ಈ ಬಾರಿ ಗಣೇಶ ವಿಸರ್ಜನೆಗೆ ಕ್ಯುಆರ್ ಕೋಡ್ ಗೈಡ್..!
ಶಾಶ್ವತ ಕಲ್ಯಾಣಿಗಳು ಇಲ್ಲದ ಕೆರೆ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ. ನಗರದಲ್ಲಿ ಗಣೇಶ ಚತುರ್ಥಿಗೆ ಮಾರಾಟಕ್ಕಾಗಿ ಸಿದ್ದವಾಗಿರುವ ಮಣ್ಣಿನ ಗಣೇಶ ಮೂರ್ತಿಗಳು, ಜತೆಗೆ, ನಗರದ ಪ್ರಮುಖ ದೇವಸ್ಥಾನ, ಜಂಕ್ಷನ್, ಮುಖ್ಯ ರಸ್ತೆ ಸೇರಿದಂತೆ ವಿವಿಧ ಭಾಗದಲ್ಲಿ ಪ್ರತಿ ವಾರ್ಡ್ 3ರಿಂದ ಕಿರಂತೆ ಒಟ್ಟು 462 ಸ್ಥಳದಲ್ಲಿ ತಾತ್ಕಾಲಿಕ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಈ ವಿವರಗಳನ್ನೂ ಬಿಬಿಎಂಪಿ ನೀಡಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಡೆಯಬಹುದಾಗಿದೆ.
ಬೆಂಗಳೂರು(ಸೆ.06): ಗೌರಿ ಗಣೇಶದ ಹಬ್ಬದ ವೇಳೆ ಗಣೇಶ ಮೂರ್ತಿಗಳ ವಿಸರ್ಜನೆಗೆ 41 ಕೆರೆಗಳ ಶಾಶ್ವತ ಕಲ್ಯಾಣಿ ಸೇರಿದಂತೆ 462 ಸ್ಥಳಗಳಲ್ಲಿ ಮೊಬೈಲ್ ರ್ ಟ್ಯಾಂಕರ್ ವ್ಯವಸ್ಥೆಯನ್ನು ಹಾಗೂ ಆಯಾ ವಿಸರ್ಜನಾ ಸ್ಥಳಗಳಿಗೆ ನೇಮಿಸಲಾದ ನೋಡಲ್ ಅಧಿಕಾರಿಗಳ ವಿವರಗಳನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಾರ್ವಜನಿಕರು ಪಡೆಯಬಹುದಾಗಿದೆ.
ಹಲಸೂರು, ಸ್ಯಾಂಕಿ, ಯಡಿಯೂರು ಕೆರೆ, ಎಫ್ ಸಿಐ ಲೇಔಟ್, ಬಿ.ನಾರಾಯಣಪುರ ಲೇಔಟ್, ವಿಭೂತಿಪುರ ಕೆರೆ, ಚೆಲ್ಕೆರೆ, ಹೊರಮಾವು ಅಗರ ಕೆರೆ ಸೇರಿದಂತೆ ಒಟ್ಟು 41 ಕೆರೆಗಳ ಶಾಶ್ವತ ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಲ್ಲಿ 'ಗಲ್ಲಿ ಗಣೇಶ ಕೂರಿಸಲು 63 ಸಿಂಗಲ್ ವಿಂಡೋ ವ್ಯವಸ್ಥೆ' ಮಾಡಿದ ಬಿಬಿಎಂಪಿ!
