.

ಯದುವೀರ್‌ ಅವರನ್ನು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ದತ್ತು ಸ್ವೀಕರಿಸಿಕೊಂಡಿದ್ದರು. ಯದುವೀರ್ ಮೈಸೂರಿನ ಮಹಾರಾಜರಾಗಿದ್ದರು. ತ್ರಿಶಿಕಾ ನೇರವಾಗಿ ಮೈಸೂರಿನ ಮಹಾರಾಣಿಯಾಗಿಯೇ ಅರಮನೆಗೆ ಕಾಲಿಟ್ಟರು. ನಾಲ್ಕು ದಶಕಗಳ ನಂತರ ಕಂಡ ಅದ್ಧುರಿಯ ಮದುವೆಗೆ ಮೈಸೂರು ಸಾಕ್ಷಿಯಾಯಿತು.

ಸರಳತೆಗೆ ಹೆಸರಾದ ಮೈಸೂರು ರಾಜ ಯದುವೀರ್ - ತ್ರಿಷಿಕಾ ದೇವಿ ರಾಯಲ್‌ ಲವ್‌ಸ್ಟೋರಿ! ...

ತ್ರಿಶಿಕಾ ಕಟ್ಟುನಿಟ್ಟಾದ ವೆಜೆಟೇರಿಯನ್. ಮೊಟ್ಟೆ ಕೂಡ ಸೇವಿಸುವುದಿಲ್ಲ. ಈಕೆ ಪ್ರಾಣಿಗಳನ್ನು ಇಷ್ಟಪಡುತ್ತಾರೆ. ಹೀಗಾಗಿ ಮಾಂಸಾಹಾರ ಸೇವಿಸಲು ಇಷ್ಟಪಡುವುದಿಲ್ಲ. ಮಹಾರಾಜರಾದರೋ ಆಗಲೋ ಈಗಲೋ ಎಂದು ಮಾಂಸ ಸೇವಿಸುವುದು ಉಂಟು.

ಅರಮನೆಯಲ್ಲಿ ಮಾಂಸಾಹಾರದ ಸೇವನೆ ಇಲ್ಲ. ಇಬ್ಬರ ದಿನಚರಿಯೂ ಹೆಚ್ಚುಕಡಿಮೆ ಒಂದೇ ರೀತಿ ಇದೆ. ಇಬ್ಬರೂ ರಾತ್ರಿ ಒಂಬತ್ತೂವರೆಗೆಲ್ಲ ಮಲಗಿಬಿಡುತ್ತಾರೆ. ಮೈಸೂರಿನ ಜೀವನ ಬೆಂಗಳೂರಿನ ಹಾಗಲ್ಲ ತಾನೆ. ಆದರೆ ಇಬ್ಬರೂ ಬೆಳಗ್ಗೆ ಐದು ಗಂಟೆಗೆಏ ಏಳುತ್ತಾರೆ. ಯದುವೀರ್‌ ಸೂರ್ಯನಮಸ್ಕಾರ ಮತ್ತು ಇತರ ಯೋಗಾಸನಗಳನ್ನು ಮಾಡುತ್ತಾರೆ. ತ್ರಿಶಿಕಾ ಕೂಡ ಯೋಗಾಸನ ಮಾಡುತ್ತಾರೆ. ದಿನಕ್ಕೊಮ್ಮೆ ಹನುಮಾನ್‌ ಚಾಲೀಸ್ ಪಠಿಸುತ್ತಾರೆ.

ಮಗ, ಯುವರಾಜನ ಆರೈಕೆ ಹಾಗೂ ಆಟಪಾಠ ಇದ್ದೇ ಇರುತ್ತೆ. ಇತ್ತೀಚೆಗೆ ಅರಮನೆಯಲ್ಲಿ ಯಾವುದೇ ಹಬ್ಬ ಆದರೂ ಅದರಲ್ಲಿ ಯುವರಾಜ ಆದ್ಯವೀರನ ಅಲಂಕಾರ, ಇತ್ಯಾದಿಗಳು ಕೂಡ ಪ್ರಮುಖ ಭಾಗವಾಗಿರ್ತವೆ. ಮಹಾರಾಜರ ಜೊತೆಗೆ ಮಹಾರಾಣಿ, ಯುವರಾಜ ಕೂಡ ಇದಕ್ಕೆಲ್ಲಾ ತಯಾರಾಗಬೇಕಿದೆ.

ಕ್ರಿಕೆಟ್ ಬ್ಯಾಟ್ ಹಿಡಿದು ಫೀಲ್ಡಿಗಿಳಿದ ಮೈಸೂರು ರಾಜಕುಮಾರಿ!

ತ್ರಿಶಿಕಾ ಅವರಿಗೆ ಒಳ್ಳೆಯ ಓದುವ ಹವ್ಯಾಸ ಇದೆ. ಅರಮನೆಯಲ್ಲಿ ಅವರದೇ ಆದ ಲೈಬ್ರೆರಿಯೂ ಇದೆ. ಯದುವೀರ್ ಕೂಡ ಚೆನ್ನಾಗಿ ಓದಿಕೊಂಡಿದ್ದಾರೆ ಹಾಗೂ ಈಗಲೂ ಓದುತ್ತಾರೆ.

ಮೈಸೂರಿನ ಒಡೆಯರ ಇತಿಹಾಸವೇ ಸಾಕ್ಟು ಒಂದುವಷ್ಟು ಇದೆ ಎನ್ನುತ್ತಾರೆ. ಪದವಿ ಮುಗಿಸಿದ ಬಳಿಕ ತ್ರಿಶಿಕಾ ಅವರಿಗೆ ಪಿಎಚ್ಡಿ ಮಾಡಬೇಕು ಎಂಬ ಆಸೆಯಿತ್ತು. ಆದರೆ ಅದು ಕೈಗೂಡಲಿಲ್ಲ. ಈಗ ಮಗು ಹುಟ್ಟಿದ ಬಳಿಕ ಸಂಸಾರದ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಇಂದಲ್ಲ ನಾಳೆಯಾದರೂ ಪಿಎಚ್‌ಡಿ ಮಾಡಿ ಮುಗಿಸಬೇಕು ಅನ್ನುವುದು ಅವರ ಕನಸು. ಹಾಗೇ ಈಗ ಅವರು ಆದಿವಾಸಿ ಮಕ್ಕಳ ಕುರಿತು ಅಧ್ಯಯನ ಮಾಡಿ ಪಿಎಚ್‌ಡಿ ಪಡೆಯಲು ಮುಂದಾಗಿದ್ದಾರೆ.