ಮಂಡ್ಯ(ಜೂ. 02): ಮಂಡ್ಯದಲ್ಲಿ ಸೋಮವಾರ 15 ಮಂದಿಗೆ ಕೊರೋನಾ ಸೋಂಕು ಪಾಸಿಟಿವ್‌ ಬಂದಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ಸೋಂಕಿತರ ಸಂಖ್ಯೆ 285ಕ್ಕೆ ಏರಿದೆ. ಒಟ್ಟು ಬಿಡುಗಡೆಯಾದವರ ಒಟ್ಟು ಸಂಖ್ಯೆ 61 ಆಗಿದೆ. ಸಕ್ರಿಯ 224 ಪ್ರಕರಣಗಳಿವೆ. ಈ ದಿನ ಆಸ್ಪತ್ರೆಯಿಂದ ಯಾರು ಬಿಡುಗಡೆಯಾಗಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರದ 15 ಪ್ರಕರಣಗಳಲ್ಲಿ ಕೆ.ಆರ್‌. ಪೇಟೆ ತಾಲೂಕಿನ 10, ಪಾಂಡವಪುರ 1 ಹಾಗೂ ನಾಗಮಂಗಲ ತಾಲೂಕಿನ 4 ಮಂದಿ ಇದ್ದಾರೆ. ಈ ಮೂರು ತಾಲೂಕುಗಳಲ್ಲಿ ಸೋಂಕಿರುವ ಬಹುತೇಕರು ಮುಂಬೈನಿಂದ ಬಂದವರೇ ಆಗಿದ್ದಾರೆ. ಇವರೆಲ್ಲರನ್ನೂ ಸಾಂಸ್ಥಿಯ ಐಸೋಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ.

ಒಬ್ಬ ಸೋಂಕಿತನಿಂದ ಮೂರು ಜಿಲ್ಲೆಗಳಿಗೆ ಢವಢವ; ಬೆಚ್ಚಿ ಬೀಳಿಸಿದೆ ಟ್ರಾವೆಲ್ ಹಿಸ್ಟರಿ

ಒಬ್ಬ ಇಂದಿನ ಸೋಂಕಿತ ಕೊರೋನಾ ವಾರಿಯರ್ಸ್‌ ಒಬ್ಬರಾಗಿದ್ದಾರೆ. ಇದರಲ್ಲಿ 10 ಮಂದಿ ಪುರುಷರು, ಇಬ್ಬರು ಮಹಿಳೆಯರು, ಮೂವರು ಮಕ್ಕಳಿಗೆ ಸೋಂಕು ದೃಢವಾಗಿದೆ. ಇಬ್ಬರು ಸೋಂಕಿತರಿಗೆ ಯಾವ ಮೂಲಗಳಿಂದ ಕೊರೋನಾ ಪಾಸಿಟಿವ್‌ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. 20 ವರ್ಷದ ಯುವಕನಿಗೆ ಉಸಿರಾಟದ ತೊಂದರೆ ಇದೆ. ಎಲ್ಲರನ್ನು ಮಂಡ್ಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.