ಶಾಶ್ವತ ಕಲ್ಯಾಣಿಗಳು ಇಲ್ಲದ ಕೆರೆ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ. ನಗರದಲ್ಲಿ ಗಣೇಶ ಚತುರ್ಥಿಗೆ ಮಾರಾಟಕ್ಕಾಗಿ ಸಿದ್ದವಾಗಿರುವ ಮಣ್ಣಿನ ಗಣೇಶ ಮೂರ್ತಿಗಳು, ಜತೆಗೆ, ನಗರದ ಪ್ರಮುಖ ದೇವಸ್ಥಾನ, ಜಂಕ್ಷನ್, ಮುಖ್ಯ ರಸ್ತೆ ಸೇರಿದಂತೆ ವಿವಿಧ ಭಾಗದಲ್ಲಿ ಪ್ರತಿ ವಾರ್ಡ್ 3ರಿಂದ ಕಿರಂತೆ ಒಟ್ಟು 462 ಸ್ಥಳದಲ್ಲಿ ತಾತ್ಕಾಲಿಕ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಈ ವಿವರಗಳನ್ನೂ ಬಿಬಿಎಂಪಿ ನೀಡಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಡೆಯಬಹುದಾಗಿದೆ. ಕ್ಯೂ ಆರ್ ಕೋಡ್ ಜತೆಗೆ ಬಿಬಿಎಂಪಿಯ ವೆಬ್ ಸೈಟ್ https://apps.bbmpgov.in/ganesh 2024/ ಗೆ ಭೇಟಿ ನೀಡಿ ಸಹ ಮಾಹಿತಿ ಪಡೆಯಬಹುದಾಗಿದೆ.
ಕಲ್ಯಾಣಿಗಳ ಬಳಿಕ ಸುರಕ್ಷತಾ ಕ್ರಮ:
ಗಣೇಶ ಮೂರ್ತಿ ವಿಸರ್ಜನೆಗೆ ಸಜ್ಜುಗೊಳಿಸಲಾಗಿರುವ 41 ಕೆರೆ ಹಾಗೂ ಕಲ್ಯಾಣಿಗಳ ಬಳಿ ಸಾರ್ವಜನಿಕರ ಸುರಕ್ಷತೆ ಸಾಗಿ ಮೂರ್ತಿಗಳನ್ನು ವಿಸರ್ಜಿಸಲು ಪ್ರತ್ಯೇಕ ತಂಡ, ಕಲ್ಯಾಣಿ ಬಳಿವಿದ್ಯುತ್ ದೀಪದ ವ್ಯವಸ್ಥೆ, ಬ್ಯಾರಿಕೇಡ್, ಧ್ವನಿವರ್ಧಕ ಮತ್ತು ಜುಗಾರದರು ಒಳಗೊಂಡಂತೆ ಎನ್‌ಡಿಆರ್‌ಎಫ್ ತಂಡ ನಿಯೋಜಿಸಲಾಗಿದೆ. ಜತೆಗೆ, ಆ್ಯಂಬುಲೆನ್ಸ್ ವ್ಯವಸ್ಥೆ, ವೈದ್ಯರು ಮತ್ತು ತುತ್ತೂ ಸತಿಯರನ್ನು ಪ್ರಾಥಮಿಕ ಚಿಕಿತ್ಸೆ ನೀಡಲು ನೇಮಿ ಸಲಾಗಿದೆ. ಬಿಬಿಎಂಪಿಯ ಎಲ್ಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಿ ಹೆಚ್ಚುವರಿ ಆ್ಯಂಬುಲೆನ್ಸ್ ಹಾಗೂ ವೈದ್ಯರ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 63 ಕಡೆ ಏಕಗವಾಕಿಯಲ್ಲಿ ಅನುಮತಿ: ನಗರದಲ್ಲಿ ಸಲು ಅನುಮತಿ ಪಡೆಯಲು ಬಿಬಿಎಂಪಿಯ 63 ಕಂದಾಯ ಉಪ ಕಚೇರಿಯಲ್ಲಿ ಏಕಗವಾಕ್ಷಿ ಕೇಂದ್ರ ಗಳನ್ನು ಸ್ಥಾಪಿಸಲಾಗಿದೆ.
