ಬೆಂಗಳೂರು(ಜು.11): ಬೆನ್ನು ಬಿಡದಂತೆ ಕೊರೋನಾ ಸೋಂಕು ನಗರ ಪೊಲೀಸರನ್ನು ಕಾಡುತ್ತಿದ್ದು, ಶುಕ್ರವಾರ ಒಂದೇ ದಿನ ನಗರ ಪೊಲೀಸ್‌ ಆಯುಕ್ತರ ಕಚೇರಿಯ 9 ಸಿಬ್ಬಂದಿ ಸೇರಿದಂತೆ ಒಟ್ಟು 23 ಪೊಲೀಸರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

"

ಸೋಂಕಿತರನ್ನು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಇನ್ಫೆಂಟ್ರಿ ರಸ್ತೆಯಲ್ಲಿರುವ ಆಯುಕ್ತರ ಕಚೇರಿಯನ್ನು ಜು.14ರವರೆಗೆ ಸೀಲ್‌ಡೌನ್‌ ಮಾಡಲಾಗಿದೆ. ಇದೇ ತಿಂಗಳ 5ರಂದು ಕಮಿಷನರ್‌ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೂ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಅಪರಾಧ ದಾಖಲಾತಿ ವಿಭಾಗ, ನಮ್ಮ 100, ಕಮಾಂಡೆಂಟ್‌ ಸೆಂಟರ್‌, ಆಡಳಿತ ವಿಭಾಗದ ಲಿಪಿಕಾರರು ಸೇರಿ 9 ಮಂದಿಗೆ ಸೋಂಕಿರುವುದು ದೃಢಪಟ್ಟಿದೆ.

ಕಜಕಿಸ್ತಾನದಲ್ಲಿ ಕೊರೋನಾಗಿಂತ ಗಂಭೀರ ಸೋಂಕು ಪತ್ತೆ: ಚೀನಾ

ಈ ಹಿನ್ನೆಲೆಯಲ್ಲಿ ಕಚೇರಿಯ ಆವರಣದಲ್ಲಿರುವ ಪರಿಹಾರ ಕೇಂದ್ರ, ಸೈಬರ್‌ ಕ್ರೈಂ ಪೊಲೀಸ್‌ ಠಾಣೆ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಮನೆಯಿಂದ ಅಥವಾ ಉಪವಿಭಾಗದ ಕಚೇರಿಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಆದೇಶ ಹೊರಡಿಸಿದ್ದಾರೆ.

ಪೊಲೀಸ್‌ ಕಂಟ್ರೋಲ್‌ ರೂಮ್ ಹಾಗೂ ಕಮಾಂಡೆಂಟ್‌ ಸೆಂಟರ್‌ಗಳಲ್ಲಿ ನಿಯಮಿತ ಸಿಬ್ಬಂದಿಗಳನ್ನು ಕರ್ತವ್ಯ ನಿರ್ವಹಿಸಬೇಕು. ಇದನ್ನು ಹೊರತುಪಡಿಸಿ ಕಮಿಷನರ್‌ ಕಚೇರಿಯ ಆವರಣದಲ್ಲಿ ಜು.15ರ ಬೆಳಗ್ಗೆ 11 ಗಂಟೆವರೆಗೆ ಯಾವುದೇ ಕೆಲಸ ನಿರ್ವಹಿಸುವಂತಿಲ್ಲ ಎಂಬ ಸೂಚನೆ ಆದೇಶ ಪತ್ರದಲ್ಲಿ ಉಲ್ಲೇಖವಾಗಿದೆ.

ತೆರಿಗೆ ಸಂಗ್ರಹದಲ್ಲಿ ವ್ಯತ್ಯಾಸ, ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಲು ಸಾಧ್ಯವಾಗಿಲ್ಲ: ಸಚಿವ ಜೋಶಿ

ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದ ಆರೋಪಿಯೊಬ್ಬನಿಗೆ ಸೋಂಕು ಹಬ್ಬಿದ್ದು, ಠಾಣೆಯನ್ನು ಸೀಲ್‌ಡೌನ್‌ ಮಾಡುವ ಸಾಧ್ಯತೆಯಿದೆ. ಇನ್ನು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆ 2, ಮಲ್ಲೇಶ್ವರ 1, ನಂದಿನಿ ಲೇಔಟ್‌ 1 ರಾಜಗೋಪಾಲನಗರ ಠಾಣೆಯ ಒಬ್ಬ ಸಿಬ್ಬಂದಿಗೆ ಸೋಂಕು ತಗುಲಿದೆ. ನಗರದಲ್ಲಿ ಈವರೆಗೆ 457 ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.