Asianet Suvarna News Asianet Suvarna News

ಕ್ವಾರಂಟೈನ್‌ನಲ್ಲಿದ್ದ ಮುಂಬೈ ವಲಸಿಗರ ಬಿಡುಗಡೆ

ಮುಂಬೈನಿಂದ ಬಂದು ಕೊರೋನಾ ಭೀತಿಯಲ್ಲಿ ಗ್ರಾಮದ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಆಗಿದ್ದ ವಲಸಿಗರನ್ನು ಬಿಡುಗಡೆ ಮಾಡಲಾಯಿತು. ಕಿಕ್ಕೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆಂಪೇಗೌಡ ಮುಂಬೈ ವಲಸಿಗರಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡಿ ಮಾತನಾಡಿ, 14 ದಿನಗಳ ಕಾಲ ಕ್ವಾರಂಟೈನ್‌ ಆಗಿ ಸಹಕರಿಸದ ಮುಂಬೈ ವಲಸಿಗರ ಬಗ್ಗೆ ಬೇಸರ ವ್ಯಕ್ತಪಡಿಸಿದರು.

Quarantined people in Mandya from mumbai released
Author
Bangalore, First Published Jun 2, 2020, 11:34 AM IST

ಮಂಡ್ಯ(ಜೂ. 02): ಮುಂಬೈನಿಂದ ಬಂದು ಕೊರೋನಾ ಭೀತಿಯಲ್ಲಿ ಗ್ರಾಮದ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಆಗಿದ್ದ ವಲಸಿಗರನ್ನು ಬಿಡುಗಡೆ ಮಾಡಲಾಯಿತು. ಕಿಕ್ಕೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆಂಪೇಗೌಡ ಮುಂಬೈ ವಲಸಿಗರಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡಿ ಮಾತನಾಡಿ, 14 ದಿನಗಳ ಕಾಲ ಕ್ವಾರಂಟೈನ್‌ ಆಗಿ ಸಹಕರಿಸದ ಮುಂಬೈ ವಲಸಿಗರ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಕೊರೋನಾ ಸೋಂಕು ಹರಡದಂತೆ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮವಾಗಿದೆ. ಗ್ರಾಮಕ್ಕೆ ತೆರಳಿದ ನಂತರ ಕೆಲವು ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್‌ ಆಗಬೇಕು. ಯಾರೂ ಕೂಡಾ ಅನವಶ್ಯಕವಾಗಿ ಮನೆಯಿಂದ ಹೊರಬಾರದು ಎಂದು ತಿಳಿಸಿದರು.

ಮಂಡ್ಯದಲ್ಲಿ ಒಂದೇ ದಿನ 15 ಪಾಸಿಟಿವ್ ಪ್ರಕರಣ: ಸಕ್ರಿಯ ಸೋಂಕಿತರ ಸಂಖ್ಯೆ 224ಕ್ಕೆ ಏರಿಕೆ

ಪ್ರತಿಯೊಬ್ಬರೂ ಪರಸ್ಪರ ಅಂತರ, ಶುಚಿತ್ವ, ಮಾಸ್ಕ್‌ ಧರಿಸಿಕೊಳ್ಳುವುದು, ಪೌಷ್ಟಿಕಾಂಶಭರಿತ ಆಹಾರ ಸೇವನೆಗೆ ಮುಂದಾಗಬೇಕು. ತಮ್ಮ ಆರೋಗ್ಯದಲ್ಲಿ ಸಮಸ್ಯೆಯಾದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಮೇಲೆ ನಿಗವಹಿಸಲು ಸಜ್ಜಾಗಿದ್ದಾರೆ. ಗ್ರಾಮದಲ್ಲಿನ ಎಲ್ಲರೂ ಮಾಸ್ಕ್‌ ಧರಿಸಿಕೊಳ್ಳುವುದು, ಪರಸ್ಪರ ಅಂತರ ಕಾಪಾಡಿಕೊಳ್ಳುವುದನ್ನು ಕೆಲವು ದಿನಗಳ ಕಾಲ ಕಡ್ಡಾಯವಾಗಿ ಪಾಲಿಸಲು ತಿಳಿಸಿ ಎಂದು ಸಲಹೆ ನೀಡಿದರು.

ಒಬ್ಬ ಸೋಂಕಿತನಿಂದ ಮೂರು ಜಿಲ್ಲೆಗಳಿಗೆ ಢವಢವ; ಬೆಚ್ಚಿ ಬೀಳಿಸಿದೆ ಟ್ರಾವೆಲ್ ಹಿಸ್ಟರಿ

ಕ್ವಾರಂಟೈನ್‌ನಲ್ಲಿದ್ದ ವೇಳೆ ಜಿಲ್ಲಾ, ತಾಲೂಕು ಆಡಳಿತ ಉತ್ತಮ ಸಹಕಾರ ನೀಡಿದೆ. ಊಟ, ವಸತಿ, ಶೌಚಾಲಯ ಸಮಸ್ಯೆ ಬಾರದಂತೆ ನೋಡಿಕೊಂಡಿದೆ. ಮಕ್ಕಳಿಗೆ ಸ್ವಲ್ಪವೂ ಭಯವಾಗದಂತೆ ಇರಲು ನೀಡಿದ ಎಲ್ಲರ ಸಹಕಾರ ಮರೆಯಲಾರೆವು ಎಂದು ವಲಸಿಗರು ತಿಳಿಸಿದರು. ಈ ವೇಳೆ ಕ್ವಾರಂಟೈನ್‌ ಆಗಿದ್ದ 20ಮಂದಿ ಕೈಗೆ ಕ್ವಾರಂಟೈನ್‌ ಸೀಲ್ ಹಾಕಲಾಯಿತು.

Follow Us:
Download App:
  • android
  • ios