ಕೇಂದ್ರಗಳಿಗೆ ಬಿಬಿಎಂಪಿ, ಪೊಲೀಸ್, ವೆಸ್ಕಾಂ ಹಾಗೂ ಅಗ್ನಿ ಶಾಮಕ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸಲು ಸಲ್ಲಿಕೆಯಾಗುವ ಅರ್ಜಿಗ ಳನ್ನು ಈ ಅಧಿಕಾರಿಗಳು ಪರಿಶೀಲನೆ ನಡೆಸಿ ಅನುಮತಿ ನೀಡಲಿದ್ದಾರೆ. ವಾರ್ಡ್‌ಾರು ಅಧಿಕಾರಿಗಳ ನೇಮಕ: ಗಣೇಶ ಚುತುರ್ಥಿ ಸಂದರ್ಭದಲ್ಲಿ ಜನರಿಗೆ ನೆರವಾಗಲು ಹಾಗೂ ಯಾವುದೇ ಗೊಂದಲಗಳ ಉಂಟಾಗದಿರಲು ಬಿಬಿಎಂ ಪ್ರಿಯ ಎಂಟೂ ವಲಯಗಳಿಗೆ ಒಬ್ಬರನ್ನು ಮೇಲುಸ್ತು ವಾರಿಯಂತೆ ಅಧಿಕಾರಿಯಗಳನ್ನು ನೇಮಿಸಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಗೆ ಸಂಬಂಧಿಸಿದಂತೆ ಬಿಬಿಎಂಪಿಯ ಪ್ರತಿ ವಾರ್ಡ್‌ಗೆ ಒಬ್ಬರಂತೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.
ಪರಿಸರಸ್ನೇಹಿ ಗಣೇಶನ ಪೂಜಿಸಿ
ಮಣ್ಣಿನ ಗಣಪನ ಪ್ರತಿಷ್ಠಾಪಿಸಿ ಪೂಜಿಸುವ ಜತೆಗೆ, ಪರಿಸರ ಸ್ನೇಹಿಯಾಗಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವಂತೆ ಸಾರ್ವಜನಿಕರಲ್ಲಿ ಬಿಬಿಎಂಪಿ ಮನವಿ ಮಾಡಿದೆ. ಸಾರ್ವಜನಿಕರು ತದ್ದು ಮನೆಯಲ್ಲಿ ಮೂರ್ತಿಯನ್ನು ವಿಸರ್ಜನೆಗೊಳಿಸಿ. ನಂತರ ಬರುವ ಮಣ್ಣನ್ನು ಕೈತೋಟ, ಹೂವಿನ ಕುಂಡಗಳಿಗೆ ಬಳಸಬಹುದಾಗಿದೆ.
ಗಂಗಾವತಿ: ಗಣೇಶ ವಿಸರ್ಜನೆ ವೇಳೆ ಮಸೀದಿ ಮುಂದೆ ಪೂಜೆ, ಪಿಎಸ್ಐ, ಮುಖ್ಯಪೇದೆ ಸಸ್ಪೆಂಡ್
ಕ್ರಿಮಿನಲ್ ಕೇಸ್
ರಾಸಾಯನಿಕ ಬಣ್ಣಗಳು, ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಯ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ವಸ್ತುಗಳನ್ನು ಬಳಸಿ ತಯಾರಿಸುವ, ಮಾರಾಟ ಮಾರುವವರಿಗೆ ದಂಡ ವಿಧಿಸಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.
ವಲಯವಾರು ಗಣೇಶ ಮೂರ್ತಿ ವಿಸರ್ಜನೆ ಮೊಬೈಲ್ ಟಾಂಕ್ ಹಾಗೂ ಕಲಾಣಿ ವಿವರ
ವಲಯ ಮೊಬೈಲ್ ಟ್ಯಾಂಕರ್ ಕಲ್ಯಾಣಿ
ಪೂರ್ವ 138 01
ಪಶ್ಚಿಮ 84 01
ದಕ್ಷಿಣ 43 02
ಮಹದೇವಪುರ 40 14
ದಾಸರಹಳ್ಳಿ 19 01
ಬೊಮ್ಮನಹಳ್ಳಿ 60 05
ಆರ್‌ಆರ್‌ನಗರ 74 07
ಯಲಹಂಣಕ 04 10
ಒಟ್ಟು 462 41