ಚಾಮರಾಜನಗರ: ಮದ್ಯದ ಜತೆ ವಿಷ ಸೇವಿಸಿ ಇಬ್ಬರು ಆತ್ಮೀಯ ಸ್ನೇಹಿತರು ಆತ್ಮಹತ್ಯೆಗೆ ಯತ್ನ, ಓರ್ವ ಸಾವು
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿ ನಡೆದ ಘಟನೆ. ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಚಿಂತಾಜನಕ.
ಚಾಮರಾಜನಗರ(ಜೂ.08): ಮದ್ಯದ ಜೊತೆ ವಿಷ ಸೇವಿಸಿ ಇಬ್ಬರು ಆತ್ಮೀಯ ಸ್ನೇಹಿತರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿ ಇಂದು(ಗುರುವಾರ) ನಡೆದಿದೆ. ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ ಅಂತ ತಿಳಿದು ಬಂದಿದೆ.
ಕೊಳ್ಳೆಗಾಲ ತಾಲೂಕಿನ ಹಿತ್ತಲದೊಡ್ಡಿಯ ನಾಗೇಂದ್ರ (24) ಎಂಬಾತನ ಮೃತಪಟ್ಟಿದ್ದಾರೆ. ಮಧುವನಹಳ್ಳಿಯ ಮನು ಅಸ್ವಸ್ಥನಾಗಿದ್ದಾನೆ.
ಕೊಡಗು: ವಿರಾಜಪೇಟೆಯಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ, ಕಾರಣ ನಿಗೂಢ?
ಇಬ್ಬರೂ ಆತ್ಮೀಯ ಗೆಳೆಯರು ತಮ್ಮ ಎದೆಯ ಮೇಲೆ ಪರಸ್ಪರರ ಹೆಸರು ಹಚ್ಚೆ ಹಾಕಿಸಿಕೊಂಡಿದ್ದರು. ತೀವ್ರ ಅಸ್ವಸ್ಥಗೊಂಡಿರುವ ಮನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.